ದೇಶ

ದೇಶದ ಜನತೆಗೆ ಕಾರ್ತಿಕ ಪೂರ್ಣಿಮ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ

Manjula VN

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾರ್ತಿಕ ಪೂರ್ಣಿಮ ಮತ್ತು ದೇವ್‌ ದೀಪಾವಳಿ ಹಬ್ಬದ ಶುಭ ಕೋರಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಎಲ್ಲರಿಗೂ ಭಾರತೀಯ ಸಾಂಪ್ರದಯದ ಆಚರಣೆಯ ಭಾಗವಾದ ಕಾರ್ತಿಕ ಪೂರ್ಣಿಮ ಮತ್ತು ದೇವ್‌ ದೀಪಾವಳಿ ಹಬ್ಬದ ಶುಭಶಾಯಗಳು. ಈ ದಿನ ದೇಶದ ಎಲ್ಲಾ ನನ್ನ ಕುಟುಂಬ ಸದಸ್ಯರ ಜೀವನದಲ್ಲಿ ಹೊಸ ಬೆಳಕು ಹಾಗೂ ಚೈತನ್ಯ ತರಲಿ ಎಂದು ಬಯಸುತ್ತೇನೆ ಎಂದು ಹೇಳಿದ್ದಾರೆ.

ಕಾರ್ತಿಕ ಪೂರ್ಣಿಮಾವನ್ನು ತ್ರಿಪುರಿ ಪೂರ್ಣಿಮಾ ಎಂದೂ ಕರೆಯುತ್ತಾರೆ ಎಂದು ಹಲವೆಡೆ ಕರೆಯಲಾಗುತ್ತದೆ. ನಂಬಿಕೆಗಳ ಪ್ರಕಾರ, ಈ ದಿನ ಶಿವನು ತ್ರಿಪುರಾಸುರನನ್ನು ಕೊಂದನು ಎನ್ನಲಾಗುತ್ತದೆ. ತ್ರಿಪುರಾಸುರನ ವಧೆಯಿಂದ ಸಂತಸಗೊಂಡ ದೇವತೆಗಳು ಕಾಶಿಯಲ್ಲಿ ಅನೇಕ ದೀಪಗಳನ್ನು ಬೆಳಗಿಸಿದರು. ಅದಕ್ಕಾಗಿಯೇ ಇದನ್ನು ದೇವ ದೀಪಾವಳಿ ಎಂದೂ ಕರೆಯುತ್ತಾರೆ.

ಕಾರ್ತಿಕ ಪೂರ್ಣಿಮೆಯ ದಿನ, ಪ್ರದೋಷ ಕಾಲದಲ್ಲಿ ನದಿ, ಕೊಳದಲ್ಲಿ ದೀಪವನ್ನು ದಾನ ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಈ ದಿನ ಬ್ರಹ್ಮ ಮುಹೂರ್ತದಂದು ಬೆಳಗ್ಗೆ ನದಿ ಅಥವಾ ಕೊಳದಲ್ಲಿ ದೀಪವನ್ನು ಹಚ್ಚಿ ಹರಿಯುವಂತೆ ಮಾಡಿ. ದೀಪವನ್ನು ದಾನ ಮಾಡುವುದರಿಂದ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

SCROLL FOR NEXT