ಕೇರಳ ಸ್ಟೋರಿ-ಖುಷ್ಬೂ ಮತ್ತು ಕಪಿಲ್ ಸಿಬಲ್ 
ದೇಶ

ದಿ ಕೇರಳ ಸ್ಟೋರಿ ವಿವಾದ: ಕಪಿಲ್‌ ಸಿಬಲ್‌, ಖುಷ್ಬೂ ಸುಂದರ್‌ ಟ್ವೀಟ್‌ ವಾರ್, 'ಸತ್ಯಾಂಶದಿಂದ ಹತಾಶರಾಗಬೇಡಿ' ಎಂದ ನಟಿ!

ದಿ ಕೇರಳ ಸ್ಟೋರಿ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಮತ್ತು ಬಿಜೆಪಿ ನಾಯಕಿ ಹಾಗೂ ನಟಿ ಖುಷ್ಬೂ ಸುಂದರ್‌ ನಡುವೆ ಟ್ವೀಟ್‌ ವಾರ್ ಆರಂಭವಾಗಿದ್ದು, ಸತ್ಯಾಂಶದಿಂದ ಹತಾಶರಾಗಬೇಡಿ ಎಂದು ಖುಷ್ಬೂ ತಿರುಗೇಟು ನೀಡಿದ್ದಾರೆ.

ನವದೆಹಲಿ: ದಿ ಕೇರಳ ಸ್ಟೋರಿ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಮತ್ತು ಬಿಜೆಪಿ ನಾಯಕಿ ಹಾಗೂ ನಟಿ ಖುಷ್ಬೂ ಸುಂದರ್‌ ನಡುವೆ ಟ್ವೀಟ್‌ ವಾರ್ ಆರಂಭವಾಗಿದ್ದು, ಸತ್ಯಾಂಶದಿಂದ ಹತಾಶರಾಗಬೇಡಿ ಎಂದು ಖುಷ್ಬೂ ತಿರುಗೇಟು ನೀಡಿದ್ದಾರೆ.

ಹೌದು.. ಚಿತ್ರಕಥೆ ಮೂಲಕವೇ ವಿವಾದ ಎಬ್ಬಿಸಿರುವ ‘ದಿ ಕೇರಳ ಸ್ಟೋರಿ‘ ಸಿನಿಮಾ ವಿಚಾರವಾಗಿ ತಮಿಳುನಾಡು ಬಿಜೆಪಿ ನಾಯಕಿ ಖುಷ್ಬೂ ಸುಂದರ್‌ ಮತ್ತು ರಾಜ್ಯಸಭಾ ಸಂಸದ ಕಪಿಲ್‌ ಸಿಬಲ್‌ ನಡುವೆ ಟ್ವೀಟ್‌ ಸಮರ ನಡೆದಿದೆ. ‘ರಾಜಕೀಯ ಲಾಭಕ್ಕಾಗಿ ದ್ವೇಷವನ್ನು ಉತ್ತೇಜಿಸುತ್ತಿದ್ದೀರಿ‘ ಎಂದು ಕಪಿಲ್‌ ಸಿಬಲ್‌ ಖುಷ್ಬೂ ಸುಂದರ್ ವಿರುದ್ಧ ಕಿಡಿಕಾರಿದರೆ, ‘ನೀವು ಎಷ್ಟು ಹತಾಶೆಗೆ ಒಳಗಾಗಿದ್ದೀರಾ ಎಂದು ನಿಮ್ಮ ಸಮರ್ಥನೆ ತೋರಿಸುತ್ತಿದೆ‘ ಎಂದು ಖುಷ್ಬೂ ಸುಂದರ್‌ ತಿರುಗೇಟು ನೀಡಿದ್ದಾರೆ.

‘ಕೇರಳ ಸ್ಟೋರಿ‘ ಸಿನಿಮಾ ಪ್ರದರ್ಶನವನ್ನು ತಮಿಳುನಾಡು ಸರ್ಕಾರ ರದ್ದುಪಡಿಸಿದ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಖುಷ್ಬೂ ಸುಂದರ್‌, ’ಜನರು ಏನು ನೋಡಬೇಕು ಎಂಬುವುದನ್ನು ಅವರೇ ನಿರ್ಧರಿಸಲಿ. ಅವರು ಏನು ನೋಡಬೇಕು ಎಂಬುವುದನ್ನು ನೀವು ನಿರ್ಧರಿಸಲು ಸಾಧ್ಯವಿಲ್ಲ. ಸಿನಿಮಾ ಪ್ರದರ್ಶನವನ್ನು ರದ್ದುಗೊಳಿಸಲು ತಮಿಳುನಾಡು ಸರ್ಕಾರ ಕುಂಟು ನೆಪಗಳನ್ನು ಮುಂದಿಡುತ್ತಿದೆ. ಇದು ನೋಡಲೇ ಬೇಕಾದ ಸಿನಿಮಾ ಎಂದು ಜನರಿಗೆ ತಿಳಿಸಿದ್ದಕ್ಕೆ ಧನ್ಯವಾದಗಳು' ಎಂದು ಬರೆದಿದ್ದಾರೆ.

ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಕಪಿಲ್‌ ಸಿಬಲ್‌, 'ಜನರು ಏನನ್ನು ನೋಡಬೇಕೆಂದು ಅವರೇ ನಿರ್ಧರಿಸಲಿ ಎಂದು ನೀವು (ಖುಷ್ಬು) ಹೇಳಿದ್ದಿರಿ. ಹಾಗಾದರೆ ಅಮೀರ್ ಖಾನ್ ಅವರ ‘ಪಿಕೆ', ಶಾರುಖ್ ಖಾನ್ ಅವರ 'ಪಠಾಣ್‌' ಹಾಗೂ 'ಬಾಜಿರಾವ್ ಮಸ್ತಾನಿ' ಸಿನಿಮಾಗಳ ಪ್ರದರ್ಶನದ ವಿರುದ್ಧ ಏಕೆ ಪ್ರತಿಭಟನೆ ನಡೆಸಬೇಕಿತ್ತು. ನಿಮ್ಮ ರಾಜಕೀಯ ಬೆಂಬಲವು ದ್ವೇಷಕ್ಕೆ ಉತ್ತೇಜನ ನೀಡುತ್ತಿದೆ‘ ಎಂದು ಹೇಳಿದರು.

ಕಪಿಲ್‌ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಖುಷ್ಬೂ ಸುಂದರ್‌, ‘ಕಪಿಲ್ ಅವರೇ.. ಸತ್ಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ನೀವು ಮಾತನಾಡಿರುವುದನ್ನು ನೋಡಿ ತುಂಬಾ ದುಃಖವಾಗಿದೆ. ನೀವು ಹೇಳಿದ ಮೇಲಿನ ಯಾವುದೇ ಸಿನಿಮಾವನ್ನು ಬಿಜೆಪಿ ಸರ್ಕಾರ ನಿಷೇಧಿಸಿಲ್ಲ. ಒಂದು ವೇಳೆ ನೀವು ನಿಮ್ಮ ಸುಳ್ಳುಗಳನ್ನು ಸಮರ್ಥಿಸಿಕೊಂಡು ಪ್ರತಿಭಟನೆ ಮಾಡುತ್ತಿರುವವನ್ನು ಬೆಂಬಲಿಸಿ ಅವರನ್ನು ಬಿಜೆಪಿಗೆ ಹೋಲಿಸುತ್ತಿದ್ದೀರಾ ಎಂದರೆ ನೀವು ಎಷ್ಟು ಹತಾಶರಾಗಿದ್ದೀರಿ ಎಂದು ತೋರಿಸುತ್ತದೆ‘ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್