ದೇಶ

ಕೇಂದ್ರ-ದೆಹಲಿ ಸರ್ಕಾರ ನಡುವೆ ಅಧಿಕಾರ ಹಂಚಿಕೆ ವಿವಾದ: ಸುಪ್ರೀಂ ತೀರ್ಪು ಕಠಿಣ ಸಂದೇಶ ಎಂದ ಎಎಪಿ

Lingaraj Badiger

ನವದೆಹಲಿ: ಕೇಂದ್ರ ಮತ್ತು ದೆಹಲಿ ಸರ್ಕಾರದ ನಡುವಿನ ಅಧಿಕಾರ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಸ್ವಾಗತಿಸಿದ ಆಡಳಿತರೂಢ ಎಎಪಿ, ಇದು "ದೊಡ್ಡ ಗೆಲುವು" ಎಂದು  ಗುರುವಾರ ಶ್ಲಾಘಿಸಿದೆ.

ಸರ್ವಾನುಮತದ ತೀರ್ಪಿನಲ್ಲಿ, ದೆಹಲಿ ಸರ್ಕಾರ, ಸೇವೆಗಳ ಮೇಲೆ ಶಾಸಕಾಂಗ ಮತ್ತು ಕಾರ್ಯಕಾರಿ ಅಧಿಕಾರವನ್ನು ಹೊಂದಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ತೀರ್ಪನ್ನು ಸ್ವಾಗತಿಸಿ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಎಎಪಿ, "ಚುನಾಯಿತ ಸರ್ಕಾರಕ್ಕೆ ಅಧಿಕಾರಿಗಳ ವರ್ಗಾವಣೆ-ಪೋಸ್ಟ್ ಮಾಡುವ ಅಧಿಕಾರವಿರುತ್ತದೆ. ಅಧಿಕಾರಿಗಳು ಚುನಾಯಿತ ಸರ್ಕಾರದ ಮೂಲಕ ಮಾತ್ರ ಕೆಲಸ ಮಾಡುತ್ತಾರೆ" ಎಂದು ಹೇಳಿದೆ.

ದೆಹಲಿಯ ಜನರ ಕೆಲಸ ಮಾಡುವ ಅಧಿಕಾರಿಗಳನ್ನು ತಡೆಯುವ ಅಧಿಕಾರ ಲೆಫ್ಟಿನೆಂಟ್ ಗವರ್ನರ್ ಗೆ ಇಲ್ಲ ಎಂದು ಆಡಳಿತ ಪಕ್ಷ ಹೇಳಿದೆ.

ಸುಪ್ರೀಂ ಕೋರ್ಟ್ ತೀರ್ಪನ್ನು "ಐತಿಹಾಸಿಕ ನಿರ್ಧಾರ" ಎಂದು ಕರೆದಿರುವ ಎಎಪಿ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರು, ಇದು ಕೇಂದ್ರಕ್ಕೆ ಕಠಿಣ ಸಂದೇಶವನ್ನು ರವಾನಿಸಿದೆ ಎಂದು ಹೇಳಿದ್ದಾರೆ.

SCROLL FOR NEXT