ದೇಶ

ಡ್ರಿಲ್ಲಿಂಗ್ ವೇಳೆ ಆಗರ್ ಯಂತ್ರಕ್ಕೆ ಹಾನಿ, ಕಾರ್ಯಾಚರಣೆಗೆ ಅಡ್ಡಿ: ಕಾರ್ಮಿಕರ ರಕ್ಷಣೆ ವಿಳಂಬ

Sumana Upadhyaya

ಉತ್ತರಕಾಶಿ:  ಸಿಲ್ಕ್ಯಾರಾ ಸುರಂಗದ ಒಳಗೆ ಕೊರೆಯುವ ಆಗರ್ ಯಂತ್ರದ ಬ್ಲೇಡ್‌ಗಳು ಶಿಲಾಖಂಡರಾಶಿಗಳಲ್ಲಿ ಸಿಕ್ಕಿಹಾಕಿಕೊಂಡಿರುವುದರಿಂದ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ ಮತ್ತೆ ಅಡಚಣೆಯುಂಟಾಗಿದ್ದು, ಅಧಿಕಾರಿಗಳು ರಕ್ಷಣಾ ಕಾರ್ಯಕ್ಕೆ ಬದಲಿ ಮಾರ್ಗಗಳನ್ನು ಹುಡುಕುತ್ತಿದ್ದಾರೆ.

ಅಧಿಕಾರಿಗಳ ಮುಂದಿನ ಎರಡು ಆಯ್ಕೆಗಳೇನು?: 41 ಮಂದಿ ಕಾರ್ಮಿಕರು ಒಳಗೆ ಸಿಲುಕಿಹಾಕಿಕೊಂಡು 14 ದಿನ ಕಳೆದಿದ್ದು, ಅಧಿಕಾರಿಗಳು ಎರಡು ಪರ್ಯಾಯ ಮಾರ್ಗಗಳತ್ತ ಗಮನ ಹರಿಸಿದ್ದಾರೆ. ಇನ್ನುಳಿದಿರುವ 10 ಅಥವಾ 12 ಮೀಟರ್ ದೂರವನ್ನು ಕೈಯಿಂದಲೇ ಕೊರೆದುಕೊಂಡು ಹೋಗುವಿಕೆ ಅಥವಾ ಮೇಲಿನಿಂದ 86 ಮೀಟರ್ ಕೆಳಗೆ ಕೊರೆಯುವುದು.

ಈ ಎರಡೂ ಕಾರ್ಯಾಚರಣೆಗಳಿಗೆ ದೀರ್ಘ ಸಮಯ ಬೇಕು ಎನ್ನುತ್ತಾರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ಸದಸ್ಯ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅಟಾ ಹಸ್ನೇನ್ . ದುರಂತದ ಸ್ಥಳಕ್ಕೆ ಬಂದು ಪರಿಶೀಲಿಸಿರುವ ಅಂತಾರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಅವರು ಕ್ರಿಸ್‌ಮಸ್ ಹೊತ್ತಿಗೆ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರುವ ಭರವಸೆಯನ್ನು ನೀಡಿದ್ದರೆ. ಅಂದರೆ ಇನ್ನೂ ಒಂದು ತಿಂಗಳು ಆಗುತ್ತದೆ. 

ಸುರಕ್ಷಿತ ಮಾರ್ಗದ ಉದ್ದಕ್ಕೆ ಈಗಾಗಲೇ ಕೊರೆದಿರುವ 47 ಮೀಟರ್ ವರೆಗೆ ಕೈಯಿಂದಲೇ ಕೊರೆಯುವುದೆಂದರೆ ಕಾರ್ಮಿಕರು ಒಳಗೆ ಹೋಗಿ ಕೊರೆಯಬೇಕಾಗುತ್ತದೆ. ಅಲ್ಲಿ ಸೀಮಿತ ಜಾಗದಲ್ಲಿ ಸ್ವಲ್ಪ ಸಮಯದವರೆಗೆ ಕೊರೆದು ನಂತರ ಬೇರೆಯವರಿಗೆ ವಹಿಸಿಕೊಳ್ಳಲು ಅವಕಾಶ ನೀಡುವುದಾಗಿರುತ್ತದೆ. 

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಪ್ರಕಾರ, ಯೋಜಿತ ತಪ್ಪಿಸಿಕೊಳ್ಳುವ ದಾರಿಯಲ್ಲಿ ಸಿಲುಕಿರುವ ಉಪಕರಣಗಳನ್ನು ಹೊರತಂದ ಕೂಡಲೇ ಇದು ಪ್ರಾರಂಭವಾಗಬಹುದು. ಈಗಾಗಲೇ ಸಿಲ್ಕ್ಯಾರಾಕ್ಕೆ ತರಲಾದ ಭಾರೀ ಲಂಬ ಕೊರೆಯುವ ಉಪಕರಣಗಳನ್ನು ನಿನ್ನೆ ಬಾರ್ಡರ್ ರೋಡ್ ಸಂಸ್ಥೆಯು ಒಂದೆರಡು ದಿನಗಳಲ್ಲಿ ನಿರ್ಮಿಸಿದ ಒಂದೂವರೆ ಕಿಲೋಮೀಟರ್ ಗುಡ್ಡದ ರಸ್ತೆಯನ್ನು ಸ್ಥಳಾಂತರಿಸಿತು. 

ಲಂಬ ಕೊರೆಯುವಿಕೆಯು ಮುಂದಿನ 24 ರಿಂದ 36  ಗಂಟೆಗಳಲ್ಲಿ ಪ್ರಾರಂಭವಾಗುತ್ತದೆ ಎಂದು ಹಸ್ನೈನ್ ಹೇಳಿದರು. ಈಗ ಪರಿಗಣಿಸಲಾಗುತ್ತಿರುವ ಎರಡು ಪ್ರಮುಖ ಆಯ್ಕೆಗಳಲ್ಲಿ ಇದು ತ್ವರಿತವಾಗಿದೆ. 

ಲ್ಯಾಂಡ್ ಲೈನ್ ಫೋನ್ ಕಳುಹಿಸಲು ಸಿದ್ಧತೆ: ಈಗಾಗಲೇ ಒಳಗೆ 41 ಮಂದಿ ಕಾರ್ಮಿಕರು ಸಿಕ್ಕಿಹಾಕಿಕೊಂಡು 14 ದಿನಗಳಾಗಿವೆ. ಅವರ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಅವರ ಕುಟುಂಬಸ್ಥರಿಗೆ ಕಳವಳ ಚಿಂತೆಯಿದೆ. ಇದಕ್ಕಾಗಿ ಅಧಿಕಾರಿಗಳು ಸುರಂಗದೊಳಗೆ ಫೋನ್ ರಿಸೀವರ್ ಕಳುಹಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. 

SCROLL FOR NEXT