ಉತ್ತರಾಖಂಡದಲ್ಲಿ ರಕ್ಷಣಾ ಕಾರ್ಯಾಚರಣೆ 
ದೇಶ

ಉತ್ತರಕಾಶಿಗೆ ಅಂತರರಾಷ್ಟ್ರೀಯ ಸುರಂಗ ತಜ್ಞರ ತಂಡ: ರಕ್ಷಣಾ ಕಾರ್ಯಾಚರಣೆ ಚುರುಕು; ಸುರಕ್ಷಿತವಾಗಿ ಕರೆತರುವ ಆಶಾವಾದ

ಉತ್ತರಾಖಂಡದ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊರೆಯಲಾಗಿರುವ ಸುರಂಗ ಕುಸಿದು ಒಳಗೆ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿದಿದೆ.

ಉತ್ತರಕಾಶಿ: ಉತ್ತರಾಖಂಡದ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊರೆಯಲಾಗಿರುವ ಸುರಂಗ ಕುಸಿದು ಒಳಗೆ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿದಿದೆ.

ಸಿಲ್ಕ್ಯಾರಾ ಸುರಂಗ ಕುಸಿತದ ಸ್ಥಳದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಪ್ರಯತ್ನಗಳ ಭಾಗವಾಗಿ, ಅಂತರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಸೋಮವಾರ ಸುರಂಗ ಸ್ಥಳದಲ್ಲಿ ಪರಿಶೀಲನೆ ನಡೆಸಿದರು. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ನಿರೀಕ್ಷೆಗಳ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತರನ್ನು ಹೊರತರಲು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಸುರಂಗ ಕೊರೆಯುವ ಕಾರ್ಯಾಚರಣೆ ಪ್ರಾರಂಭವಾಗುವ ಮೊದಲು ಅದರ ಮೇಲಿನ ಪ್ರದೇಶವನ್ನು ಪರಿಶೀಲಿಸಿದ ನಂತರ, ಪ್ರೊಫೆಸರ್ ಡಿಕ್ಸ್ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಆಶಾವಾದ  ವ್ಯಕ್ತ ಪಡಿಸಿದ್ದಾರೆ.

ಸತ್ಲುಜ್‌ ಜಲ ವಿದ್ಯುತ್‌ ನಿಗಮದ ಸಿಬ್ಬಂದಿಯು ಸುರಂಗವನ್ನು ಲಂಬವಾಗಿ ಕೊರೆಯುವ  ಕಾರ್ಯದಲ್ಲಿ ನಿರತರಾಗಿದ್ದಾರೆ. ಒಡಿಶಾ ಹಾಗೂ ಗುಜರಾತ್‌ನಿಂದ 75 ಟನ್‌ ತೂಕದ ಸಲಕರಣೆಗಳನ್ನು ರೈಲುಗಳ ಮೂಲಕ ಸಾಗಣೆ ಮಾಡಲಾಗಿದ್ದು, ಇವುಗಳ ಮೂಲಕ ವರ್ಟಿಕಲ್‌ ಆಗಿ ಡ್ರಿಲ್ಲಿಂಗ್‌ ಮಾಡಲಾಗುತ್ತಿದೆ.

ಲಂಬವಾಗಿ ಕೊರೆಯುವ ಯೋಜನೆ ರೂಪಿಸಿದ ಕಾರಣ ಸುರಂಗದ ಬಳಿಕ ಬೆಟ್ಟದ ತುದಿಗೆ ಒಂದೇ ದಿನದಲ್ಲಿ ಗಡಿ ರಸ್ತೆಗಳ ಸಂಸ್ಥೆಯು (BRO) ರಸ್ತೆ ನಿರ್ಮಾಣ ಮಾಡಲು ಮುಂದಾಗಿದೆ. ಇದರಿಂದ ಸುರಂಗ ಕೊರೆಯಲು, ಬೆಟ್ಟದ ತುದಿಗೆ ಸಲಕರಣೆಗಳನ್ನು ಸಾಗಿಸಲು ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ. ರಸ್ತೆ ನಿರ್ಮಾಣವಾದ ಬಳಿಕ ರೈಲ್‌ ವಿಕಾಸ ನಿಗಮ ಲಿಮಿಟೆಡ್‌ ಏಜೆನ್ಸಿಯು ಪೈಪ್‌ಲೈನ್‌ ಮೂಲಕ ಸುರಂಗ ಕೊರೆಯಲು ಬೇಕಾದ ಅಗತ್ಯ ಉಪಕರಣಗಳನ್ನು ಒದಗಿಸಲಿದೆ.

ಅರ್ನಾಲ್ಡ್ ಡಿಕ್ಸ್ ಅನೇಕ ಏಜೆನ್ಸಿಗಳ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ಅದು ರಕ್ಷಣಾ ಕಾರ್ಯಾಚರಣೆಗೆ ನಾಲ್ಕು-ಕಟ್ಟಿನ ವಿಧಾನವನ್ನು ಅಳವಡಿಸಿಕೊಂಡಿದೆ. ಸುರಂಗದ ಮುಖದ ಮೇಲಿನಿಂದ ಲಂಬವಾಗಿ ಕೊರೆಯುವುದು ಕೆಲಸ ಮಾಡುತ್ತಿರುವ ಆಯ್ಕೆಗಳಲ್ಲಿ ಒಂದಾಗಿದೆ.

ಲಂಬವಾಗಿ ಡ್ರಿಲ್ಲಿಂಗ್‌ ಮಾಡುವ ಜತೆಗೆ ಹಾರಿಜಾಂಟಲ್‌ (ಅಡ್ಡ) ಬೋರಿಂಗ್‌ ಕೂಡ ನಡೆಯಲಿದೆ. ಇದಕ್ಕಾಗಿ ಅಮೆರಿಕದ ಯಂತ್ರವನ್ನು ತರಿಸಲಾಗಿದೆ. ಕಲ್ಲು ಸೇರಿ ಜಟಿಲ ವಸ್ತುಗಳನ್ನು ಪುಡಿ ಮಾಡಲು ಈ ಯಂತ್ರವನ್ನು ತರಿಸಲಾಗಿದೆ. ಸೋಮವಾರದಿಂದ ಹಾರಿಜಾಂಟಲ್‌ ಬೋರಿಂಗ್‌ ಶುರುವಾಗಿದೆ ಎಂದು ಹೇಳಿದ್ದಾರೆ.  ಅವರು ಭೂಗತ ನಿರ್ಮಾಣಕ್ಕೆ ಸಂಬಂಧಿಸಿದ ಅಪಾಯಗಳ ಬಗ್ಗೆ ಸಲಹೆಯನ್ನು ಸಹ ನೀಡುತ್ತಾರೆ ಮತ್ತು ಭೂಗತ ಸುರಂಗ ಮಾರ್ಗದಲ್ಲಿ ವಿಶ್ವದ ಪ್ರಮುಖ ತಜ್ಞರಾಗಿ ಗುರುತಿಸಲ್ಪಟ್ಟಿದ್ದಾರೆ.

ನಾವು ಸುರಂಗದಲ್ಲಿ ಸಿಲುಕಿರುವವರನ್ನು ಹೊರಗೆ ತರಲಿದ್ದೇವೆ. ಇಲ್ಲಿ ಉತ್ತಮವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಮ್ಮ ಇಡೀ ತಂಡ ಇಲ್ಲಿದೆ. ನಾವು ಶೀಘ್ರ ಪರಿಹಾರವನ್ನು ಹುಡುಕುತ್ತೇವೆ ಸುರಂಗದಲ್ಲಿ ಸಿಲುಕಿರುವವರನ್ನು ಸುರಕ್ಷಿತವಾಗಿ ಹೊರತರುವುದು ನಮ್ಮ ಆದ್ಯತೆಯಾಗಿದೆ.ಇಡೀ ಜಗತ್ತು ನಮಗೆ ಸಹಾಯ ಮಾಡುತ್ತಿದೆ. ಇಲ್ಲಿನ ತಂಡ ಮತ್ತು ಯೋಜನೆಗಳೂ ಅದ್ಭುತವಾಗಿವೆ. ಸುರಂಗದಲ್ಲಿ ಸಿಲುಕಿರುವವರಿಗೆ ಆಹಾರ ಮತ್ತು ಔಷಧಿಗಳನ್ನು ಕಾಲ ಕಾಲಕ್ಕೆ ಒದಗಿಸಲಾಗುತ್ತಿದೆ’ ಎಂದು ಅಂತರರಾಷ್ಟ್ರೀಯ ಸುರಂಗ ತಜ್ಞ ಆರ್ನಾಲ್ಡ್ ಡಿಕ್ಸ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT