ಶ್ರೀನಗರ ವಿಮಾನ ನಿಲ್ದಾಣದಲ್ಲಿ ರಾಮ್ ಚರಣ್ 
ದೇಶ

ಜಿ 20 ಶೃಂಗಸಭೆ: ಮೆಗಾ ಪವರ್ ಸ್ಟಾರ್ ರಾಮಚರಣ್ ವಿಶೇಷ ಆಕರ್ಷಣೆ!

ಜಿ 20 ಶೃಂಗಸಭೆಯಲ್ಲಿ ಮೆಗಾ ಪವರ್ ಸ್ಟಾರ್  ರಾಮ್ ಚರಣ್ ವಿಶೇಷ ಆಕರ್ಷಣೆಯಾಗಿದ್ದಾರೆ. ಭಾರತ ಸರ್ಕಾರ ಆಯೋಜಿಸಿರುವ ಪ್ರತಿಷ್ಠಿತ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಶ್ರೀನಗರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಟನನ್ನು ಅಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು.

ಶ್ರೀನಗರ: ಜಿ 20 ಶೃಂಗಸಭೆಯಲ್ಲಿ ಮೆಗಾ ಪವರ್ ಸ್ಟಾರ್  ರಾಮ್ ಚರಣ್ ವಿಶೇಷ ಆಕರ್ಷಣೆಯಾಗಿದ್ದಾರೆ. ಭಾರತ ಸರ್ಕಾರ ಆಯೋಜಿಸಿರುವ ಪ್ರತಿಷ್ಠಿತ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಶ್ರೀನಗರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಟನನ್ನು ಅಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು.

 ಪ್ರವಾಸೋದ್ಯಮ ಮತ್ತಿತರ ಅಂಶಗಳನ್ನು ಉತ್ತೇಜಿಸುವ ಉದ್ದೇಶದಿಂದ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಜಿ-20 ಪ್ರವಾಸೋದ್ಯಮ ಕಾರ್ಯಕಾರಿ ಗುಂಪಿನ ಸಭೆ ಆಯೋಜಿಸಲಾಗಿದೆ. 

ಮೇ 22 ರಿಂದ ಮೇ 24 ರವರೆಗೆ ಮೂರು ದಿನಗಳ ಕಾಲ ಈ ಸಭೆ ನಡೆಯಲಿದೆ. 2019 ರಲ್ಲಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ತೆಗೆದುಹಾಕಿದ ನಂತರ ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಇಂತಹ ಬೃಹತ್ ಸಭೆ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕಾಗಿ ಮೂರು ಹಂತದ ಭದ್ರತಾ ವ್ಯವಸ್ಥೆ ಒದಗಿಸಲಾಗಿದೆ. 

ಅತಿಥಿಗಳ ಭದ್ರತೆಗಾಗಿ ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಮತ್ತು ಮಾರ್ಕೋಸ್ ಕಮಾಂಡೋಗಳನ್ನು ನಿಯೋಜಿಸಲಾಗಿದೆ. ಈ ಕಮಾಂಡೋಗಳು ಕಾರ್ಯಕ್ರಮ ಸ್ಥಳದ ಸುತ್ತಲೂ ಹದ್ದಿನ ಕಣ್ಣು ಇಟ್ಟಿರುತ್ತಾರೆ ಮತ್ತು ಜಮ್ಮು ಮತ್ತು ಕಾಶ್ಮೀರದ ವಿಶೇಷ ಕಾರ್ಯಾಚರಣೆ ಗುಂಪು ಕೂಡ ಭದ್ರತಾ ವ್ಯವಸ್ಥೆ ಒದಗಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

ದಿಢೀರ್‌ ದೆಹಲಿಗೆ ತೆರಳಿದ ನಾಗೇಂದ್ರ; ಹೈಕಮಾಂಡ್ ಅಂಗಳದಲ್ಲಿ ರಾಜೀನಾಮೆ ಭವಿಷ್ಯ!

ದೆಹಲಿ: ಫ್ರೆಂಡ್​ಶಿಪ್ ನಿರಕಾರಿಸಿದ್ದಕ್ಕೆ 21 ವರ್ಷದ ಮಾಡೆಲ್'ನನ್ನು ಆಕೆಯ ಮನೆಗೆ ನುಗ್ಗಿ ಹತ್ಯೆಗೈದು ಜಿಮ್ ಟ್ರೇನರ್!

ಅಸಮಾಧಾನ ತಣಿಸಲು CM ಡಿಕೆಶಿ ಆಪ್ತ ಶಾಸಕ ಆಸೀಫ್ ಸೇಠ್‌ಗೆ ‘ಬುಡಾ’ ಅಧ್ಯಕ್ಷ ಪಟ್ಟ