ದೇಶ

ಅಶೋಕ್ ಗೆಹ್ಲೋಟ್ ಬಳಿಕ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರ ಪುತ್ರರಿಗೂ ಇಡಿ ಸಮನ್ಸ್!

Srinivas Rao BV

ಜೈಪುರ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಪುತ್ರನಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದ ಬೆನ್ನಲ್ಲೇ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೊಸ್ತಾರಾ ಅವರ ಇಬ್ಬರು ಪುತ್ರರಿಗೂ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. 

ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಭಿಲಾಶ್ ಹಾಗೂ ಅವಿನಾಶ್ ಗೆ ನ.7-9 ರಂದು ಹಾಜರಾಗುವಂತೆ ನೊಟೀಸ್ ನಲ್ಲಿ ತಿಳಿಸಲಾಗಿದೆ.
 
ಅ.26 ರಂದು ಜಾರಿ ನಿರ್ದೇಶನಾಲಯ ದೊತ್ಸಾರಾ ಹಾಗೂ ಅವರ ಪುತ್ರರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ದಾಳಿ ನಡೆಸಿತ್ತು. ಕಾಂಗ್ರೆಸ್ ಪಕ್ಷ ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿತ್ತು. 

ದೋತಸ್ರಾ ಅವರ ಜೈಪುರ ಮತ್ತು ಸಿಕರ್ ನಿವಾಸಗಳು ಮತ್ತು ಅವರ ರಾಜಕೀಯ ಕಚೇರಿಯ ಹೊರತಾಗಿ, ಅದೇ ಆವರಣದಲ್ಲಿ ವಾಸಿಸುವ ಅವರ ಇಬ್ಬರು ಪುತ್ರರ ನಿವಾಸವನ್ನೂ ಇಡಿ ಶೋಧಿಸಿತ್ತು.

ಈ ಬಾರಿ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿರುವ ಸ್ವತಂತ್ರ ಶಾಸಕ ಓಂ ಪ್ರಕಾಶ್ ಹುದ್ಲಾ ಕೂಡ ಇ.ಡಿ ಪರಿಶೀಲನೆಗೆ ಒಳಗಾಗಿದ್ದಾರೆ.

ನಾಗರಿಕ ಸೇವೆಗಳು ಮತ್ತು ರಾಜ್ಯ ನಾಗರಿಕ ಸೇವೆಗಳಿಗೆ ವಿದ್ಯಾರ್ಥಿಗಳನ್ನು ತಯಾರಿ ಮಾಡುವ ಸಿಕಾರ್‌ನಲ್ಲಿರುವ ಕಲಾಂ ಅಕಾಡೆಮಿಯ ಆವರಣವನ್ನು ಇಡಿ ಶೋಧಿಸಿದೆ. ಕಲಾಂ ಅಕಾಡೆಮಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ದೋತಸ್ರಾ ಹೇಳಿದ್ದಾರೆ.

SCROLL FOR NEXT