ದೇಶ

ಭದ್ರತಾ ನಿಯಮಗಳ ಉಲ್ಲಂಘನೆ: ರಾಷ್ಟ್ರಪತಿಗಳಿಂದ ಎಸ್ ಎಫ್ ಸಿ ಮೇಜರ್ ಸೇವೆಯಿಂದ ವಜಾ

Sumana Upadhyaya

ನವದೆಹಲಿ: ರಾಷ್ಟ್ರೀಯ ಭದ್ರತಾ ನಿಯಮಗಳು, ರಕ್ಷಣಾ ಮತ್ತು ಭದ್ರತಾ ಸಂಸ್ಥೆಗಳ ಮೂಲ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಉನ್ನತ ಮಟ್ಟದ ತನಿಖೆಯಿಂದ ತಪ್ಪಿತಸ್ಥರೆಂದು ಕಂಡುಬಂದ ನಂತರ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (SFC) ಯಲ್ಲಿ ನೇಮಕಗೊಂಡ ಭಾರತೀಯ ಸೇನಾ ಮೇಜರ್ ಒಬ್ಬರನ್ನು ಸೇವೆಯಿಂದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ವಜಾಗೊಳಿಸಿದ್ದಾರೆ. 

ಕಳೆದ ವರ್ಷ 2022 ರ ಮಾರ್ಚ್‌ನಲ್ಲಿ ಮೇಜರ್‌ ಅವರ ಚಟುವಟಿಕೆಗಳ ಬಗ್ಗೆ ಸೇನೆಯು ತನಿಖೆಯನ್ನು ಪ್ರಾರಂಭಿಸಿತ್ತು. ಈ ವೇಳೆ ಅವರು ಸೂಕ್ಷ್ಮ ಮಾಹಿತಿಯನ್ನು ಹೊಂದಿರುವುದು ಮತ್ತು ಹಂಚಿಕೊಳ್ಳುವುದು ಸೇರಿದಂತೆ ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಪತ್ತೆಹಚ್ಚಿದ್ದರು. 

ದೇಶದ ಮೂರೂ ಸೇವೆಗಳ ಸರ್ವೋಚ್ಛ ಕಮಾಂಡರ್ ಆಗಿರುವ ರಾಷ್ಟ್ರಪತಿಗಳು, ಸೇನಾ ಕಾಯಿದೆ, 1950 ರ ಅಡಿಯಲ್ಲಿ ಅಧಿಕಾರ ಹೊಂದಿದ್ದು, ವಾರದ ಹಿಂದೆ ಮೇಜರ್‌ ನನ್ನು ಸೇವೆಯಿಂದ ವಜಾಗೊಳಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ. 

ಕಳೆದ ಸೆಪ್ಟೆಂಬರ್ ಮಧ್ಯದಲ್ಲಿ ವಜಾಗೊಳಿಸುವ ಆದೇಶವನ್ನು ಹೊರಡಿಸಲಾಯಿತು. ರಾಷ್ಟ್ರಪತಿಗಳ ಅನುಮೋದನೆಯ ನಂತರ ಅಧಿಸೂಚನೆ ಹೊರಡಿಸಲಾಯಿತುಯ ಮೇಜರ್ ಅವರ ವಜಾಗೊಳಿಸುವಿಕೆ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆರೋಪಗಳು ಹೊರಬಿದ್ದ ನಂತರ ನೇಮಕಗೊಂಡ 'ಬೋರ್ಡ್ ಆಫ್ ಆಫೀಸರ್ಸ್'ನ ಸಂಶೋಧನೆಗಳ ಆಧಾರದ ಮೇಲೆ ಮೇಜರ್‌ನ ಸೇವೆಯನ್ನು ವಜಾಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನಿ ಗುಪ್ತಚರ ದಳಕ್ಕಾಗಿ ಕೆಲಸ ಮಾಡಿದ್ದಾನೆ ಎಂದು ನಂಬಲಾದ ಓರ್ವ ಕಾರ್ಯಕರ್ತನೊಂದಿಗೆ ಮೇಜರ್ ಸಾಮಾಜಿಕ ಮಾಧ್ಯಮದಲ್ಲಿ ಸಂಪರ್ಕ ಹೊಂದಿದ್ದರು ಎಂದು ಹೇಳಲಾಗುತ್ತಿದೆ. ಮೇಜರ್ ವಿರುದ್ಧದ ಆರೋಪಗಳು ಬೇಹುಗಾರಿಕೆಯ ಸಂಭವನೀಯ ಒಳಗೊಳ್ಳುವಿಕೆ ಸೇರಿದಂತೆ ಅನಧಿಕೃತ ವ್ಯಕ್ತಿಗಳೊಂದಿಗೆ ರಹಸ್ಯ ಮಾಹಿತಿಯನ್ನು ಹೊಂದುವುದು ಮತ್ತು ಹಂಚಿಕೊಳ್ಳುವುದಾಗಿತ್ತು ಎಂದು ಮೂಲಗಳು ತಿಳಿಸಿವೆ.

ಬ್ರಿಗೇಡಿಯರ್ ಶ್ರೇಣಿಯ ಅಧಿಕಾರಿ ಸೇರಿದಂತೆ ಸುಮಾರು ಹನ್ನೆರಡು ರಕ್ಷಣಾ ಸಿಬ್ಬಂದಿಯನ್ನು ರಾಷ್ಟ್ರೀಯ ಭದ್ರತಾ ಪ್ರೋಟೋಕಾಲ್ ಉಲ್ಲಂಘನೆಯ ಬಗ್ಗೆ ಪ್ರತ್ಯೇಕವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಸೇನೆಯ ಸಾಮಾಜಿಕ ಮಾಧ್ಯಮ ನೀತಿಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಬ್ರಿಗೇಡಿಯರ್ ಸೇರಿದಂತೆ ಕನಿಷ್ಠ ಒಂದೆರಡು ಅಧಿಕಾರಿಗಳ ವಿರುದ್ಧ ಸೇನೆಯು ಮುಂದಿನ ಕೆಲವು ವಾರಗಳಲ್ಲಿ ಶಿಸ್ತು ಕ್ರಮವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.

SCROLL FOR NEXT