ಸಾಂದರ್ಭಿಕ ಚಿತ್ರ 
ದೇಶ

ಗುಜರಾತ್: ಕೆರೆಯಲ್ಲಿ ಈಜಲು ತೆರಳಿದ್ದ ಐವರು ಬಾಲಕರು ಮುಳುಗಿ ಸಾವು

ಕೆರೆಯಲ್ಲಿ ಈಜಲು ತೆರಳಿದ್ದ ಐವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.

ಅಹ್ಮದಾಬಾದ್‌: ಕೆರೆಯಲ್ಲಿ ಈಜಲು ತೆರಳಿದ್ದ ಐವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.

ಗುಜರಾತ್ ನ ಅಹಮದಾಬಾದ್‌ ನ ಕೃಷ್ಣ ಸಾಗರ ಕೆರೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಐವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯಕ್ಷ ದರ್ಶಿಗಳ ಮಾಹಿತಿಯಂತೆ ಕೃಷ್ಣ ಸಾಗರ ಕೆರೆಯಲ್ಲಿ ಇಬ್ಬರು ಬಾಲಕರು ಈಜುತ್ತಿದ್ದಾಗ ನೀರಿನಲ್ಲಿ ಮುಳುಗಿದ್ದಾರೆ. ಇವರನ್ನು ರಕ್ಷಿಸಲು ಹೋದ ಮೂವರು ಬಾಲಕರು ಕೂಡ ಮುಳುಗಿ ಮೃತಪಟ್ಟಿದ್ದಾರೆ. ಮೃತ ಬಾಲಕರು 16 ರಿಂದ 17 ವರ್ಷದೊಳಗಿನವರಾಗಿದ್ದಾರೆ. ಘಟನೆ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೃಷ್ಣ ಸಾಗರ ಕೆರೆಯಲ್ಲಿ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಮೃತದೇಹಗಳನ್ನು ಹೊರ ತೆಗೆದು ಅವರು ಕುಟುಂಬಗಳಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಏರ್ ಇಂಡಿಯಾ ಟರ್ಬುಲೆನ್ಸ್: ಪೈಲಟ್ ಗಾಂಜಾ ಸೇವಿಸಿದ್ದು ದೃಢ- ವರದಿಗಳು

ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ: ಕರ್ನಾಟಕದ 6 ಕಾರ್ಮಿಕರು ಸೇರಿ 9 ಮಂದಿ ದುರ್ಮರಣ

ಪಾಕ್‌ನಲ್ಲಿ ವಿಧ್ವಂಸ: ಕರಾಚಿಯಲ್ಲಿ ಪ್ರಧಾನ ಸೇನಾ ಕಚೇರಿ ಮೇಲೆ ಭೀಕರ ಗುಂಡಿನ ದಾಳಿ, ಓರ್ವ ಸೈನಿಕ ಸಾವು!

ಜಾರ್ಖಂಡ್‌ಗೆ ಏಕೆ ಹೋಗಲಿಲ್ಲ? ಸಂಸತ್ತಿನ ಆವರಣದಲ್ಲಿ ಬಿಜೆಪಿ ಸಂಸದನ ಮಾತಿಗೆ ತಬ್ಬಿಬ್ಬಾದ ಪ್ರಿಯಾಂಕಾ ವಾದ್ರಾ, Video

ವಿಧಾನಸಭೆಗೆ ಆಗಸ್ಟ್ 14 ರಂದು ಹೊಸ ಸ್ಪೀಕರ್ ಆಯ್ಕೆ