ಕಪಿಲ್ ಸಿಬಲ್ 
ದೇಶ

ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ: ಮುಂದಿನ ಐದು ವರ್ಷ ಜನರ ಹೃದಯ ಗೆಲ್ಲಬೇಕು: ಕಪಿಲ್ ಸಿಬಲ್

ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ದಿಗ್ವಿಜಯ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ  ರಾಜ್ಯಸಭಾ ಸಂಸದ ಕಪಿಲ್ ಸಿಬಲ್, ಮುಂದಿನ ಐದು ವರ್ಷಗಳ ಕಾಲ ರಾಜ್ಯದಲ್ಲಿ ಮುಕ್ತ, ಪ್ರಾಮಾಣಿಕ ಮತ್ತು ತಾರತಮ್ಯರಹಿತವಾಗಿ ಆಡಳಿತ ನಡೆಸುವ ಮೂಲಕ "ಜನರ ಹೃದಯ ಗೆಲ್ಲಬೇಕು" ಎಂದು ಒತ್ತಾಯಿಸಿದ್ದಾರೆ. 

ನವದೆಹಲಿ: ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ದಿಗ್ವಿಜಯ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ  ರಾಜ್ಯಸಭಾ ಸಂಸದ ಕಪಿಲ್ ಸಿಬಲ್, ಮುಂದಿನ ಐದು ವರ್ಷಗಳ ಕಾಲ ರಾಜ್ಯದಲ್ಲಿ ಮುಕ್ತ, ಪ್ರಾಮಾಣಿಕ ಮತ್ತು ತಾರತಮ್ಯರಹಿತವಾಗಿ ಆಡಳಿತ ನಡೆಸುವ ಮೂಲಕ ಜನರ ಹೃದಯ ಗೆಲ್ಲಬೇಕು ಎಂದು ಒತ್ತಾಯಿಸಿದ್ದಾರೆ. 

ಈ ಕುರಿತು ಇಂದು ಟ್ವೀಟ್ ಮಾಡಿರುವ ಸಿಬಲ್, "ಕರ್ನಾಟಕ ಚುನಾವಣೆ ಗೆಲ್ಲುವುದು ಕಠಿಣ. ಜನರ ಹೃದಯ ಗೆಲ್ಲುವುದು ಕಠಿಣ! ಮುಂದಿನ 5 ವರ್ಷಗಳ ಕಾಲ ಮುಕ್ತ, ಪ್ರಾಮಾಣಿಕ, ತಾರತಮ್ಯರಹಿತರಾಗಿ ಜನರ ಹೃದಯ ಗೆಲ್ಲಿರಿ" ಎಂದು ಸಲಹೆ ನೀಡಿದ್ದು, ಇದ್ಯಾವುದೂ ಇಲ್ಲದ ಕಾರಣ ಬಿಜೆಪಿ ಸೋತಿದೆ ಎಂದಿದ್ದಾರೆ. 

ಚುನಾವಣಾ ಫಲಿತಾಂಶ ಬಗ್ಗೆ ನಿನ್ನೆಯೂ ಟ್ವೀಟ್ ಮಾಡಿದ್ದ ಸಿಬಲ್, ಪ್ರಧಾನಿ ಸೋತರು, ಕರ್ನಾಟಕದ ಜನರು ಗೆದ್ದಿದ್ದಾರೆ. ಇಲ್ಲ: 40% ಭ್ರಷ್ಟಾಚಾರ, ಕೇರಳ ಕಥೆ, ವಿಭಜಕ ರಾಜಕೀಯ, ದುರಹಂಕಾರ, ಸುಳ್ಳು, ಕಾಂಗ್ರೆಸ್ ಗೆಲುವಿಗೆ ನೆರವಾಗಿವೆ ಎಂದು ಅವರು ಹೇಳಿದ್ದರು.

ಯುಪಿಎ 1 ಮತ್ತು 2 ರ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಸಿಬಲ್ ಕಳೆದ ವರ್ಷ ಮೇ ತಿಂಗಳಲ್ಲಿ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರ ಸದಸ್ಯರಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಹೈದರಾಬಾದ್ ನೀಡಿದ 220 ರನ್ ಟಾರ್ಗೆಟ್ ಬೆನ್ನತ್ತಿ ಗೆದ್ದ ಪಂಜಾಬ್ ಕಿಂಗ್ಸ್!

ಹಳ್ಳ ಹಿಡೀತಾ ಸಂಧಾನ ಮಾತುಕತೆ?: ಹಾರ್ಮೊಜ್ ದಾಟಿದ ಅಮೆರಿಕದ 2 ಯುದ್ಧ ನೌಕೆಗಳು!

ಒಂದು ಕಡೆ ಪಾಕಿಸ್ತಾನದಲ್ಲಿ ಶಾಂತಿ ಮಾತುಕತೆ, ಮತ್ತೊಂದು ಕಡೆ ಲೆಬನಾನ್‌ ಮೇಲೆ ದಾಳಿ ಮುಂದುವರೆಸಿದ ಇಸ್ರೇಲ್

SCROLL FOR NEXT