ಚಂಡೀಗಢ: ಹರಿಯಾಣದ ಪಂಚಕುಲದಲ್ಲಿರುವ ಫಾರ್ಮಾಸ್ಯುಟಿಕಲ್ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ 12 ಕಾರುಗಳನ್ನು ದೀಪಾವಳಿ ಉಡುಗೊರೆಯಾಗಿ ನೀಡಿದೆ ಮತ್ತು ಅವರ "ಕಠಿಣ ಪರಿಶ್ರಮ ಮತ್ತು ನಿಷ್ಠೆಗೆ" ಇತರ 38 ಜನರಿಗೆ ಇದೇ ರೀತಿಯ ಬಹುಮಾನ ನೀಡಲು ಯೋಜಿಸಿದೆ.
ಮಿಟ್ಸ್ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್ ಎಂಬ ಫಾರ್ಮಾ ಕಂಪನಿ ತನ್ನ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ಕಾರುಗಳನ್ನು ನೀಡಿದೆ.
ಇದನ್ನು ಓದಿ: Tough rules for Diwali: ದೀಪಾವಳಿಗೆ ಪಟಾಕಿ ಹೊಡೆಯಲು 2 ಗಂಟೆ ಅವಕಾಶ; ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದ್ದೇನು?
ಕಂಪನಿಯ ನಿರ್ದೇಶಕ ಎಂ ಕೆ ಭಾಟಿಯಾ ಅವರು ತಮ್ಮ ಉದ್ಯೋಗಿಗಳನ್ನು "ಸೆಲೆಬ್ರಿಟಿಗಳು" ಎಂದು ಕರೆದಿದ್ದು, 12 'ಸ್ಟಾರ್ ಪರ್ಫಾರ್ಮರ್ಸ್'ಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಕಂಪನಿಯು ಮುಂದಿನ ದಿನಗಳಲ್ಲಿ ಇನ್ನೂ 38 ಉದ್ಯೋಗಿಗಳಿಗೆ ಕಾರುಗಳನ್ನು ನೀಡಲು ಯೋಜಿಸಿದೆ ಎಂದು ಭಾಟಿಯಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಮ್ಮ ಕಂಪನಿಯ ಯಶಸ್ಸಿಗೆ ಉದ್ಯೋಗಿಗಳ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ನಿಷ್ಠೆ ಕಾರಣ ಎಂದು ಭಾಟಿಯಾ ಅವರು ಹೇಳಿದ್ದಾರೆ.