ದೇಶ

ಭಾರತದ ಮೋಸ್ಟ್ ವಾಂಟೆಡ್ ಲಷ್ಕರ್-ಎ-ತೈಬಾ ಉಗ್ರ ಸಂಘಟನೆ ಮಾಜಿ ಕಮಾಂಡರ್ ಅಕ್ರಮ್ ಘಾಜಿ ಹತ್ಯೆ

Shilpa D

ಇಸ್ಲಮಾಬಾದ್ : ಲಷ್ಕರ್-ಎ-ತೈಬಾ ಉಗ್ರ ಸಂಘಟನೆಯ ಮಾಜಿ ಕಮಾಂಡರ್​ನನ್ನು  ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಲಷ್ಕರ್-ಎ-ತೈಬಾ ಉಗ್ರ ಸಂಘಟನೆಯ ಮಾಜಿ ಕಮಾಂಡರ್ ಅಕ್ರಮ್​ ಖಾನ್​ ಅಲಿಯಾಸ್​ ಅಕ್ರಮ್ ಘಾಜಿ ಕೊಲೆಯಾದವನು. ಪಾಕಿಸ್ತಾನದ ಬಜೌರ್​ ಜಿಲ್ಲೆಯಲ್ಲಿ ಅಪರಿಚಿತನೊಬ್ಬ ಗನ್​ನಿಂದ ಮಾಜಿ ಕಮಾಂಡರ್ ಅಕ್ರಮ್​ ಖಾನ್​ನನ್ನು ಶೂಟ್ ಮಾಡಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಅಕ್ರಮ್ ಖಾನ್ ಅಲಿಯಾಸ್ ಘಾಜಿ  2018-2020 ರ ಅವಧಿಯಲ್ಲಿ ಲಷ್ಕರ್‌ಗೆ ಉನ್ನತ ನೇಮಕಾತಿದಾರರಲ್ಲಿ ಒಬ್ಬನಾಗಿದ್ದ. ಕಳೆದ ಎರಡು ವರ್ಷಗಳಲ್ಲಿ ಕಾಶ್ಮೀರ ಕಣಿವೆಗೆ ಅನೇಕ ಬ್ಯಾಚ್‌ಗಳಲ್ಲಿ ನುಸುಳಿದ ಹಲವಾರು ಭಯೋತ್ಪಾದಕರ ಜವಾಬ್ದಾರಿಯನ್ನು ಹೊತ್ತಿದ್ದ. ಈ ವೇಳೆ ಉಗ್ರ ಸಂಘಟನೆಗೆ ಬೇಕಾದ ಯುವಕರನ್ನು ಉದ್ಯೋಗದ ಹೆಸರಲ್ಲಿ ನೇಮಕ ಮಾಡಿಕೊಂಡು ಅವರಿಗೆ ಭಯೋತ್ಪಾದನೆ ಬಗ್ಗೆ ತರಬೇತಿ ಕೊಡುತ್ತಿದ್ದನು ಎನ್ನಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 2018 ರ ಸುಂಜ್ವಾನ್ ಭಯೋತ್ಪಾದನಾ ದಾಳಿಯ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬನಾಗಿದ್ದ ಖ್ವಾಜಾ ಶಾಹಿದ್‌ನನ್ನು ಭಾನುವಾರ ಅಪಹರಿಸಲಾಗಿತ್ತು. ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ಶಿರಚ್ಛೇದ ಮಾಡಲಾಯಿತು.

ಘಾಜಿ ಹತ್ಯೆಯಲ್ಲಿ ವಿವಿಧ ಭಯೋತ್ಪಾದಕ ಗುಂಪುಗಳು ಸೇರಿದಂತೆ ಸ್ಥಳೀಯ ವಿರೋಧಿಗಳ ಪಾತ್ರ ಇರಬಹುದು ಎನ್ನಲಾಗಿದೆ. ಘಾಜಿ ಲಷ್ಕರ್‌ನ ಕೇಂದ್ರ ನೇಮಕಾತಿ ಸೆಲ್‌ನ ಪ್ರಮುಖ ಸದಸ್ಯನಾಗಿದ್ದ. ಭಾರತದ ವಿರುದ್ಧ ದ್ವೇಷ ತುಂಬಿದ ಭಾಷಣಗಳಿಗೆ ಹೆಸರುವಾಸಿಯಾಗಿದ್ದ.

SCROLL FOR NEXT