ದೇಶ

ರಾಜಸ್ಥಾನ ಅಪಘಾತದ ನಂತರ ಮಿಗ್ -21 ಯುದ್ಧ ವಿಮಾನ ಹಾರಾಟ ನಿಷೇಧಿಸಿದ ಐಎಎಫ್

Lingaraj Badiger

ನವದೆಹಲಿ: ಈ ತಿಂಗಳ ಆರಂಭದಲ್ಲಿ ರಾಜಸ್ಥಾನದಲ್ಲಿ ಸಂಭವಿಸಿದ ಅಪಘಾತದ ನಂತರ ಭಾರತೀಯ ವಾಯುಪಡೆ(ಐಎಎಫ್) ಮಿಗ್ -21 ಯುದ್ಧ ವಿಮಾನಗಳ ಹಾರಾಟವನ್ನು ಸಂಪೂರ್ಣ ನಿಷೇಧಿಸಿದೆ.

ಅನ್ನು ತಪಾಸಣೆ ನಡೆಸುವವರೆಗೆ ಮತ್ತು ಈ ತಿಂಗಳ ಆರಂಭದಲ್ಲಿ ರಾಜಸ್ಥಾನದಲ್ಲಿ ಅಪಘಾತದ ಹಿಂದಿನ ಕಾರಣಗಳ ಬಗ್ಗೆ ತನಿಖೆಗಳನ್ನು ಕಂಡುಹಿಡಿಯುವವರೆಗೆ ನೆಲಸಮಗೊಳಿಸಿದೆ.

ಮೇ 8 ರಂದು ಸೂರತ್‌ಗಢದ ವಾಯುನೆಲೆಯಿಂದ ಮಿಗ್ -21 ಬೈಸನ್ ಯುದ್ಧ ವಿಮಾನ ಹನುಮಾನ್‌ಗಢದ ಹಳ್ಳಿಯೊಂದರಲ್ಲಿ ಪತನಗೊಂಡಿತ್ತು. ಈ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದರು. ಇದಕ್ಕೂ ಮುನ್ನ ಇಂತಹ ಹಲವು ಅಪಘಾತಗಳು ದಾಖಲಾಗಿದ್ದು, ಇದರಲ್ಲಿ ಪೈಲಟ್‌ಗಳು ಪ್ರಾಣ ಕಳೆದುಕೊಂಡಿದ್ದಾರೆ.

ಪದೇಪದೆ ಅಪಘಾತಗಳಿಗೆ ಗುರಿಯಾಗುತ್ತಿರುವ ಮಿಗ್ 21 ವಿಮಾನಗಳ ಹಾರಾಟವನ್ನು, ಸಂಪೂರ್ಣ ತಪಾಸಣೆ ನಡೆಸುವವರೆಗೆ ಮತ್ತು ರಾಜಸ್ಥಾನದಲ್ಲಿ ಸಂಭವಿಸಿದ ಅಪಘಾತದ ಹಿಂದಿನ ಕಾರಣಗಳ ಬಗ್ಗೆ ತನಿಖೆ ನಡೆಸುವವರೆಗೆ ತಾತ್ಕಾಲಿಕವಾಗಿ ಐಎಎಫ್, ಮಿಗ್-21 ವಿಮಾನಗಳ ಹಾರಾಟ ನಿಷೇಧಿಸಿದೆ.

"ತನಿಖೆ ಪೂರ್ಣಗೊಳ್ಳುವವರೆಗೆ ಮತ್ತು ಅಪಘಾತಕ್ಕೆ ಕಾರಣಗಳನ್ನು ಕಂಡುಹಿಡಿಯುವವರೆಗೆ MiG-21 ಹಾರಾಟ ನಿಷೇಧಿಸಲಾಗಿದೆ" ಎಂದು ಹಿರಿಯ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT