ದೇಶ

ಕರ್ನಾಟಕದೊಂದಿಗೆ ರಾಜಸ್ಥಾನ ಹೋಲಿಸಿದ ಸಚಿನ್ ಪೈಲಟ್, ಭ್ರಷ್ಟಾಚಾರ ಕುರಿತ ಭರವಸೆ ಈಡೇರಿಸುವಂತೆ ಒತ್ತಾಯ

Nagaraja AB

ಜೈಪುರ: ರಾಜಸ್ಥಾನ ಕಾಂಗ್ರೆಸ್ ಹಿರಿಯ ಮುಖಂಡ ಸಚಿನ್ ಪೈಲಟ್, ಕರ್ನಾಟಕದಲ್ಲಿನ ಪಕ್ಷದ ಗೆಲುವನ್ನು ಉಲ್ಲೇಖಿಸುವ ಮೂಲಕ ಹಿಂದಿನ ಬಿಜೆಪಿ ಆಡಳಿತದಲ್ಲಿ ನಡೆರುವ ಭ್ರಷ್ಟಾಚಾರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಭ್ರಷ್ಟಾಚಾರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ  ಗೆಹ್ಲೋಟ್ ಮತ್ತು ಪಕ್ಷದ ಉನ್ನತ ನಾಯಕರನ್ನು ಒತ್ತಾಯಿಸುವ ನಿಟ್ಟಿನಲ್ಲಿ ಸಚಿನ್ ಪೈಲಟ್ ನಡೆಸಿದ ಐದು ದಿನ ಜನ ಸಂಘರ್ಷ ಯಾತ್ರೆ ಸೋಮವಾರ ಅಂತ್ಯವಾಯಿತು. 

ಗೆಹ್ಲೋಟ್ ಅವರನ್ನು ಮೂಲೆಗುಂಪು ಮಾಡುವ ಪ್ರಯತ್ನದಲ್ಲಿರುವ ಪೈಲಟ್,  2018 ರ ರಾಜಸ್ಥಾನ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಭ್ರಷ್ಟಾಚಾರದ ಆರೋಪಗಳ ಮೇಲೆ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ. ಜೈಪುರ ರ್‍ಯಾಲಿಗೂ ಮುನ್ನ ಪಿಟಿಐನೊಂದಿಗೆ ಮಾತನಾಡಿದ ಪೈಲಟ್, ಕರ್ನಾಟಕದಲ್ಲಿ ಈಗಿರುವ ಪರಿಸ್ಥಿತಿಯನ್ನು ರಾಜಸ್ಥಾನದೊಂದಿಗೆ ಹೋಲಿಸಿದ್ದಾರೆ. 

“ಕರ್ನಾಟಕದ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದೇವೆ. ಕಾಂಗ್ರೆಸ್‌ಗೆ ಜನಾದೇಶ ಸಿಕ್ಕಿದ್ದು, ಬಿಜೆಪಿಯ ಬೊಮ್ಮಾಯಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಐದು ವರ್ಷಗಳ ನಂತರ ಜನರು ನಮ್ಮ ಮಾತು ಕೇಳುತ್ತಾರೆಯೇ? ಎಂದು ಪ್ರಶ್ನಿಸಿದ ಅವರು, ಇದು ರಾಜಸ್ಥಾನದ ಪರಿಸ್ಥಿತಿ. ಹಾಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಬಯಸುತ್ತೇನೆ ಎಂದು ಅವರು ಹೇಳಿದರು.

SCROLL FOR NEXT