ದೇಶ

ನೂತನ ಸಂಸತ್ ಕಟ್ಟಡದ ಸ್ಮರಣಾರ್ಥ 75 ರೂಪಾಯಿ ನಾಣ್ಯ, ವಿಶೇಷ ಅಂಚೆ ಚೀಟಿ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ

Manjula VN

ನವದೆಹಲಿ: ನೂತನ ಸಂಸತ್ ಕಟ್ಟಡವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಿದ್ದು, ಕಟ್ಟಡ ಉದ್ಘಾಟನೆ ಸ್ಮರಣಾರ್ಥ 75 ರೂಪಾಯಿ ನಾಣ್ಯ ಹಾಗೂ ವಿಶೇಷ ಅಂಚೆ ಚೀಟಿಯನ್ನು ಭಾನುವಾರ ಬಿಡುಗಡೆಗೊಳಿಸಿದ್ದಾರೆ.

ಈ ನಾಣ್ಯವನ್ನು ನಾಲ್ಕು ಲೋಹಗಳಿಂದ ಮಾಡಲಾಗಿದ್ದು, ಶೇ.50 ಬೆಳ್ಳಿ, ಶೇ.40 ತಾಮ್ರ, ಶೇ.5 ನಿಕಲ್ ಮತ್ತು ಶೇ.5 ಸತುವನ್ನು ಈ ನಾಣ್ಯ ಹೊಂದಿದೆ. ನಾಣ್ಯದ ತೂಕ 35 ಗ್ರಾಂನಷ್ಟು ಹೊಂದಿರಲಿದೆ.

ಇನ್ನು ಅದರ ವಿನ್ಯಾಸದ ಬಗ್ಗೆ ಹೇಳುವುದಾದರೆ  ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭವಿದ್ದು, ಅದರ ಕೆಳಭಾಗದಲ್ಲಿ 75 ರೂ ಎಂದು ಬರೆಯಲಾಗಿದೆ.

ಸಂಸತ್ ಸಂಕೀರ್ಣ ಮತ್ತು ಹೊಸ ಸಂಸತ್ತಿನ ಕಟ್ಟಡದ ಚಿತ್ರವನ್ನು ಈ ನಾಣ್ಯ ಹೊಂದಿದೆ. ನಾಣ್ಯವು 44 ಎಂಎಂ ವ್ಯಾಸವನ್ನು ಹೊಂದಿದ್ದು, ವೃತ್ತಾಕಾರದಲ್ಲಿದೆ.

SCROLL FOR NEXT