ದೇಶ

ರಾಜಸ್ಥಾನ ಚುನಾವಣೆ: ನಾಮಪತ್ರ ಸಲ್ಲಿಸಿದ ವಸುಂಧರಾ ರಾಜೆ, ನಿವೃತ್ತಿಯಾಗುವ ಉದ್ದೇಶವಿಲ್ಲ ಎಂದು ಸ್ಪಷ್ಟನೆ

Lingaraj Badiger

ಜೈಪುರ: ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಶನಿವಾರ ಝಲ್ರಾಪಟನ್ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. 

ನಾಮಪತ್ರಿ ಸಲ್ಲಿಸಿದ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರಾಜೆ ಅವರು, ರಾಜಕೀಯದಿಂದ ನಿವೃತ್ತಿಯಾಗುವ ಯಾವುದೇ ಉದ್ದೇಶ ಇಲ್ಲ ಸ್ಪಷ್ಟವಾಗಿ ಹೇಳಿದ್ದಾರೆ.

ತಮ್ಮ ರಾಜಕೀಯ ನಿವೃತ್ತಿ ಬಗ್ಗೆ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಅಭ್ಯರ್ಥಿ ವಸುಂಧರಾ ರಾಜೆ ಅವರು ಇದೀಗ ಯೂಟರ್ನ್ ಹೊಡೆದಿದ್ದು, 'ಜಲಾವರ್ ನನ್ನ ಕುಟುಂಬ. ಈ ಕುಟುಂಬದಲ್ಲಿ ನಾವು ರಾಜಕೀಯ ಅರ್ಥವಿಲ್ಲದ ಬಹಳಷ್ಟು ವಿಷಯಗಳನ್ನು ಮಾತನಾಡುತ್ತೇನೆ. ನನ್ನ ಪುತ್ರ ದುಶ್ಯಂತ್ ನೀಡಿದ ಹೇಳಿಕೆ ಉದ್ದೇಶಿಸಿ ನಾನು ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಪುತ್ರ ಹಾಗೂ ಸಂಸದ ದುಶ್ಯಂತ್ ಸಿಂಗ್​ನನ್ನು ನೀವು ಚೆನ್ನಾಗಿ ಬೆಳೆಸಿದ್ದೀರಿ. ಕುಚ್ ಪ್ಯಾರ್ ಸೇ, ಕುಚ್ ಆಂಖ್ ದಿಖಾ ಕೆ (ಕೆಲವೊಮ್ಮೆ ಪ್ರೀತಿಯಿಂದ, ಮತ್ತೆ ಕೆಲವು ಸಲ ಉಪದೇಶದೊಂದಿಗೆ..) ನೀವು ಅವರನ್ನು ಉತ್ತಮ ಹಾದಿಯಲ್ಲಿ ಇಟ್ಟಿದ್ದೀರಿ. ಅದಕ್ಕೆ ಅಭಿನಂದನೆ'' ಎಂದಿದ್ದಾರೆ

ದುಶ್ಯಂತ್ ನಿನ್ನೆ ಆಡಿದ ಮಾತು ಕಂಡು ತಾನು ಹಾಗೆ ಹೇಳಿದೆ. ಪುತ್ರನ ಮಾತು ಕೇಳಿ, ಅಲ್ಲಿ ಸೇರಿದ್ದ ಜನರ ಪ್ರೀತಿ ನೋಡಿ ಖುಷಿಪಟ್ಟೆ. ಒಬ್ಬ ತಾಯಿಯಾಗಿ ಇಬ್ಬರ ನಡುವೆ ಇಷ್ಟು ಸಮನ್ವಯತೆ ಇದ್ದದ್ದು ನನಗೆ ಖುಷಿ ತಂದಿತು. ಹಾಗಾಗಿ ಭವಿಷ್ಯದಲ್ಲಿ ಈ ರಾಜಕೀಯ ಜವಾಬ್ದಾರಿಯನ್ನು ಪುತ್ರ ಹೊರಲಿದ್ದಾರೆ ಎಂಬ ನಿರ್ಧಾರಿಂದ ನಾನು ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದೆ. ಆದರೆ, ಕ್ಷೇತ್ರದ ಜನರ ಪ್ರೀತಿ ಬಿಡುತ್ತಿಲ್ಲ. ನಾನು ಈಗಷ್ಟೇ ನಾಮಪತ್ರ ಸಲ್ಲಿಸಿದ್ದೇನೆ. ನಿವೃತ್ತಿಯ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳಬೇಡಿ. ಇದು ನಮ್ಮ ಕುಟುಂಬ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮನ್ನು ಇಲ್ಲಿಗೆ ಕರೆತಂದಿದೆ. ಮುಂದಿನ ದಾರಿ ಕೂಡ ಅವರ ಕೈಯಲ್ಲಿದೆ'' ಎಂದು ಮಾರ್ಮಿಕವಾಗಿ ನುಡಿದರು.

SCROLL FOR NEXT