ಬೆಂಗಳೂರಿನಲ್ಲಿ ನಡೆದ ರೋಡ್‌ಶೋನಲ್ಲಿ ಪ್ರಧಾನಿ ನರೇಂದ್ರ ಮೋದಿ 
ದೇಶ

ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್‌ಶೋ; ವಾರಣಾಸಿಯಲ್ಲಿ 'ಪಿಂಡ ದಾನ' ವಿಧಿ ನೆರವೇರಿಸಿದ ಕುಟುಂಬ ಸದಸ್ಯರು

ಪ್ರಧಾನಿ ನರೇಂದ್ರ ಮೋದಿ ಅವರ ಕಿರಿಯ ಸಹೋದರ ಪಂಕಜ್ ಮೋದಿ ಮತ್ತು ಇತರ ಕುಟುಂಬ ಸದಸ್ಯರು ದಶಾಶ್ವಮೇಧ ಘಾಟ್‌ನಲ್ಲಿ ತಮ್ಮ ದಿವಂಗತ ತಾಯಿ ಹೀರಾಬೆನ್ ಮತ್ತು ತಂದೆ ದಾಮೋದರ್ ದಾಸ್ ಮೋದಿ ಅವರ 'ಪಿಂಡ ದಾನ' ವಿಧಿಗಳನ್ನು ನೆರವೇರಿಸಿದರು.

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದಲ್ಲಿ ರೋಡ್‌ಶೋ ನಡೆಸುವಲ್ಲಿ ಬ್ಯುಸಿ ಆಗಿದ್ದರೆ, ಅತ್ತ ಮೋದಿ ಅವರ ಕಿರಿಯ ಸಹೋದರ ಪಂಕಜ್ ಮೋದಿ ಮತ್ತು ಇತರ ಕುಟುಂಬ ಸದಸ್ಯರು ದಶಾಶ್ವಮೇಧ ಘಾಟ್‌ನಲ್ಲಿ ತಮ್ಮ ದಿವಂಗತ ತಾಯಿ ಹೀರಾಬೆನ್ ಮತ್ತು ತಂದೆ ದಾಮೋದರ್ ದಾಸ್ ಮೋದಿ ಅವರ 'ಪಿಂಡ ದಾನ' ವಿಧಿಗಳನ್ನು ನೆರವೇರಿಸಿದರು.

ಕಳೆದ ವರ್ಷ ಡಿಸೆಂಬರ್ 30ರಂದು ಪ್ರಧಾನಿಯವರ ತಾಯಿ ನಿಧನರಾಗಿದ್ದರು. ಅವರ ಸಹೋದರ ಮತ್ತು ಇತರ ಕುಟುಂಬ ಸದಸ್ಯರು ಗಂಗಾ ತೀರದಲ್ಲಿ ಆಚರಣೆಗಳನ್ನು ಪೂರ್ಣಗೊಳಿಸಿದ್ದರು.

ಹಿಂದೂ ನಂಬಿಕೆಯ ಪ್ರಕಾರ 'ಪಿಂಡ ದಾನ' ಎಂಬುದು ಅಗಲಿದ ಆತ್ಮಕ್ಕೆ ಗೌರವ ಸಲ್ಲಿಸುವ ಆಚರಣೆಯಾಗಿದೆ.

ಪಂಡಿತ್ ರಾಜು ಝಾ ಅವರು ಮೋದಿಯವರ ಕುಟುಂಬಕ್ಕೆ ನೆರವು ನೀಡಿ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು.

ಪಂಕಜ್ ಮೋದಿ ಮತ್ತು ಅವರ ಸಂಬಂಧಿಕರು ಗಂಗಾ ಆರತಿಯಲ್ಲಿ ಕೂಡ ಪಾಲ್ಗೊಂಡು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT