ದಿಗ್ವಿಜಯ್ ಸಿಂಗ್ 
ದೇಶ

ಹಿಂದುತ್ವ ಧರ್ಮವಲ್ಲ, ಬಜರಂಗ ದಳ ಗೂಂಡಾಗಳ ಗ್ಯಾಂಗ್: ದಿಗ್ವಿಜಯ್ ಸಿಂಗ್

ಹಿಂದುತ್ವ' ಒಂದು ಧರ್ಮ"ಅಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಸೋಮವಾರ ಪ್ರತಿಪಾದಿಸಿದ್ದಾರೆ.

ಜಬಲ್ ಪುರ: ಹಿಂದುತ್ವ' ಒಂದು ಧರ್ಮ"ಅಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಸೋಮವಾರ ಪ್ರತಿಪಾದಿಸಿದ್ದಾರೆ. ಒಪ್ಪದವರ ಮೇಲೆ ದಾಳಿ ಮಾಡುವುದರಲ್ಲಿ ತೊಡಗಿರುವ ಹಿಂದುತ್ವ ಧರ್ಮವೇ ಅಲ್ಲಾ ಆದರೆ, ಸಾಮರಸ್ಯ ಹಾಗೂ ಎಲ್ಲಾ ವರ್ಗದ ಕಲ್ಯಾಣ ಬಯಸುವ ಸನಾತನ ಧರ್ಮದಲ್ಲಿ ನಂಬಿಕೆಯಿದೆ ಎಂದು ಹೇಳಿದ್ದಾರೆ. 

ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್ತಿನ ಯುವ ಘಟಕವಾದ ಬಜರಂಗದಳವನ್ನು ಗೂಂಡಾಗಳ ಗ್ಯಾಂಗ್ ಎಂದು ಕರೆದರು.  ಹಿಂದೂತ್ವವನ್ನು ಧರ್ಮ ಎಂದು ಪರಿಗಣಿಸಲು ಸಾಧ್ಯವಿಲ್ಲ. ಧರ್ಮ ರಕ್ಷಣೆಗೆ ಜಯ, ಅಧರ್ಮದ ವಿನಾಶದಂತಹ ಘೋಷಣೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದರು. 

ಸನಾತನ ಧರ್ಮ ಪ್ರತಿಯೊಬ್ಬರ ಕಲ್ಯಾಣ ಬಯಸುತ್ತದೆ. ಆದರೆ, ಹಿಂದೂತ್ವದಲ್ಲಿ ಹಾಗಲ್ಲ. ಅದನ್ನು ಒಪ್ಪದವರನ್ನು ದೊಣ್ಣೆಯಿಂದ ಹೊಡೆಯಲಾಗುತ್ತದೆ. ಮನೆಗಳನ್ನು ನಾಶಪಡಿಸಲಾಗುತ್ತದೆ ಎಂದು ಆರೋಪಿಸಿದ ಸಿಂಗ್, ಬಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ  ಬಜರಂಗದಳವನ್ನು ಭಜರಂಗ ಬಲಿ (ಹನುಮಾನ್) ನೊಂದಿಗೆ ಹೋಲಿಸುತ್ತಿರುವುದು ನೋವಿನ ಸಂಗತಿ. ಇದು ದೇವರಿಗೆ ಅಗೌರವ ತೋರಿಸುವಂತಹದ್ದು ಎಂದು ಅವರು, ನೀವು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT