ದೇಶ

ಮಧ್ಯ ಪ್ರದೇಶ ಚುನಾವಣೆ: ಅಟೆರ್ ಕ್ಷೇತ್ರದ ಬೂತ್‌ನಲ್ಲಿ ಮರು ಮತದಾನಕ್ಕೆ ಆದೇಶ

Lingaraj Badiger

ಭೋಪಾಲ್: ಭಾರತೀಯ ಚುನಾವಣಾ ಆಯೋಗ(ಇಸಿಐ) ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಅಟೆರ್ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ನವೆಂಬರ್ 21 ರಂದು ಮರು ಮತದಾನಕ್ಕೆ ಆದೇಶಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಕಿಶುಪುರದ ಮತಗಟ್ಟೆ ಸಂಖ್ಯೆ 71ರ ಅಡಿಯಲ್ಲಿ ಬರುವ ಮತಗಟ್ಟೆ ಸಂಖ್ಯೆ 3 ರಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ. ಮತದಾರರ ಮಧ್ಯದ ಬೆರಳಿಗೆ ಅಳಿಸಲಾಗದ ಶಾಯಿ ಹಚ್ಚಬೇಕು ಎಂದು ಆಯೋಗ ಸೂಚಿಸಿದೆ.

ಮರು ಮತದಾನದ ಆದೇಶವನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ನವೆಂಬರ್ 17 ರಂದು ಕಿಶುಪುರದ ಸಂಬಂಧಪಟ್ಟ ಬೂತ್‌ನಲ್ಲಿ ಕೆಲವರು ಮತದಾನದ ವಿಡಿಯೋ ಮಾಡಿ ಗೌಪ್ಯತೆಯನ್ನು ಉಲ್ಲಂಘಿಸಿದ ಕಾರಣ ಮರು ಮತದಾನಕ್ಕೆ ಆದೇಶಿಸಲಾಗಿದೆ ಎಂದು ಜಿಲ್ಲಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಧ್ಯಪ್ರದೇಶದ ಎಲ್ಲಾ 230 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 17 ರಂದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಚುನಾವಣಾ ಆಯೋಗದ ಪ್ರಕಾರ ಶೇಕಡಾ 77.15 ರಷ್ಟು ಮತದಾನವಾಗಿದೆ. ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.

SCROLL FOR NEXT