ದೇಶ

ಲಂಚ ಪ್ರಕರಣ: 2ನೇ ದಿನವೂ ಸಮೀರ್ ವಾಂಖೆಡೆಗೆ 5 ಗಂಟೆಗೂ ಹೆಚ್ಚು ಕಾಲ ಸಿಬಿಐ ವಿಚಾರಣೆ

Lingaraj Badiger

ಮುಂಬೈ: ಕ್ರೂಸ್‌ ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್‌ ಖಾನ್ ಬಿಡುಗಡೆ 25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ, ಮುಂಬೈ ಎನ್‌ಸಿಬಿ ಮಾಜಿ ಮುಖ್ಯಸ್ಥ ಸಮೀರ್ ವಾಂಖೆಡೆ ಅವರನ್ನು ಸತತ ಎರಡನೇ ದಿನವಾದ ಭಾನುವಾರ ಐದು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿತು.

ಭಾರತೀಯ ಕಂದಾಯ ಸೇವೆ(ಐಆರ್‌ಎಸ್) ಅಧಿಕಾರಿ ವಾಂಖೆಡೆ ಅವರು ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಕಚೇರಿಯಲ್ಲಿ ಬೆಳಗ್ಗೆ 10.30 ರ ಸುಮಾರಿಗೆ ವಿಚಾರಣೆಗೆ ಹಾಜರಾಗಿದ್ದರು.

ಸಿಬಿಐ ಕಚೇರಿಗೆ ಪ್ರವೇಶಿಸುವಾಗ ಸುದ್ದಿಗಾರರೊಂದಿಗೆ ಮಾತನಾಡಿದ ಸಮೀರ್ ವಾಂಖೆಡೆ, "ನ್ಯಾಯಾಂಗದ ಮೇಲೆ ನನಗೆ ನಂಬಿಕೆ" ಇದೆ ಎಂದು ಹೇಳಿದ್ದರು.

ವಿಚಾರಣೆಯ ಸಮಯದಲ್ಲಿ ಅವರಿಗೆ ಊಟಕ್ಕೆ ವಿರಾಮ ನೀಡಲಾಗಿತ್ತು. ವಾಂಖೆಡೆ ಅವರು ಸಿಬಿಐ ಕಚೇರಿಯಿಂದ ಸಂಜೆ 4.30 ರ ಸುಮಾರಿಗೆ ಹೊರಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT