ದೇಶ

ಡಬ್ಲ್ಯುಎಫ್ಐ ಮುಖ್ಯಸ್ಥರ ವಿರುದ್ಧದ ಸಾಕ್ಷ್ಯ ಕೊರತೆ ಕುರಿತ ವರದಿ ತಪ್ಪು: ದೆಹಲಿ ಪೊಲೀಸ್

Srinivas Rao BV

ನವದೆಹಲಿ: ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಆದರೆ ಡಬ್ಲ್ಯುಎಫ್ಐ ಮುಖ್ಯಸ್ಥರ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂಬ ವರದಿಗಳನ್ನು ದೆಹಲಿ ಪೊಲೀಸರು ಅಲ್ಲಗಳೆದಿದ್ದು, ಈ ವರದಿಗಳು ತಪ್ಪು ಎಂದು ಹೇಳಿದ್ದಾರೆ.
 
ಇದಕ್ಕೂ ಮುನ್ನ ಪೊಲೀಸರು ಡಬ್ಲ್ಯುಎಫ್ಐ ಅಧ್ಯಕ್ಷರನ್ನು ಬಂಧಿಸಲು ಅವರ ವಿರುದ್ಧ ಸ್ಪಷ್ಟ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿದ್ದು ವರದಿಯಾಗಿತ್ತು. 

ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಕುಸ್ತಿಪಟುಗಳ ಪ್ರತಿಭಟನೆ: ಜೂನ್ 1 ರಂದು ಮುಜಾಫರ್‌ನಗರದಲ್ಲಿ ‘ಮಹಾ ಪಂಚಾಯತ್‌‘ ನಡೆಸುವುದಾಗಿ ಟಿಕಾಯತ್‌ ಘೋಷಣೆ
 
ಪ್ರಕರಣದ ತನಿಖೆ ಕುರಿತ ವರದಿಗಳ ಬಗ್ಗೆ ಟ್ವೀಟ್ ಮಾಡಿರುವ ದೆಹಲಿ ಪೊಲೀಸರು, "ದೆಹಲಿ ಪೊಲೀಸರಿಗೆ ಡಬ್ಲ್ಯುಎಫ್ಐ ನ ಮಾಜಿ ಅಧ್ಯಕ್ಷರ ವಿರುದ್ಧ ಸ್ಪಷ್ಟ, ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ, ಅಂತಿಮ ವರದಿಯನ್ನು ಇನ್ನಷ್ಟೇ ಕೋರ್ಟ್ ಗೆ ಸಲ್ಲಿಸಬೇಕಿದೆ" ಎಂದು ಹಲವು ಮಾಧ್ಯಮಗಳು ವರದಿ ಪ್ರಕಟಿಸಿವೆ. ಈ ವರದಿಗಳು ಸುಳ್ಳು, ಈ ಸೂಕ್ಷ್ಮ ಪ್ರಕರಣದ ತನಿಖೆಯು ಎಲ್ಲಾ ಸೂಕ್ಷ್ಮತೆಯೊಂದಿಗೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. 

SCROLL FOR NEXT