ಬಿಜೆಪಿ 
ದೇಶ

ರಾಜಸ್ಥಾನ ವಿಧಾನಸಭೆ ಚುನಾವಣೆ: 15 ಅಭ್ಯರ್ಥಿಗಳಿರುವ ಐದನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ!

ನವೆಂಬರ್ 25 ರಂದು ನಡೆಯಲಿರುವ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಕೆಲವು ಹೊಸ ಮುಖಗಳನ್ನು ಒಳಗೊಂಡಿರುವ 15 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಭಾನುವಾರ ಬಿಡುಗಡೆ ಮಾಡಿದೆ. ಪಕ್ಷವು ಮಾವ್ಲಿ (ಉದಯಪುರ) ಕ್ಷೇತ್ರದ ಹಾಲಿ ಶಾಸಕ ಧರ್ಮನಾರಾಯಣ ಜೋಶಿ ಅವರನ್ನು ಕೈಬಿಟ್ಟು ಬದಲಿಗೆ ಕೆಜಿ ಪಲಿವಾಲ್ ಅವರನ್ನು ಕಣಕ್ಕಿಳಿಸಿದೆ.

ಜೈಪುರ: ನವೆಂಬರ್ 25 ರಂದು ನಡೆಯಲಿರುವ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಕೆಲವು ಹೊಸ ಮುಖಗಳನ್ನು ಒಳಗೊಂಡಿರುವ 15 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಭಾನುವಾರ ಬಿಡುಗಡೆ ಮಾಡಿದೆ.

ಪಕ್ಷವು ಮಾವ್ಲಿ (ಉದಯಪುರ) ಕ್ಷೇತ್ರದ ಹಾಲಿ ಶಾಸಕ ಧರ್ಮನಾರಾಯಣ ಜೋಶಿ ಅವರನ್ನು ಕೈಬಿಟ್ಟು ಬದಲಿಗೆ ಕೆಜಿ ಪಲಿವಾಲ್ ಅವರನ್ನು ಕಣಕ್ಕಿಳಿಸಿದೆ.

ಪಕ್ಷದಿಂದ ಕಣಕ್ಕಿಳಿದಿರುವ ಹೊಸ ಮುಖಗಳಲ್ಲಿ ಸಿವಿಲ್ ಲೈನ್ಸ್‌ನಿಂದ ಗೋಪಾಲ್ ಶರ್ಮಾ ಮತ್ತು ಆದರ್ಶ ನಗರದಿಂದ ರವಿ ನಯ್ಯರ್ ಸೇರಿದ್ದಾರೆ.

ನವೆಂಬರ್ 2 ರಂದು ಬಿಡುಗಡೆಯಾದ ಮೂರನೇ ಪಟ್ಟಿಯಲ್ಲಿ ಮಾಜಿ ಸಚಿವ ದೇವಿ ಸಿಂಗ್ ಭಾಟಿ ಅವರ ಸೊಸೆ ಪೂನಂ ಕನ್ವರ್ ಭಾಟಿ ಹೆಸರನ್ನು ಪಕ್ಷ ಘೋಷಿಸಿತ್ತು.

ಆದಾಗ್ಯೂ, ಹೊಸ ಪಟ್ಟಿಯಲ್ಲಿ, ಪೂನಂ ಕನ್ವರ್ ಭಾಟಿ ಬದಲಿಗೆ ಅವರ ಮಗ ಅಂಶುಮಾನ್ ಸಿಂಗ್ ಭಾಟಿ ಅವರನ್ನು ಕೊಲಾಯತ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. 

ಅಮಿತ್ ಚೌಧರಿ ಹನುಮಾನ್‌ಗಢದಿಂದ, ಚಂದ್ರಮೋಹನ್ ಬಟ್ವಾಡ ಅವರು ಕಿಶನ್‌ಪೋಲ್‌ನಿಂದ, ವಿಜಯ್ ಬನ್ಸಾಲ್ ಭರತ್‌ಪುರದಿಂದ, ಮಾಜಿ ಶಾಸಕರಾದ ರಾಜ್‌ಕುಮಾರ್ ರಿನ್ವಾ ಸರ್ದರ್ಶಹರ್‌ನಿಂದ, ಪ್ರಹ್ಲಾದ್ ಗುಂಜಾಲ್ ಕೋಟಾ ಉತ್ತರದಿಂದ ಮತ್ತು ಬಾಬು ಸಿಂಗ್ ರಾಥೋಡ್ ಶೇರ್‌ಗಢದಿಂದ ಕಣಕ್ಕಿಳಿದಿದ್ದಾರೆ. ಶಹಪುರ, ರಾಜಖೇರಾ, ಮಸುದಾ, ಪಿಪಾಲ್ಡಾ ಮತ್ತು ಬರನ್-ಅಟ್ರು ಸ್ಥಾನಗಳಿಗೆ ಕೂಡ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ಈ ಐದನೇ ಪಟ್ಟಿಯೊಂದಿಗೆ ಪಕ್ಷವು ಇದುವರೆಗೆ ರಾಜ್ಯದ 200 ಸ್ಥಾನಗಳ ಪೈಕಿ 198 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ನಾಮಪತ್ರ ಸಲ್ಲಿಸಲು ನವೆಂಬರ್ 6 ಕೊನೆಯ ದಿನವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಂತ್ಯ ಸನ್ನಿಹಿತ?: ಇರಾನ್ ನತ್ತ ಮುಖ ಮಾಡಿದ ಅಮೆರಿಕದ ಅತ್ಯಂತ ವಿಧ್ವಂಸಕ ಕ್ಷಿಪಣಿ

IPL 2026: ರೋಹಿತ್ ಶರ್ಮಾ ದಾಖಲೆ ಧೂಳಿಪಟ ಮಾಡಿದ Virat Kohli; ಮತ್ತೆ ನಂಬರ್ 1 ಪಟ್ಟ!

IPL 2026: ಕೊನೆಗೂ ಗೆದ್ರಲ್ಲಪ್ಪಾ..; SRH ವಿರುದ್ಧ LSGಗೆ ಭರ್ಜರಿ ಜಯ, ಮೈದಾನದಲ್ಲೇ ನಾಯಕ Rishabh Pant ಬಿಗಿದಪ್ಪಿದ Sanjiv Goenka

IPL 2026: ಕೊನೆಗೂ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿದ ಲಖನೌ, ಕಣ್ಣೀರು ಹಾಕಿದ ಸಂಜೀವ್ ಗೋಯೆಂಕಾ, Video!

Open The F*cking Strait, You Bast*rds: ಹತಾಶ ಅಮೆರಿಕ ಅಧ್ಯಕ್ಷರಿಂದ ಇರಾನ್ ಗೆ ಅಶ್ಲೀಲ ನಿಂದನೆ, ಬೈಗುಳ

SCROLL FOR NEXT