ದೇಶ

ವಿಡಿ ಸಾವರ್ಕರ್ ಜನ್ಮದಿನ: ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್, ಸಚಿವರು ಸೇರಿ ಗಣ್ಯರಿಂದ ನಮನ

Ramyashree GN

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಹಲವಾರು ಕೇಂದ್ರ ಸಚಿವರು ಮತ್ತು ಸಂಸದರು ವಿ.ಡಿ ಸಾವರ್ಕರ್ ಅವರ ಜನ್ಮ ವಾರ್ಷಿಕೋತ್ಸವದಂದು ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು.

ನೂತನ ಸಂಸತ್ ಭವನವನ್ನು ಉದ್ಘಾಟಿಸಿದ ಬಳಿಕ ಸೆಂಟ್ರಲ್ ಹಾಲ್‌ನಲ್ಲಿರುವ ಸಾವರ್ಕರ್ ಅವರ ಭಾವಚಿತ್ರಕ್ಕೆ ಪ್ರಧಾನಿ ಮೋದಿ ಪುಷ್ಪ ನಮನ ಸಲ್ಲಿಸಿದರು.

ಸೆಂಟ್ರಲ್ ಹಾಲ್‌ನಲ್ಲಿ ಸಾವರ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಹಲವಾರು ಕೇಂದ್ರ ಸಚಿವರು ಮತ್ತು ಸಂಸದರು ಪ್ರಧಾನಮಂತ್ರಿಯವರೊಂದಿಗೆ ಸೇರಿಕೊಂಡರು.

ಹಿಂದಿಯಲ್ಲಿ ಟ್ವೀಟ್ ಮಾಡಿರುವ ಗೃಹ ಸಚಿವ ಅಮಿತ್ ಶಾ, ಸಾವರ್ಕರ್ ಅವರಿಗೆ ಗೌರವ ಸಲ್ಲಿಸಿದರು. ಸಾವರ್ಕರ್ ಅವರು ತಮ್ಮ ಆಲೋಚನೆಗಳಿಂದ ಅಸಂಖ್ಯಾತ ಭಾರತೀಯರ ಹೃದಯದಲ್ಲಿ ದೇಶಭಕ್ತಿಯ ದೀಪವನ್ನು ಬೆಳಗಿಸಿದರು ಎಂದು ಹೇಳಿದರು.

ವೀರ ಸಾವರ್ಕರ್ ಅವರ ದೇಶಪ್ರೇಮ, ತ್ಯಾಗ ಮತ್ತು ಸಮರ್ಪಣೆ ಶ್ಲಾಘನೀಯವಾಗಿದ್ದು, ಯುಗಯುಗಗಳು ಕಳೆದರೂ ದೇಶದ ಜನತೆಗೆ ಸ್ಫೂರ್ತಿ ನೀಡಲಿದೆ ಎಂದು ಹೇಳಿದರು.

ಸಾವರ್ಕರ್ ಅವರು 1883ರಲ್ಲಿ ಮಹಾರಾಷ್ಟ್ರದಲ್ಲಿ ಜನಿಸಿದರು ಮತ್ತು ವಿಶೇಷವಾಗಿ ಅವರ ಹಿಂದುತ್ವದ ದೃಷ್ಟಿಕೋನಗಳಿಗೆ ಬಿಜೆಪಿ ಸೇರಿದಂತೆ ಕೆಲ ಪಕ್ಷಗಳು ಮತ್ತು ಸಂಘಟನೆಗಳಿಗೆ ಅವರು ಮಹಾತ್ಮರಾಗಿ ಕಾಣಿಸುತ್ತಾರೆ.

SCROLL FOR NEXT