ಮಿಗ್ 21 ವಿಮಾನ (ಸಂಗ್ರಹ ಚಿತ್ರ) 
ದೇಶ

MiG-21 ಯುದ್ಧ ವಿಮಾನಗಳ ಹಾರಾಟ ನಿಷೇಧ: ಭಾರತೀಯ ವಾಯುಪಡೆಯ ಮಹತ್ವದ ನಿರ್ಧಾರ

ಸತತ ಅಪಘಾತಗಳ ಹಿನ್ನಲೆಯಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಮಿಗ್‌-21 ಯುದ್ಧ ವಿಮಾನಗಳನ್ನು ಮುಂದಿನ ಆದೇಶದ ವರೆಗೆ ಹಾರಾಟ ನಡೆಸದೇ ಇರಲು ತೀರ್ಮಾನಿಸಿದೆ.

ನವದೆಹಲಿ: ಸತತ ಅಪಘಾತಗಳ ಹಿನ್ನಲೆಯಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಮಿಗ್‌-21 ಯುದ್ಧ ವಿಮಾನಗಳನ್ನು ಮುಂದಿನ ಆದೇಶದ ವರೆಗೆ ಹಾರಾಟ ನಡೆಸದೇ ಇರಲು ತೀರ್ಮಾನಿಸಿದೆ.

ಮೇ 8ರಂದು ರಾಜಸ್ಥಾನದಲ್ಲಿ ನಡೆದಿದ್ದ ಯುದ್ಧ ವಿಮಾನ ಪತನದಲ್ಲಿ ಮೂವರು ಅಸುನೀಗಿದ್ದರು. ಯಾವ ಕಾರಣದಿಂದಾಗಿ ಈ ಅಪಘಾತ ಉಂಟಾಗಿದೆ ಎಂದು ತಿಳಿಯುವ ವರೆಗೆ ಮಿಗ್‌-21 ಯುದ್ಧ ವಿಮಾನಗಳ ಪೂರ್ಣ ಸ್ವಾಡ್ರನ್‌ ಅನ್ನು ಬಳಕೆ ಮಾಡದೇ ಇರಲು ಭಾರತೀಯ ವಾಯುಪಡೆ ಶನಿವಾರ ನಿರ್ಧರಿಸಿದ್ದಾರೆ.

ಎರಡು ವಾರಗಳ ಹಿಂದೆ ಮಿಗ್‌–21 ವಿಮಾನವೊಂದು ರಾಜಸ್ಥಾನದ ಹನುಮಾನಗಢದ ಮನೆಯೊಂದರ ಮೇಲೆ ಪತನವಾಗಿತ್ತು. ಘಟನೆಯಲ್ಲಿ ಮನೆಯಲ್ಲಿದ್ದ ಮೂವರು ಮಹಿಳೆಯರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.  ‘ಎಲ್ಲಾ ಮಿಗ್‌ ವಿಮಾನಗಳನ್ನೂ ತಾಂತ್ರಿಕ ಪರಿಶೀಲನೆಗೆ ಕಳುಹಿಸಲಾಗುತ್ತದೆ. ಸಂಬಂಧಪಟ್ಟ ತಜ್ಞರ ತಂಡವು ಒಪ್ಪಿಗೆ ಸೂಚಿಸಿದ ಬಳಿಕವಷ್ಟೇ ಅವುಗಳ ಮರು ಹಾರಾಟಕ್ಕೆ ಅನುಮತಿ ನೀಡಲಾಗುತ್ತದೆ’ ಎಂದು ಮೂಲಗಳು ಹೇಳಿವೆ. 

1960ರಲ್ಲಿ ಮಿಗ್‌-21 ಸ್ಕ್ವಾಡ್ರನ್‌ಗಳು ಭಾರತೀಯ ವಾಯುಪಡೆಗೆ ಸೇರ್ಪಡೆಯಾದವು. 2025ರ ವೇಳೆಗೆ ಎಲ್ಲಾ ಮಿಗ್‌-21 ವಿಮಾನಗಳಿಗೆ ನಿವೃತ್ತಿ ನೀಡಲು ಭಾರತೀಯ ವಾಯುಸೇನೆ ಯೋಜಿಸಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!