ದೇಶ

ಮನೆಗೆ ಹೊಸ ಅತಿಥಿ ಕರೆತಂದು ತಾಯಿಗೆ ಸಪ್ರೈಸ್ ಕೊಟ್ಟ ರಾಹುಲ್ ಗಾಂಧಿ

Sumana Upadhyaya

ನವದೆಹಲಿ: ಸದಾ ಸುದ್ದಿಯಲ್ಲಿರುವ ರಾಜಕೀಯ ನಾಯಕರಲ್ಲಿ ರಾಹುಲ್ ಗಾಂಧಿ ಕೂಡ ಒಬ್ಬರು. ಇತ್ತೀಚೆಗೆ ಅವರು ಗೋವಾಕ್ಕೆ ಹೋಗಿದ್ದರು. ಅಲ್ಲಿ ಕಂಡ ಶ್ವಾನಕ್ಕೆ ಫಿದಾ ಆಗಿ ನಾಯಿಯನ್ನು ಜೋಪಾನವಾಗಿ ದೆಹಲಿಯ ತಮ್ಮ ಮನೆಗೆ ತಂದು ತಾಯಿ ಸೋನಿಯಾ ಗಾಂಧಿಗೆ ಸಪ್ರೈಸ್ ಆಗಿ ಉಡುಗೊರೆ ಕೊಟ್ಟಿದ್ದಾರೆ. 

ಮೊನ್ನೆ ಅಕ್ಟೋಬರ್‌ 3ರಂದು ವಿಶ್ವ ಪ್ರಾಣಿ ದಿನ. ಅಂದು ತಮ್ಮ ಮನೆಗೆ ಬಂದ ಹೊಸ ಅತಿಥಿಯನ್ನು ಯೂಟ್ಯೂಬ್ ನಲ್ಲಿ ವಿಡಿಯೊ ಹಾಕಿ ರಾಹುಲ್‌ಗಾಂಧಿ ಪರಿಚಯಿಸಿದ್ಧಾರೆ.

ಅತಿಥಿ ಹೆಸರು ನೂರಿ. ಅದು ಜಾಕ್‌ ರೆಸಲ್‌ ಟೆರಿಯರ್‌ (Jack Russell Terrier puppy) ತಳಿಯ ನಾಯಿ. ಆಗಸ್ಟ್‌ನಲ್ಲಿ ಗೋವಾ ಪ್ರವಾಸ ಹೋಗಿದ್ದ ರಾಹುಲ್‌ ಗಾಂಧಿ ಅವರು ಅಲ್ಲಿ ಈ ನಾಯಿ ತಳಿಯನ್ನು ಕಂಡು ಆಸಕ್ತರಾಗಿದ್ದರು. ಅದನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದರು. ಆನಂತರ ಉತ್ತರ ಗೋವಾದ ಮಾಪುಸಾದಲ್ಲಿ ದಂಪತಿಗಳಿಬ್ಬರು ನಡೆಸುತ್ತಿದ್ದ ಡಾಗ್ ಕೆನಲ್​​ಗೆ (dog kennel)ಭೇಟಿ ನೀಡಿದ್ದಾರೆ. ಸ್ಟಾನ್ಲಿ ಬ್ರಗಾಂಕಾ ಹಾಗೂ ಶಿವಾನಿ ಪಿತ್ರೆ ಅವರು ಈ ಡಾಗ್ ಕೆನಲ್​​ನ್ನು ನಡೆಸುತ್ತಿದ್ದು, ರಾಹುಲ್​​ ಗಾಂಧಿ ಭೇಟಿ ನೀಡಿದ ಸಂದರ್ಭದಲ್ಲಿ ಶ್ವಾನವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಮುಗಿದು ವಿಶ್ವ ಪ್ರಾಣಿ ದಿನವೇ ಅದು ದೆಹಲಿಯಲ್ಲಿರುವ ರಾಹುಲ್‌ ಗಾಂಧಿ ಅವರ ಮನೆಗೆ ಆಗಮಿಸಿತ್ತು. ಅದನ್ನು ಸ್ವೀಕರಿಸಿದ್ದ ರಾಹುಲ್‌ ಗಾಂಧಿ ತಮ್ಮ ತಾಯಿ ಸೋನಿಯಾಗಾಂಧಿ ಅವರಿಗೆ ಅಚ್ಚರಿಯ ರೀತಿಯಲ್ಲಿ ಪ್ರದರ್ಶಿಸಿದ್ದರು. ಮನೆಗೆ ಬಂದಾಗ ಶ್ವಾನವನ್ನು ಬಾಕ್ಸ್‌ನಲ್ಲಿ ಸಂಪೂರ್ಣ ಕವರ್‌ ಮಾಡಿದ್ದರು. ಸೋನಿಯಾ ಗಾಂಧಿ ಅವರು ಬಟ್ಟೆಯನ್ನು ತೆಗೆದಾಗ ಕಂಡಿದ್ದು ನೂರಿ. ವಾವ್‌ ಎಂದು ಅದನ್ನು ಕಂಡವರೇ ಪ್ರತಿಕ್ರಿಯಿಸಿದ್ದರು ಸೋನಿಯಾಗಾಂಧಿ. ಸೋ ಕ್ಯೂಟ್‌ ಎಂದು ಖುಷಿಗೊಂಡರು.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿರುವ ರಾಹುಲ್‌ ಗಾಂಧಿ, ನಮ್ಮ ಮನೆಗೆ ಬಂದಿರುವ ವಿಶೇಷ ಹಾಗೂ ಸುಂದರ ಅತಿಥಿಯನ್ನು ನಿಮಗೆ ಪರಿಚಯಿಸುತ್ತೇನೆ. ಇದರ ಹೆಸರು ನೂರಿ. ಗೋವಾದಿಂದ ನೇರವಾಗಿ ನಮ್ಮ ಮನೆಗೆ ಬಂದಿದ್ದಾಳೆ. ನಮ್ಮ ಮನೆಯ ಖುಷಿ ಇಮ್ಮಡಿಗೊಂಡಿದೆ. ಇದು ಅಮ್ಮನಿಗೆ ಆಶ್ಚರ್ಯಕರವೂ ಆಗಿತ್ತು. ಶ್ವಾನದ ಪ್ರೀತಿ ಹಾಗೂ ನಿಷ್ಠೆಯಿಂದ ನಾವು ಕಲಿಯುವುದು ಬಹಳ ಇದೆ. ವಿಶ್ವ ಪ್ರಾಣಿ ದಿನವೇ ಇದು ನಮ್ಮ ಮನೆಗೆ ಬಂದಿದೆ. ನಾವು ಪ್ರಾಣಿಗಳ ರಕ್ಷಣೆಗೆ ಪಣ ತೊಡಬೇಕಿದೆ ಎಂದು ಹೇಳಿದ್ದಾರೆ.

SCROLL FOR NEXT