ಸಾಂದರ್ಭಿಕ ಚಿತ್ರ 
ದೇಶ

ಸೀಜ್ ಮಾಡಿದ್ದ ಮದ್ಯದ ಬಾಟಲ್ ಖಾಲಿ ಮಾಡಿದ 'ಇಲಿ' ಬಂಧಿಸಿದ ಪೊಲೀಸರು!

ಒಂದು ಇಲಿಯನ್ನು ಹಿಡಿದಿರುವ ಪೊಲೀಸರು, ಅದನ್ನು ಬೋನಿನಲ್ಲಿ ಬಂಧಿಸಿಟ್ಟಿದ್ದಾರೆ. ಪೊಲೀಸರು ವಶಪಡಿಸಿಕೊಂಡಿದ್ದ ಸುಮಾರು 60- 65 ಸಣ್ಣ ಪ್ಲಾಸ್ಟಿಕ್ ಬಾಟಲಿಗಳಲ್ಲಿದ್ದ ಲಿಕ್ಕರ್‌ ಅನ್ನು ಇಲಿಗಳು ಖಾಲಿ ಮಾಡಿವೆ.

ಭೂಪಾಲ್ : ಮಧ್ಯ ಪ್ರದೇಶದ ಛಿಂದ್ವಾರದಲ್ಲಿ  ಕಾಟ ಕೊಡುತ್ತಿದ್ದ ಇಲಿಯನ್ನು ಪೊಲೀಸರು ಬಂಧಿಸಿ ಬೋನಿನಲ್ಲಿಟ್ಟಾರೆ. ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ಪೊಲೀಸ್ ಗೋದಾಮಿನಲ್ಲಿ ಸಂಗ್ರಹಿಸಿ ಇರಿಸಿದ್ದ ಮದ್ಯದ ಪ್ಲಾಸ್ಟಿಕ್ ಬಾಟಲಿಗಳನ್ನು ಕೊರೆದು ಇಲಿಗಳು ಸಾಕಷ್ಟು ಮದ್ಯವನ್ನು ಖಾಲಿ ಮಾಡಿವೆ.

ಈ ಮದ್ಯವನ್ನು ಮೂಷಿಕಗಳು ಕುಡಿದಿವೆಯೋ ಅಥವಾ ಬಾಟಲಿ ಕೊರೆದು, ಸೋರಿಕೆಯಾಗಿ ಖಾಲಿಯಾಗುವಂತೆ ಮಾಡಿವೆಯೋ ಗೊತ್ತಿಲ್ಲ. ಆದರೆ ಪೊಲೀಸರು ಈ ಇಲಿಗಳ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ. 'ಕಾರ್ಯಾಚರಣೆ'ಯಲ್ಲಿ ಒಬ್ಬ 'ಖದೀಮ'ನನ್ನು ಹಿಡಿದಿದ್ದಾರೆ.

ಒಂದು ಇಲಿಯನ್ನು ಹಿಡಿದಿರುವ ಪೊಲೀಸರು, ಅದನ್ನು ಬೋನಿನಲ್ಲಿ ಬಂಧಿಸಿಟ್ಟಿದ್ದಾರೆ. ಪೊಲೀಸರು ವಶಪಡಿಸಿಕೊಂಡಿದ್ದ ಸುಮಾರು 60- 65 ಸಣ್ಣ ಪ್ಲಾಸ್ಟಿಕ್ ಬಾಟಲಿಗಳಲ್ಲಿದ್ದ ಲಿಕ್ಕರ್‌ ಅನ್ನು ಇಲಿಗಳು ಖಾಲಿ ಮಾಡಿವೆ.

ಇದು ಇಲ್ಲಿ ಹೊಸತೇನಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸ್ ಠಾಣೆಯ ಕಟ್ಟಡ ಬಹಳ ಹಳೆಯದು. ಸಂಗ್ರಹಿಸಿದ ವಸ್ತುಗಳನ್ನು ಇರಿಸುವ ಗೋದಾಮು ಇಲಿಗಳ ಪಾಲಿಗೆ ಆಟದ ಮೈದಾನವಾಗಿದೆ ಎಂದು ಹೇಳಿದ್ದಾರೆ.

ಆರೋಪಿಗಳಿಂದ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ಕೂಡ ಇಲಿಗಳು ಹಾಳುಗೆಡಹಿವೆ. ಅವುಗಳನ್ನು ಇರಿಸಿರುವ ಪೆಟ್ಟಿಗೆಗಳನ್ನು ಕಚ್ಚಿ ತಿಂದು ಧ್ವಂಸ ಮಾಡಿವೆ. ಇದನ್ನು ತಡೆಯಲು ಪೊಲೀಸರು ಈಗ ಗಾಂಜಾದಂತಹ ಮಾದಕ ವಸ್ತುಗಳು ಸಿಕ್ಕಾಗ ಅವುಗಳನ್ನು ಕಬ್ಬಿಣದ ಟಿನ್ ಪೆಟ್ಟಿಗೆಗಳಲ್ಲಿ ಇರಿಸಲು ಆರಂಭಿಸಿದ್ದಾರೆ.

ಸುಮಾರು 60- 65 ಸಣ್ಣ ಪ್ಲಾಸ್ಟಿಕ್ ಬಾಟಲಿಗಳಲ್ಲಿದ್ದ ಮದ್ಯ ಖಾಲಿಯಾಗಿದೆ. ಸದ್ಯ ಮದ್ಯ ವಶ ಪಡಿಸಿಕೊಂಡ ಪ್ರಕರಣ ಇನ್ನೂ ನ್ಯಾಯಾಲಯದ ವಿಚಾರಣೆ ಹಂತದಲ್ಲಿದೆ. ಕೋರ್ಟ್‌ಗೆ ಸಾಕ್ಷಿಯಾಗಿ ಮದ್ಯವನ್ನು ಪೊಲೀಸರು ಹಾಜರುಪಡಿಸಬೇಕಿತ್ತು. ಆದರೆ ಅದನ್ನು ಇಲಿಗಳು ನಾಶ ಮಾಡಿದ್ದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಅವರು ಗೋದಾಮಿನಲ್ಲಿರುವ ಇಲಿಗಳ ನಾಶಕ್ಕೆ ಮುಂದಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!