ಐತಿಹಾಸಿಕ ಸೆಂಗೋಲ್ ಪ್ರತಿಷ್ಟಾಪಿಸುತ್ತಿರುವ ಪ್ರಧಾನಿ ಮೋದಿ. 
ದೇಶ

ನೂತನ ಸಂಸತ್ ಭವನ ಲೋಕಾರ್ಪಣೆ: ಸ್ಪೀಕರ್​ ಆಸನದ ಬಳಿ ಐತಿಹಾಸಿಕ 'ಸೆಂಗೋಲ್'​ ಪ್ರತಿಷ್ಠಾಪಿಸಿದ ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ನೂತನ ಸಂಸತ್ ಭವನದ ಲೋಕಾರ್ಪಣೆ ಸಮಾರಂಭ ಭಾನುವಾರ ಆರಂಭಗೊಂಡಿದ್ದು, ಪುರೋಹಿತರಿಂದ ಸೆಂಗೋಲ್​​ ಸ್ವೀಕರಿಸಿದ ಪ್ರಧಾನಿ ಮೋದಿಯವರು ಲೋಕಸಭಾ ಸ್ಪೀಕರ್​ ಆಸನದ ಬಳಿ​ ಪ್ರತಿಷ್ಠಾಪನೆ ಮಾಡಿದ್ದಾರೆ.

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ನೂತನ ಸಂಸತ್ ಭವನದ ಲೋಕಾರ್ಪಣೆ ಸಮಾರಂಭ ಭಾನುವಾರ ಆರಂಭಗೊಂಡಿದ್ದು, ಪುರೋಹಿತರಿಂದ ಸೆಂಗೋಲ್​​ ಸ್ವೀಕರಿಸಿದ ಪ್ರಧಾನಿ ಮೋದಿಯವರು ಲೋಕಸಭಾ ಸ್ಪೀಕರ್​ ಆಸನದ ಬಳಿ​ ಪ್ರತಿಷ್ಠಾಪನೆ ಮಾಡಿದ್ದಾರೆ.

ವಿರೋಧ ಪಕ್ಷಗಳ ಬಹಿಷ್ಕಾರದ ನಡುವೆಯೂ ವಿವಿಧ ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮಗಳು ನಡೆಯುತ್ತಿದೆ. ಸಂಸತ್ ಭವನಕ್ಕೆ ಪ್ರಧಾನಿ ಮೋದಿ ಅವರೊಂದಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಾಥ್ ನೀಡಿದ್ದಾರೆ.
 
ಸಂಸತ್ ಭವನ ಪ್ರವೇಶಿಸಿದ ಮೋದಿಯವರು ಮೊದಲಿಗೆ ಮಹಾತ್ಮ ಗಾಂಧಿಯವರ ಪ್ರತಿಕಮೆಗೆ ಪುಷ್ಪಾರ್ಚನೆ ನೆರವೇರಿಸಿದರು. ನಂತರ ಗಣಪತಿ ಪೂಜೆ ಮೂಲಕ ಹವನ ಆರಂಭವಾಯಿತು. ಪೂಜಾ-ಕೈಂಕರ್ಯಗಳನ್ನು ಕರ್ನಾಟಕದ ಶೃಂಗೇರಿಯ ಪುರೋಹಿತರಾದ ಸೀತಾರಾಮ ಶರ್ಮಾ, ಶ್ರೀರಾಮ ಶರ್ಮಾ, ಲಕ್ಷ್ಮೀಶ ತಂತ್ರಿರಿಂದ ನೆರವೇರಿಸಿದರು.

ಹೊಸ ಸಂಸತ್ ಭವನ ಉದ್ಘಾಟನೆ ಸಮಾರಂಭ ಬೆಳಿಗ್ಗೆ 7 ಗಂಟೆಗೆ ಹೊಸ ಕಟ್ಟಡದ ಹೊರಗೆ ಪೂಜೆ, ಹವನ, ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿದ್ದು, ತಮಿಳುನಾಡಿನ ಅಧೀನಂಗಳಿಂದ ಪಡೆದುಕೊಂಡಿರುವ ರಾಜದಂಡ ಸೆಂಗೋಲ್ ಅನ್ನು ಪ್ರಧಾನಿ ಮೋದಿ ಅವರು ನೂತನ ಸಂಸತ್ ಭವನದ ಸ್ಪೀಕರ್ ಪೀಠದ ಬಳಿ ಪ್ರತಿಷ್ಟಾಪಿಸಿದರು.

ಬಳಿಕ ಮೋದಿಯವರು 'ಪ್ರಜಾಪ್ರಭುತ್ವದ ನೂತನ ದೇಗುಲ'ವನ್ನು ಉದ್ಘಾಟನೆ ಮಾಡಲಿದ್ದು, ಮಾಜಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಸೇರಿದಂತೆ, 25 ಪಕ್ಷಗಳ ಪ್ರತಿನಿಧಿಗಳು ಮತ್ತು ಮುಖ್ಯಮಂತ್ರಿಗಳು ಮತ್ತು ಸಚಿವರು, ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.

ಇದೀಗ ಹಿಂದೂ, ಕ್ರೈಸ್ತ, ಮುಸಲ್ಮಾನರಿಂದ ಸಂಸತ್ತಿನ ಲಾಬಿಯಲ್ಲಿ ಸರ್ವಧರ್ಮ ಪ್ರಾರ್ಥನೆ ನಡೆಯುತ್ತಿದ್ದು, ಪ್ರಧಾನಿ ಮೋದಿ ಸೇರಿದಂತೆ ಗಣ್ಯರು ಆಲಿಸುತ್ತಿದ್ದಾರೆ.

ಹೊಸ ಸಂಸತ್​ ಭವನದ ವಿಶೇಷತೆಗಳೇನು?
ಪ್ರಜಾಪ್ರಭುತ್ವದ ಹೊಸ ದೇಗುಲ ತ್ರಿಕೋನ ಆಕಾರದ ನಾಲ್ಕು ಅಂತಸ್ತಿನಲ್ಲಿ ನಿರ್ಮಿಸಲಾಗಿದೆ. ಸಂಸತ್ ಕಟ್ಟಡವು 64,500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಇದು ಮೂರು ಮುಖ್ಯ ದ್ವಾರಗಳನ್ನು ಹೊಂದಿದೆ. ಜ್ಞಾನ, ಶಕ್ತಿ ಮತ್ತು ಕರ್ಮ ದ್ವಾರ ಎಂದು ಹೆಸರಿಸಲಾಗಿದೆ.

ಲೋಕಸಭೆಯಲ್ಲಿ 888 ಸದಸ್ಯರು ಮತ್ತು ರಾಜ್ಯಸಭೆಯಲ್ಲಿ 300 ಸದಸ್ಯರ ಆಸನಗಳನ್ನು ಅಳವಡಿಸಲಾಗಿದೆ. ಉಭಯ ಸದನಗಳ ಜಂಟಿ ಅಧಿವೇಶನ ಲೋಕಸಭೆಯಲ್ಲೇ ನಡೆಯಲಿದ್ದು, ಅಂತಹ ಸಂದರ್ಭದಲ್ಲಿ 1280 ಸದಸ್ಯರಿಗಾಗಿ ಆಸನ ವ್ಯವಸ್ಥೆ ಮಾಡುವಷ್ಟು ದೊಡ್ಡದಾಗಿದೆ.

ಹೊಸ ಸಂಸತ್​ ಕಟ್ಟಡ 64,500 ಚದರ ಮೀಟರ್​ ವಿಸ್ತೀರ್ಣದಲ್ಲಿ ಹಳೆಯ ಸಂಸತ್ತಿನ ಪಕ್ಕದಲ್ಲೇ ನಿರ್ಮಾಣ ಮಾಡಲಾಗಿದೆ. 2020 ರ ಡಿಸೆಂಬರ್​ 10 ರಂದು ಪ್ರಧಾನಿ ಮೋದಿ ಅವರು ಇದರ ಆರಂಭಕ್ಕೆ ಶಂಕುಸ್ಥಾಪನೆ ಮಾಡಿದ್ದರು. 1200 ಕೋಟಿ ರೂಪಾಯಿ ವೆಚ್ಚದಲ್ಲಿ ಕೇವಲ ಎರಡೂವರೆ ವರ್ಷದಲ್ಲಿ ಇದನ್ನು ನಿರ್ಮಾಣ ಮಾಡಿ ದಾಖಲೆ ಬರೆಯಲಾಗಿದೆ.

ಇದರಲ್ಲಿನ ಲೋಕಸಭೆ ಹಳೆಯದಕ್ಕಿಂತ ಮೂರು ಪಟ್ಟು ಹಿರಿದಾಗಿದೆ. 17 ಸಾವಿರ ಚದರ ಮೀಟರ್​ ದೊಡ್ಡದು. ಲೋಕಸಭೆಯನ್ನು ರಾಷ್ಟ್ರಪಕ್ಷಿ ನವಿಲನ ಆಕಾರದಲ್ಲಿ ರೂಪಿಸಲಾಗಿದೆ. ರಾಜ್ಯಸಭೆಯನ್ನು ರಾಷ್ಟ್ರಪುಷ್ಪ ಕಮಲದ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಸಂಸತ್ತಿನ ಮೇಲೆ 6.5 ಮೀಟರ್​ ಎತ್ತರದ ನಾಲ್ಕು ಮುಖಗಳ ಸಿಂಹದ ರಾಷ್ಟ್ರಲಾಂಛನವನ್ನು ಇಡಲಾಗಿದೆ. ಇದು 9500 ಕೇಜಿ ತೂಕವಿದೆ. ಇದನ್ನು ಹೊತ್ತಿರುವ ಕೆಳಗಿನ ಭಾಗವೇ 6500 ಕೆಜಿ ತೂಕವಿದೆ.

ನೂತನ ಸಂಸತ್​ ಆಧುನೀಕರಣಗೊಂಡಿದೆ. ಸರ್ಕಾರದ ಆಶಯದಂತೆ ಕಾಗದ ರಹಿತವಾಗಿ ಕಾರ್ಯನಿರ್ವಹಣೆ ಮಾಡುವಂತೆ ರೂಪಿಸಲಾಗಿದೆ. ಎಲ್ಲಾ ಆಸನಗಳ ಬಳಿ ಮಲ್ಟಿಮೀಡಿಯಾ ಡಿಸ್​ಪ್ಲೇಗಳನ್ನು ಅಳವಡಿಸಲಾಗಿದೆ. ಆಧುನಿಕ ಗ್ಯಾಜೆಟ್​​ಗಳು ಇಲ್ಲಿದ್ದು, ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಅದನ್ನು ಕೃತಕಬುದ್ಧಿಮತ್ತೆಯ(ಎಐ) ನೆರವಿನಿಂದ ಭಾಷಾಂತರ ಮಾಡುವ ವ್ಯವಸ್ಥೆಯನ್ನು ಹೊಂದಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

SCROLL FOR NEXT