ಮನೀಶ್ ಸಿಸೋಡಿಯಾ 
ದೇಶ

ಎರಡು ಮೊಬೈಲ್ ಫೋನ್‌ಗಳನ್ನು ನಾಶಪಡಿಸಿರುವುದಾಗಿ ಮನೀಶ್ ಸಿಸೋಡಿಯಾ ತಪ್ಪೊಪ್ಪಿಗೆ: ಮೂಲಗಳು

ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೇಳಿದ್ದ ಎರಡು ಮೊಬೈಲ್ ಪೋನ್‌ಗಳನ್ನು ನಾಶಪಡಿಸಿರುವುದಾಗಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೇಳಿದ್ದ ಎರಡು ಮೊಬೈಲ್ ಪೋನ್‌ಗಳನ್ನು ನಾಶಪಡಿಸಿರುವುದಾಗಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

2022ರ ಜುಲೈ 22ರಂದು ಕೇಂದ್ರ ಗೃಹ ಸಚಿವಾಲಯವು (ಎಂಎಚ್ಎ) ಅಬಕಾರಿ ಹಗರಣದಲ್ಲಿ ತನಿಖೆ ಪ್ರಾರಂಭಿಸಲು ಸಿಬಿಐಗೆ ನಿರ್ದೇಶನ ನೀಡಿತು. ಆ ದಿನದಿಂದ ಸಿಸೋಡಿಯಾ ಹೊಸ ಮೊಬೈಲ್ ಫೋನ್ ಬಳಸಲಾರಂಭಿಸಿದರು ಎಂದು ಮೂಲಗಳು ಹೇಳಿವೆ.

ಪ್ರಕರಣದ ತನಿಖೆ ನಡೆಸುತ್ತಿರುವಾಗ, ಸಿಸೋಡಿಯಾ ಅವರು 2020ರ ಜನವರಿ 1 ಮತ್ತು 2022ರ ಆಗಸ್ಟ್ 19 ರ ನಡುವೆ ಮೂರು ವಿಭಿನ್ನ ಮೊಬೈಲ್ ಫೋನ್‌ಗಳನ್ನು ಬಳಸುತ್ತಿದ್ದರು ಎಂದು ಸಿಬಿಐಗೆ ತಿಳಿದುಬಂದಿದೆ. 2022ರ ಆಗಸ್ಟ್ 19 ರಂದು, ತನಿಖಾ ಸಂಸ್ಥೆಯು ಶೋಧ ಕಾರ್ಯಾಚರಣೆಯನ್ನು ನಡೆಸಿತು ಮತ್ತು ಸಿಸೋಡಿಯಾ ಅವರಿಂದ ಒಂದು ಫೋನ್ ಅನ್ನು ವಶಪಡಿಸಿಕೊಂಡಿತು.

ಸಿಸೋಡಿಯಾ ಅವರಿಂದ ವಶಪಡಿಸಿಕೊಂಡ ಮೊಬೈಲ್ ಫೋನ್ ಅನ್ನು ಅವರು 2022ರ ಜುಲೈ 22 ರಿಂದ ಬಳಸುತ್ತಿದ್ದರು ಎಂದು ನಾವು ಪತ್ತೆ ಹಚ್ಚಿದ್ದೇವೆ. ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಎಂಎಚ್‌ಎ ನಮಗೆ ಸೂಚಿಸಿದ ದಿನಾಂಕ ಇದು ಎಂದು ಸಿಬಿಐ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ವಿಚಾರಣೆ ವೇಳೆ ಸಿಸೋಡಿಯಾ ಅವರು ಎರಡು ಮೊಬೈಲ್ ಫೋನ್‌ಗಳನ್ನು ನಾಶಪಡಿಸಿರುವುದಾಗಿ ತನಿಖಾ ಸಂಸ್ಥೆಯ ಎದುರು ಒಪ್ಪಿಕೊಂಡಿದ್ದಾರೆ. ಇದಕ್ಕೂ ಮೊದಲು, ನಾನು ಎರಡು ಸೆಲ್ ಫೋನ್‌ಗಳನ್ನು ಬಳಸುತ್ತಿದ್ದೆ ಅದನ್ನು ನಾಶಪಡಿಸಲಾಗಿದೆ ಎಂದು ಸಿಸೋಡಿಯಾ ಹೇಳಿರುವುದಾಗಿ ವರದಿಯಾಗಿದೆ. 

ಎರಡು ಮೊಬೈಲ್ ಫೋನ್‌ಗಳಿಗೆ ಸಂಬಂಧಿಸಿದಂತೆ ಸಿಸೋಡಿಯಾ ಅವರಿಗೆ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 91 ರ ನೋಟಿಸ್ ಸಹ ನೀಡಲಾಗಿದೆ ಮತ್ತು ಪ್ರತಿಕ್ರಿಯೆಯಾಗಿ ಅವರು ಸತ್ಯವನ್ನು ಒಪ್ಪಿಕೊಂಡರು ಎಂದು ಮೂಲಗಳು ತಿಳಿಸಿವೆ.

ಸದ್ಯ, ಸಿಸೋಡಿಯಾ ಅವರು ಬಂಧನದಲ್ಲಿದ್ದು, ಅವರ ಹಲವಾರು ಜಾಮೀನು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

SCROLL FOR NEXT