ದೇಶ

ಅಕ್ರಮ ಹಣ ವರ್ಗಾವಣೆ ಪ್ರಕರಣ: ಆರೋಪಿ ಜಾಕ್ವೆಲಿನ್ ಫರ್ನಾಂಡಿಸ್ ವಿದೇಶ ಭೇಟಿಗೆ ಕೋರ್ಟ್ ಒಪ್ಪಿಗೆ

Nagaraja AB

ನವದೆಹಲಿ: ವಂಚಕ ಸುಕೇಶ್ ಚಂದ್ರಶೇಖರ್ ನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ ಮೇ 25 ರಿಂದ ಜೂನ್ 12 ರವರೆಗೆ ವಿದೇಶ ಪ್ರವಾಸ ತೆರಳಲು ನ್ಯಾಯಾಲಯವೊಂದು ಮಂಗಳವಾರ ಅನುಮತಿ ನೀಡಿದೆ.

ಐಐಎಫ್‌ಎ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಮೇ 25 ರಿಂದ ಮೇ 27ರವರೆಗೆ ಅಬು ಧಾಬಿಗೆ ತೆರಳಬೇಕಾಗಿದೆ ಎಂದು ಫರ್ನಾಂಡಿಸ್ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ವಿಶೇಷ ವಿಶೇಷ ನ್ಯಾಯಾಧೀಶ ಶೈಲೇಂದ್ರ ಮಲಿಕ್, ವಿದೇಶ ಪ್ರವಾಸಕ್ಕೆ ಅನುಮತಿ ನೀಡಿದರು. 

ಅಲ್ಲದೇ, ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲು ಮೇ 28 ರಿಂದ ಜೂನ್ 12 ರವೆರೆಗೆ ಇಟಲಿಯ ಮಿಲಾನ್‌ಗೆ ಆಕೆ ತೆರಳಲು ನ್ಯಾಯಾಧೀಶರು ಅವಕಾಶ ನೀಡಿದರು. ಈ ಪ್ರಕರಣದಲ್ಲಿ ಆರೋಪಿಯಾಗಿರುವ ಫರ್ನಾಂಡೀಸ್ ಗೆ ಕಳೆದ ವರ್ಷ ನವೆಂಬರ್ 15 ರಂದು ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಆದರೆ ಬಂಧಿಸಿರಲಿಲ್ಲ. 

ರೆಲಿಗೇರ್ ಎಂಟರ್‌ಪ್ರೈಸಸ್‌ನ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಿಗೆ ವಂಚನೆ ಮತ್ತು ಸುಲಿಗೆ ಮಾಡಿದ ಆರೋಪ ಹೊತ್ತಿರುವ ಚಂದ್ರಶೇಖರ್ ವಿರುದ್ಧ ದೆಹಲಿ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ದಾಖಲಿಸಿದ ಎಫ್‌ಐಆರ್ ಆಧರಿಸಿ ಇಡಿ ಪ್ರಕರಣ ದಾಖಲಿಸಿದೆ. ರಿಲಿಗೇರ್ ಫಿನ್‌ವೆಸ್ಟ್ ಲಿಮಿಟೆಡ್‌ನಲ್ಲಿ ಹಣ ದುರುಪಯೋಗ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಂಗ್ ನನ್ನು 2019ರ  ಅಕ್ಟೋಬರ್ ನಲ್ಲಿ ಬಂಧಿಸಲಾಗಿತ್ತು.

SCROLL FOR NEXT