ದೇಶ

ವರ್ಷಾಂತ್ಯ ಅಥವಾ 2024 ಕ್ಕೆ ಗಗನ್ ಯಾನ್ ಮಿಷನ್: ಕೇಂದ್ರ ಸಚಿವ ಜಿತೇಂದ್ರ ಸಿಂಗ್

Srinivas Rao BV

ನವದೆಹಲಿ: ಭಾರತದ ಮಾನವ ರಹಿತ ಗಗನಯಾನ ಬಾಹ್ಯಾಕಾಶ ನೌಕೆ ಉಡಾವಣೆಯ ಯೋಜನೆಯನ್ನು ವರ್ಷಾಂತ್ಯ ಅಥವಾ 2024 ಕ್ಕೆ ಜಾರಿ ಮಾಡಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. 

ಇದು ಮಾನವ ಸಹಿತ ಬಾಹ್ಯಾಕಾಶ ನೌಕೆ ಉಡಾವಣೆಗೂ ಮುನ್ನ ನಡೆಯುವ ಪ್ರಕ್ರಿಯೆಯಾಗಿದ್ದು ವ್ಯೋಮ ಮಿತ್ರ ಎಂಬ ಲೇಡಿ ರೋಬೋಟ್ ನ್ನು ಕಳಿಸಲಾಗುತ್ತದೆ.

ಮೊದಲ ಮಿಷನ್ ಸಂಪೂರ್ಣ ಮಾನವ ರಹಿತವಾಗಿರಲಿದ್ದು, ಎರಡನೆಯ ಮಿಷನ್ ನಲ್ಲಿ ವ್ಯೋಮ ಮಿತ್ರ ಎಂಬ ಲೇಡಿ ರೋಬೋವನ್ನು ಕಳಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಗಗನ್ ಯಾನ್ ಯೋಜನೆಯ ಪ್ರಗತಿಯ ಬಗ್ಗೆ ತಿಳಿಸಿರುವ ಸಚಿವರು,  ಮೊದಲ ಬಾರಿಗೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಭಾರತೀಯ ಮಿಷನ್‌ಗೆ ಹೋಗಲಿದ್ದಾರೆ ಎಂದು ಹೇಳಿದರು. "ರಾಕೇಶ್ ಶರ್ಮಾ ಮಿಷನ್‌ ಗೆ ಹೋಗಿದ್ದರು ಆದರೆ ಇದು ರಷ್ಯಾದ ಮಿಷನ್ ಆಗಿತ್ತು. ಇದು ಭಾರತದ ಗಗನಯಾನವಾಗಿದ್ದು, ಸ್ಥಳೀಯ ತಾಂತ್ರಿಕ ಜ್ಞಾನ ಮತ್ತು ಸ್ಥಳೀಯ ನಿಧಿಯೊಂದಿಗೆ ಸ್ಥಳೀಯ ಮಿಷನ್ ಆಗಿದೆ. ಈ ಯೋಜನೆಗೆ ಹಣ ಲಭ್ಯವಾಗುವಂತೆ ಮಾಡಿದ್ದಕ್ಕಾಗಿ ನಾವು ಪ್ರಧಾನಿಗೆ ಧನ್ಯವಾದ ಹೇಳಬೇಕು. COVID-19 ಕಾರಣಕ್ಕಾಗಿ ಮಿಷನ್ ವಿಳಂಬವಾಯಿತು ಎಂದು ಸಚಿವರು ಹೇಳಿದರು.

SCROLL FOR NEXT