ಪುಣೆ: ಮಹಾರಾಷ್ಟ್ರದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಶುಕ್ರವಾರ ಪುಣೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದು, ತಕ್ಷಣವೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗಾಗಿ ದೆಹಲಿಗೆ ತೆರಳಿರುವುದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಅಜಿತ್ ಪವಾರ್ ಅವರು ಶರದ್ ಪವಾರ್ ಅವರ ಸಹೋದರ ಮತ್ತು ಸಕಲ್ ನ್ಯೂಸ್ ಮಾಲೀಕರಾದ ಪ್ರತಾಪ್ರರಾವ್ ಪವಾರ್ ಅವರ ಪುಣೆಯ ಮನೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಇಬ್ಬರ ಸಭೆ ನಡೆಸಿದರು.
ಇದನ್ನು ಓದಿ: ಎನ್‌ಸಿಪಿ ಹೆಸರು ಮತ್ತು ಚಿಹ್ನೆ ಕುರಿತು ಚುನಾವಣಾ ಆಯೋಗದ ಅಂತಿಮ ನಿರ್ಧಾರ ಒಪ್ಪಿಕೊಳ್ಳುತ್ತೇವೆ: ಅಜಿತ್ ಪವಾರ್
ಆದರೆ, ಪವಾರ್ ಕುಟುಂಬ, ಕೌಟುಂಬಿಕ ವಿಚಾರವಾಗಿ ಇಬ್ಬರು ಭೇಟಿಯಾಗಿದ್ದಾರೆ ಎಂದಿದೆ. ಅಜಿತ್ ಪವಾರ್ ಅವರಿಗೆ ಇತ್ತೀಚೆಗೆ ಡೆಂಗ್ಯೂ ಪಾಸಿಟಿವ್ ಬಂದ ಕಾರಣ ಪ್ರಯಾಣ ಮಾಡದಂತೆ ವೈದ್ಯರ ಸಲಹೆ ನೀಡಿದ್ದಾರೆ. ಇದರ ಹೊರತಾಗಿಯೂ ಅವರು ಸಭೆ ನಡೆಸಿದ್ದು, ಬಳಿಕ ಅಮಿತ್ ಶಾ ಅವರನ್ನು ಭೇಟಿ ಮಾಡಲು ದೆಹಲಿಗೆ ತೆರಳಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಅಜಿತ್ ಪವಾರ್ ಅಸಮಾಧಾನಗೊಂಡಿದ್ದಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದ್ದು. ಕುಟುಂಬ ಸಭೆಯಲ್ಲಿ ಶರದ್ ಪವಾರ್ ಮತ್ತು ಅಜಿತ್ ಪವಾರ್ ನಡುವೆ ಏನು ಚರ್ಚಿಸಲಾಯಿತು? ದೆಹಲಿಗೆ ಭೇಟಿ ನೀಡುವ ಉದ್ದೇಶವೇನು? ಈ ಎಲ್ಲಾ ಪ್ರಶ್ನೆಗಳಿಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ.