ದೇಶ

ಜಾರ್ಖಂಡ್‌ನಲ್ಲಿ ಮೂವರು ಮಾವೋವಾದಿಗಳ ಬಂಧನ, ಐಇಡಿ ತಯಾರಿಕೆ ಸಾಮಗ್ರಿ ವಶ

Lingaraj Badiger

ಸಿಂಗ್‌ಭೂಮ್: ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಶುಕ್ರವಾರ ನಿಷೇಧಿತ ಸಿಪಿಐ-ಮಾವೋವಾದಿ ಸಂಘಟನೆಯ ಮೂವರು ಸದಸ್ಯರನ್ನು ಬಂಧಿಸಲಾಗಿದ್ದು, ಅವರಿಂದ ಸುಧಾರಿತ ಸ್ಫೋಟಕ ಸಾಧನಗಳನ್ನು ತಯಾರಿಸಲು ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಗೋಯಿಲ್ಕೆರಾ ಪೊಲೀಸ್ ಠಾಣಾ ವ್ಯಾಪ್ತಿಯ ರೆಂಗ್ರಾ ಗ್ರಾಮದಲ್ಲಿ ದಾಳಿ ನಡೆಸಿ ಮಾವೋವಾದಿಗಳನ್ನು ಬಂಧಿಸಿದ್ದಾರೆ.

ಬಂಧಿತ ಮೂವರು ಮಾವೋವಾದಿಗಳು ಐಇಡಿ ಬಳಸಿ ಸಿಆರ್‌ಪಿಎಫ್ ಕ್ಯಾಂಪ್‌ಗೆ ಪಡಿತರ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಅನ್ನು ಸ್ಫೋಟಿಸಿ ಜನರನ್ನು ಹತ್ಯೆ ಮಾಡಿದ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಶೇಖರ್ ಚೈಬಾಸಾದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಂಧಿತ ಮಾವೋವಾದಿಗಳನ್ನು ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ನಿವಾಸಿಗಳಾದ ಡೆಬಾಯ್ ಪುರ್ತಿ ಅಲಿಯಾಸ್ ಲೆಗಾಸಿ ಪುರ್ತಿ (28), ಜುರಿಯಾ ಬಹಂಡಾ ಅಲಿಯಾಸ್ ಮಾತಾ ಬಹಂಡಾ (28) ಮತ್ತು ಲೆಬಿಯಾ ಬೋಯಿಪೈ (21) ಎಂದು ಗುರುತಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. 

SCROLL FOR NEXT