ದೇಶ

ಅಸ್ಸಾಂ ಶಾಲಾ ಶಿಕ್ಷಕರಿಗೆ ಹೊಸ ಡ್ರೆಸ್ ಕೋಡ್: ಟೀ ಶರ್ಟ್​, ಲೆಗ್ಗಿಂಗ್ಸ್​, ಜೀನ್ಸ್ ಧರಿಸದಂತೆ ಸೂಚನೆ!

Manjula VN

ಗುವಾಹಟಿ: ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಶಿಕ್ಷಕರಿಗೆ ಅಸ್ಸಾಂ ಸರ್ಕಾರ ವಸ್ತ್ರಸಂಹಿತೆ ಜಾರಿಗೊಳಿಸಿದೆ.
 
ಡ್ರೆಸ್ ಕೋಡ್ ಬಿಡುಗಡೆ ಮಾಡಿ ಮಾಹಿತಿ ನೀಡಿರುವ ಅಸ್ಸಾಂ ರಾಜ್ಯದ ಶಿಕ್ಷಣ ಇಲಾಖೆ, ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರು ತಮ್ಮಿಷ್ಟದ, ಕಣ್ಣು ಕುಕ್ಕುವಂತಹ ಉಡುಪುಗಳನ್ನು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಒಪ್ಪತಕ್ಕದ್ದಲ್ಲ. ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ’ ವಿಶೇಷವಾಗಿ ಶಿಕ್ಷಕರು ಕರ್ತವ್ಯಗಳನ್ನು ನಿರ್ವಹಿಸುವಾಗ, ಕೆಲಸದ ಸ್ಥಳದಲ್ಲಿ ಸಭ್ಯತೆ, ವೃತ್ತಿಪರತೆ ಮತ್ತು ಗಂಭೀರತೆಯನ್ನು ಪ್ರತಿಬಿಂಬಿಸುವ ಡ್ರೆಸ್ ಕೋಡ್ ಅನ್ನು ಅನುಸರಿಸುವುದು ಅಗತ್ಯವಾಗಿದೆ ಎಂದು ಹೇಳಿದೆ.

ಶಿಕ್ಷಕರು ಇನ್ನು ಮುಂದೆ ‘ಫಾರ್ಮಲ್‌’ (ಪ್ಯಾಂಟ್‌ ಮತ್ತು ಅಂಗಿ) ತೊಟ್ಟು ಶಾಲೆಗಳಿಗೆ ಹಾಜರಾಗಬೇಕು. ಶಿಕ್ಷಕಿಯರು ಸೀರೆ, ಸಭ್ಯ ರೀತಿಯ ಸಲ್ವಾರ್‌ ಸೂಟ್‌ಗಳನ್ನಷ್ಟೇ ಧರಿಸಬೇಕು. ಇವು ತಿಳಿ ವರ್ಣದಿಂದ ಕೂಡಿರಬೇಕು. ಶಿಕ್ಷಕಿಯರು ಟಿ ಶರ್ಟ್‌, ಜೀನ್ಸ್‌ ಮತ್ತು ಲೆಗ್ಗಿನ್ಸ್‌ಗಳನ್ನು ಧರಿಸುವಂತಿಲ್ಲ’ ಎಂದು ಆದೇಶಿಸಿದೆ. ಇನ್ನು ಈ ಸೂಚನೆಗಳನ್ನು ಉಲ್ಲಂಘಿಸುವ ಶಿಕ್ಷಕರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದೆ.

SCROLL FOR NEXT