ಸಾಂದರ್ಭಿಕ ಚಿತ್ರ 
ದೇಶ

''ಕೋಮುವಾದಿ ವಿಡಿಯೋ"ನಿರ್ಬಂಧಿಸಲು ಟ್ವಿಟರ್, ಗೂಗಲ್ ಗೆ ದೆಹಲಿ ಹೈಕೋರ್ಟ್ ನಿರ್ದೇಶನ

ಮುಸ್ಲಿಂ ವ್ಯಕ್ತಿಯೊಬ್ಬ ಮಹಿಳೆಯನ್ನು ಇಸ್ಲಾಂಗೆ ಮತಾಂತರಗೊಳಿಸುವಂತೆ ಒತ್ತಾಯಿಸಿದ ಸುದ್ದಿ ವರದಿಗಳು ಮತ್ತು ವಿಡಿಯೋ ಲಿಂಕ್‌ಗಳನ್ನು ನಿರ್ಬಂಧಿಸುವಂತೆ ದೆಹಲಿ ಹೈಕೋರ್ಟ್ ಕೆಲವು ಮಾಧ್ಯಮ ಸಂಸ್ಥೆಗಳು ಮತ್ತು ಟ್ವಿಟರ್ ಮತ್ತು ಗೂಗಲ್ ಮತ್ತಿತರ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನಿರ್ದೇಶನ ನೀಡಿದೆ. 

ನವದೆಹಲಿ: ಮುಸ್ಲಿಂ ವ್ಯಕ್ತಿಯೊಬ್ಬ ಮಹಿಳೆಯನ್ನು ಇಸ್ಲಾಂಗೆ ಮತಾಂತರಗೊಳಿಸುವಂತೆ ಒತ್ತಾಯಿಸಿದ ಸುದ್ದಿ ವರದಿಗಳು ಮತ್ತು ವಿಡಿಯೋ ಲಿಂಕ್‌ಗಳನ್ನು ನಿರ್ಬಂಧಿಸುವಂತೆ ದೆಹಲಿ ಹೈಕೋರ್ಟ್ ಕೆಲವು ಮಾಧ್ಯಮ ಸಂಸ್ಥೆಗಳು ಮತ್ತು ಟ್ವಿಟರ್ ಮತ್ತು ಗೂಗಲ್ ಮತ್ತಿತರ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನಿರ್ದೇಶನ ನೀಡಿದೆ. 

ಆನ್‌ಲೈನ್‌ನಲ್ಲಿ ಹಾಕಲಾಗಿರುವ ಸುದ್ದಿ ಮತ್ತು ವೀಡಿಯೊಗಳ ಕುರಿತು ವೀಕ್ಷಕರು ಮಾಡುತ್ತಿರುವ ಕಾಮೆಂಟ್‌ಗಳಿಂದ ತೀವ್ರ ಬೆದರಿಕೆ ಇದೆ ಎಂಬುದನ್ನು ಪರಿಗಣಿಸಿ ನ್ಯಾಯಮೂರ್ತಿ ಪ್ರತಿಬಾ ಎಂ ಸಿಂಗ್ ಈ ಆದೇಶ ಹೊರಡಿಸಿದರು. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ ಮತ್ತು ಗೂಗಲ್ ಎಲ್ ಎಲ್ ಸಿ ಮತ್ತು ಟ್ವಿಟರ್ ಇಂಕ್ ಗೆ  ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. 

ಸುದರ್ಶನ್ ನ್ಯೂಸ್‌ನ ಅಧ್ಯಕ್ಷ ಸುರೇಶ್ ಚವ್ಹಾಂಕೆ, ಒಡಿಶಾ ಟೆಲಿವಿಷನ್ ಲಿಮಿಟೆಡ್, ಪಿಟ್ಟಿ ಮೀಡಿಯಾ ಎಲ್ ಎಲ್ ಪಿ, ವಾಯ್ಸ್ ಆಫ್ ದಿ ನೇಷನ್ ಮಾಲೀಕರಾದ ಭಾರತ್ ಪ್ರಕಾಶನ (ದೆಹಲಿ) ಲಿಮಿಟೆಡ್ ಗೂ ನೋಟಿಸ್ ನೀಡಲಾಗಿದೆ. 
ಅತ್ಯಾಚಾರ ಪ್ರಕರಣವನ್ನು ಎದುರಿಸುತ್ತಿರುವ ಪುರುಷ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸಲು ಕಕ್ಷಿದಾರರಿಗೆ ಹೈಕೋರ್ಟ್ ಸೂಚಿಸಿದ್ದು, ಮೇ 24 ರಂದು ಹೆಚ್ಚಿನ ವಿಚಾರಣೆಯನ್ನು ನಿಗದಿಪಡಿಸಿದೆ. 

ಖ್ಯಾತ ಶಾಸ್ತ್ರೀಯ ಸಂಗೀತ ಶಿಕ್ಷಕನೆಂದು ಹೇಳಿಕೊಳ್ಳುವ ಅರ್ಜಿದಾರ ಅಜ್ಮತ್ ಅಲಿ ಖಾನ್, ತನ್ನ ವಿರುದ್ಧ ದೆಹಲಿ ಮಹಿಳೆ ಏಪ್ರಿಲ್ 19 ರಂದು ದಾಖಲಿಸಿರುವ ಎಫ್ ಐಆರ್ ಕುರಿತು ಆನ್‌ಲೈನ್ ಗಳಲ್ಲಿ ಪ್ರಸಾರವಾದ ಸುದ್ದಿಗಳು ಮತ್ತು ವಿಡಿಯೋಗಳನ್ನು ತೆಗೆದುಹಾಕಬೇಕು ಎಂದು ಕೋರಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT