ದೇಶ

ಆರ್ಯನ್ ಖಾನ್ ಬಂಧನ ಪ್ರಕರಣ: ಸಮೀರ್ ವಾಂಖೆಡೆ ಬಳಿ 22 ಲಕ್ಷ ರೂ ಮೌಲ್ಯದ ರೋಲೆಕ್ಸ್ ವಾಚ್, 4 ದುಬಾರಿ ಫ್ಲಾಟ್ ಗಳು ಪತ್ತೆ!

Srinivasamurthy VN

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಬಂಧಿಸಿರುವ ಮಾಜಿ ಎನ್ ಸಿಬಿ ಅಧಿಕಾರಿ ಬಗ್ಗೆ ದಿನದಿಂದ ದಿನಕ್ಕೆ ಹೊಸ ಹೊಸ ಮಾಹಿತಿಗಳು ಹೊರಬೀಳುತ್ತಿವೆ. 

ಇದೀಗ ಹೊರ ಬರುತ್ತಿರುವ ಹೊಸ ಮಾಹಿತಿಯ ಪ್ರಕಾರ ಮಾಡಿ ಅಧಿಕಾರಿ ಸಮೀರ್ ವಾಂಖೆಡೆ ಕುಟುಂಬ ಸಮೇತ ಹಲವು ವಿದೇಶ ಪ್ರವಾಸ ಕೈಗೊಂಡಿದ್ದರು. ಇದಲ್ಲದೆ, ಅವರು ಅಕ್ರಮ ಆಸ್ತಿಯನ್ನು ಹೊಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಪ್ರಸ್ತುತ ಅವರು ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಯನ್ನು ಎದುರಿಸುತ್ತಿದ್ದು.  ಸಮೀರ್ ವಾಂಖೆಡೆ ಮತ್ತು ಇತರರು ಶಾರುಖ್ ಖಾನ್ ಕುಟುಂಬದಿಂದ 25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ. ಹಣ ಸಿಗದಿದ್ದರೆ ಆರ್ಯನ್ ಖಾನ್ ನನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಅದೇ ಸಮಯದಲ್ಲಿ, ಆರ್ಯನ್ ಖಾನ್ ಮತ್ತು ಅವರ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಹೆಸರನ್ನು ಕೊನೆಯ ಕ್ಷಣದಲ್ಲಿ ಸೇರಿಸಲಾಗಿದೆ ಎಂದು ಎನ್‌ಸಿಬಿಯ ವಿಜಿಲೆನ್ಸ್ ವಿಭಾಗದ ವರದಿ ಹೇಳುತ್ತದೆ. ಈ ಪಟ್ಟಿಯಿಂದ ಇತರ ಕೆಲವು ಶಂಕಿತರ ಹೆಸರನ್ನು ಸಹ ತೆಗೆದುಹಾಕಲಾಗಿದೆ. ದಾಳಿಯ ವೇಳೆ ಒಬ್ಬ ಶಂಕಿತ ವ್ಯಕ್ತಿಯಿಂದ ರೋಲಿಂಗ್ ಪೇಪರ್‌ಗಳನ್ನು ವಶಪಡಿಸಿಕೊಂಡಿದ್ದರೂ, ಅವನನ್ನು ಬಿಡುಗಡೆ ಮಾಡಲಲಾಯಿತು ಎಂದು ವರದಿ ಹೇಳಿದೆ.

ಸಿಸಿಟಿವಿ ದೃಶ್ಯಾವಳಿ
ತನಿಖಾ ಸಂಸ್ಥೆ ಸಂಗ್ರಹಿಸಿದ್ದ ಎನ್‌ಸಿಬಿ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳು ಹಾಳಾಗಿದ್ದು, ಎನ್‌ಸಿಬಿಯ ಮುಂಬೈ ತಂಡ ಸಲ್ಲಿಸಿದಂತೆ ಆರ್ಯನ್ ಖಾನ್‌ನನ್ನು ಎನ್‌ಸಿಬಿ ಕಚೇರಿಗೆ ಕರೆತಂದ ರಾತ್ರಿಯ ಡಿವಿಆರ್ ಮತ್ತು ಹಾರ್ಡ್ ಕಾಪಿ ವಿಭಿನ್ನವಾಗಿತ್ತು ಎಂದು ವರದಿ ಹೇಳಿದೆ.

6 ದೇಶಗಳಿಗೆ ಪ್ರಯಾಣ
2017 ರಿಂದ 2021 ರವರೆಗೆ ಅಂದರೆ ಐದು ವರ್ಷಗಳಲ್ಲಿ ಸಮೀರ್ ವಾಂಖೆಡೆ ಮತ್ತು ಅವರ ಕುಟುಂಬ ಆರು ವಿದೇಶಿ ಪ್ರವಾಸಗಳನ್ನು ಮಾಡಿದ್ದಾರೆ ಎನ್ನಲಾಗಿದ್ದು, ಯುಕೆ, ಐರ್ಲೆಂಡ್, ಪೋರ್ಚುಗಲ್, ದಕ್ಷಿಣ ಆಫ್ರಿಕಾ ಮತ್ತು ಮಾಲ್ಡೀವ್ಸ್ಗೆ ಪ್ರವಾಸ ಮಾಡಿದ್ದ ದಾಖಲೆಗಳು ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ. ಇಲ್ಲಿ ಅವರು 55 ದಿನಗಳನ್ನು ಕಳೆದು, 8.75 ಲಕ್ಷ ರೂ. ಇಷ್ಟು ಹಣವನ್ನು ವಿಮಾನ ಟಿಕೆಟ್‌ಗಳಿಗೆ ಮಾತ್ರವೇ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ.

22 ಲಕ್ಷ ಮೌಲ್ಯದ ರೋಲೆಕ್ಸ್ ವಾಚ್ ಖರೀದಿ
ಸಮೀರ್ ವಾಂಖೆಡೆ ಅವರ ದುಬಾರಿ ವಾಚ್‌ಗಳು ಮತ್ತು ಇತರ ಆಸ್ತಿಗಳ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಇದು ಅವರ ಅಸಮಾನ ಆಸ್ತಿಯ ಭಾಗವಾಗಿದೆ. ವಾಂಖೆಡೆ ಅವರ ಬಳಿ ದುಬಾರಿ ರೋಲೆಕ್ಸ್ ವಾಚ್ ಕೂಡ ಇದ್ದು, ಎಂಆರ್‌ಪಿಗಿಂತ ಕಡಿಮೆ ಬೆಲೆಗೆ ಅವರಿಗೆ ಮಾರಾಟ ಮಾಡಲಾಗಿತ್ತು. ವಾಚ್‌ನ ಬೆಲೆ 22 ಲಕ್ಷ ರೂಪಾಯಿ ಆದರೆ ಅವರು ಅದನ್ನು 17 ಲಕ್ಷ ರೂಪಾಯಿಗಳಿಗೆ ಖರೀದಿಸಿದ್ದಾರೆ. ಅವರು ಮುಂಬೈನಲ್ಲಿ ನಾಲ್ಕು ಫ್ಲಾಟ್‌ಗಳು ಮತ್ತು ವಾಶಿಮ್‌ನಲ್ಲಿ 41.688 ಎಕರೆ ಭೂಮಿಯನ್ನು ಹೊಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಾಂಖೆಡೆ ಬಳಿ 5 ಫ್ಲಾಟ್‌ಗಳು
ಮುಂಬೈ ಮಾತ್ರವಲ್ಲದೇ ಗೋರೆಗಾಂವ್‌ನಲ್ಲಿ 2.45 ಕೋಟಿ ವೆಚ್ಚದ ಐದನೇ ಫ್ಲಾಟ್‌ಗೆ 82.8 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ಸಮೀರ್ ವಾಂಖೆಡೆ ಹೇಳಿಕೊಂಡಿದ್ದಾರೆ. ಮದುವೆಗೂ ಮುನ್ನ 1.25 ಕೋಟಿ ನೀಡಿ ಪತ್ನಿ ಖರೀದಿಸಿದ ಫ್ಲಾಟ್ ಬಗ್ಗೆಯೂ ಉಲ್ಲೇಖವಿದೆ. ಆದರೆ, ವಾಂಖೆಡೆ ಮತ್ತು ಅವರ ಪತ್ನಿಯ ಆದಾಯ ತೆರಿಗೆ ರಿಟರ್ನ್ಸ್ ಅವರ ವಾರ್ಷಿಕ ಆದಾಯ 45,61,460 ರೂ ಆಗಿದೆ ಎಂದು ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.

SCROLL FOR NEXT