ದೇಶ

ದಿನದ ಅಂತ್ಯದ ವೇಳೆ ರಕ್ಷಣಾ ಕಾರ್ಯ ಮುಗಿಯುವ ನಿರೀಕ್ಷೆ: ಎನ್ ಡಿಆರ್ ಎಫ್ ಮಹಾ ನಿರ್ದೇಶಕ ಅತುಲ್ ಕಾರ್ವಾಲ್

Sumana Upadhyaya

ಉತ್ತರಾಖಂಡ: ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರಿಗೆ ಸುರಕ್ಷಿತ ಮಾರ್ಗವನ್ನು ಒದಗಿಸಲು ಬಹು-ಏಜೆನ್ಸಿ ರಕ್ಷಣಾ ಕಾರ್ಯಾಚರಣೆಯನ್ನು ದಿನದ ಅಂತ್ಯದ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮಹಾನಿರ್ದೇಶಕ ಅತುಲ್ ಕರ್ವಾಲ್ ಗುರುವಾರ ತಿಳಿಸಿದ್ದಾರೆ.

ಇಂದು ಗುರುವಾರ ಸಿಲ್ಕ್ಯಾರಾ ಸುರಂಗ ಕುಸಿತದ ಸ್ಥಳವನ್ನು ತಲುಪಿದ ಎನ್ ಡಿಆರ್ ಎಫ್ ಮಹಾ ನಿರ್ದೇಶಕ ಅತುಲ್ ಕರ್ವಾರ್ ಎಎನ್‌ಐ ಸುದ್ದಿಸಂಸ್ಥೆ ಜೊತೆ ಮಾತನಾಡಿ, ಆಗರ್ ಯಂತ್ರವು ಮತ್ತೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ನಾವು 6 ಮೀಟರ್‌ಗಳ 2-3 ಪೈಪ್‌ಗಳನ್ನು ಒಳಗೆ ಕಳುಹಿಸಲು ಅಂದಾಜಿಸಿದ್ದೇವೆ. ನಮಗೆ ಯಾವುದೇ ಅಡೆತಡೆಗಳು ಎದುರಾಗದಿದ್ದರೆ ದಿನದ ಅಂತ್ಯದ ವೇಳೆ ರಕ್ಷಣಾ ಕಾರ್ಯಾಚರಣೆ ಮುಗಿಯುವ ನಿರೀಕ್ಷೆಯಿದೆ ಎಂದರು. 

ಕಾಂಕ್ರೀಟ್ ಕಾಮಗಾರಿ ಸೇರಿದಂತೆ 2 ಕಿಮೀ ನಿರ್ಮಿತ ಭಾಗದಲ್ಲಿ ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. ಇದು ಕಾರ್ಮಿಕರಿಗೆ ರಕ್ಷಣೆ ಒದಗಿಸುವ ಸ್ಥಳವಾಗಿದೆ. ನಮ್ಮ ತಂಡಗಳು ಸಿದ್ಧವಾಗಿದ್ದು ಶೀಘ್ರದಲ್ಲೇ ಕಾರ್ಮಿಕರನ್ನು ರಕ್ಷಿಸಲು ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇನೆ ಎಂದು ಡಿಜಿ ಅತುಲ್ ಕರ್ವಾಲ್ ಹೇಳಿದ್ದಾರೆ. 

ನಾವು ಎದುರಿಸಬೇಕಾಗಬಹುದಾದ ಎಲ್ಲಾ ಪರಿಣಾಮಗಳಿಗೆ ಎನ್‌ಡಿಆರ್‌ಎಫ್ ಸಿದ್ಧವಾಗಿದೆ. ವಿಶೇಷ ಉಪಕರಣಗಳು ಸಹ ಸಿದ್ಧವಾಗಿವೆ, ಇದರಿಂದ ನಾವು ಸಿಕ್ಕಿಬಿದ್ದ ಕಾರ್ಮಿಕರನ್ನು ಸಾಧ್ಯವಾದಷ್ಟು ಬೇಗ ಹೊರತೆಗೆಯಬಹುದು. ನಮ್ಮ ತಂಡಗಳು ಸಿದ್ಧವಾಗಿವೆ ಎಂದರು. 

SCROLL FOR NEXT