ಸಾಂದರ್ಭಿಕ ಚಿತ್ರ 
ದೇಶ

ಇಡಿ ಮನವಿ ಮೇರೆಗೆ ಮಹದೇವ್ ಆ್ಯಪ್ ಸೇರಿ 22 ಅಕ್ರಮ ಬೆಟ್ಟಿಂಗ್ ಆ್ಯಪ್ ನಿರ್ಬಂಧಿಸಿದ ಕೇಂದ್ರ

ಜಾರಿ ನಿರ್ದೇಶನಾಲಯ(ಇಡಿ)ದ ಕೋರಿಕೆಯ ಮೇರೆಗೆ ಮಹದೇವ್ ಆ್ಯಪ್ ಮತ್ತು ರೆಡ್ಡಿಅನ್ನಪ್ರೆಸ್ಟೋಪ್ರೊ ಸೇರಿದಂತೆ 22 ಅಕ್ರಮ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂದು ಅಧಿಕೃತ ಪ್ರಕಟಣೆ...

ನವದೆಹಲಿ: ಜಾರಿ ನಿರ್ದೇಶನಾಲಯ(ಇಡಿ)ದ ಕೋರಿಕೆಯ ಮೇರೆಗೆ ಮಹದೇವ್ ಆ್ಯಪ್ ಮತ್ತು ರೆಡ್ಡಿಅನ್ನಪ್ರೆಸ್ಟೋಪ್ರೊ ಸೇರಿದಂತೆ 22 ಅಕ್ರಮ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂದು ಅಧಿಕೃತ ಪ್ರಕಟಣೆ ಭಾನುವಾರ ತಿಳಿಸಿದೆ.

ಛತ್ತೀಸ್‌ಗಢ ಸರ್ಕಾರವು ಈ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಬಂಧಿಸು ಅಧಿಕಾರ ಹೊಂದಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಮತ್ತು ನಿರ್ಬಂಧಿಸುವಂತೆ ನಮಗೆ ಮನಿವಿಯನ್ನು ಕಳುಹಿಸಿಲ್ಲ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಆರೋಪಿಸಿದ್ದಾರೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ(MeitY) ಮಹಾದೇವ್ ಬುಕ್ ಮತ್ತು ರೆಡ್ಡಿಅನ್ನಪ್ರೆಸ್ಟೊಪ್ರೊ ಸೇರಿದಂತೆ 22 ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಮತ್ತು ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ಇಡಿ ಶಿಫಾರಸಿನ ನಂತರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಈ ಆದೇಶದ ಪ್ರಕಾರ 21 ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳು ಬಂದ್ ಆಗಲಿವೆ.

ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ನೊಂದಿಗೆ ಲಿಂಕ್ ಮಾಡಲಾದ ಮನಿ ಲಾಂಡರಿಂಗ್ ನೆಟ್‌ವರ್ಕ್‌ಗಳ ವಿರುದ್ಧ ಛತ್ತೀಸ್‌ಗಢದಲ್ಲಿ ಇಡಿ ದಾಳಿ ನಡೆಸಿದ ಒಂದು ದಿನದ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

LOP ಅಂದ್ರೆ 'ರಬ್ಬರ್ ಸ್ಟ್ಯಾಂಪ್' ಅಲ್ಲ: CBI ನಿರ್ದೇಶಕರ ಆಯ್ಕೆ ಪ್ರಕ್ರಿಯೆ ವಿರುದ್ಧ ತಿರುಗಿಬಿದ್ದ ರಾಹುಲ್!

'ಆಪರೇಷನ್ ಸಿಂಧೂರ್' ವೇಳೆ ಪಾಕಿಸ್ತಾನಕ್ಕೆ ಚೀನಾದ ಬೆಂಬಲ: ನಮಗೆ ತಿಳಿದಿತ್ತು, ಜವಾಬ್ದಾರಿಯುತ ದೇಶಗಳು ಯೋಚಿಸಬೇಕು- MEA

ರಾಜ್ಯದ ಆರು ಗ್ರಾಮ ಪಂಚಾಯತಿಗಳಿಗೆ ಕೇಂದ್ರದ ನಗದು ಪುರಸ್ಕಾರ: ಸಚಿವ ಪ್ರಿಯಾಂಕ್ ಖರ್ಗೆ ಅಭಿನಂದನೆ!

ಸಾರಿಗೆ ನೌಕರರಿಗೆ ಗುಡ್ ನ್ಯೂಸ್: ಕೊನೆಗೂ ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ; ಜುಲೈ 1 ರಿಂದ ಜಾರಿ

IPL 2026: 82 ರನ್‌ಗಳಿಂದ SRH ಮಣಿಸಿದ Gujarat Titans; RCB ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಗಿಲ್ ಪಡೆ!

SCROLL FOR NEXT