ದೇಶ

ನಕ್ಸಲಿಸಂ ಮಾನವ ಕುಲಕ್ಕೆ ಶಾಪವಾಗಿದೆ: ಕೇಂದ್ರ ಗೃಹ ಸಚಿವ ಅಮಿತ್ ಶಾ

Sumana Upadhyaya

ನವದೆಹಲಿ: ನಕ್ಸಲಿಸಂ "ಮಾನವ ಕುಲಕ್ಕೆ ಶಾಪ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರವು ಎಡಪಂಥೀಯ ಉಗ್ರವಾದವನ್ನು ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಬೇರುಸಹಿತ ಕಿತ್ತೊಗೆಯಲು ಬದ್ಧವಾಗಿದೆ ಎಂದು ಹೇಳಿದರು.

ರಾಷ್ಟ್ರ ರಾಜಧಾನಿಯಲ್ಲಿ ಎಡಪಂಥೀಯ ಉಗ್ರವಾದದ (LWE) ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸುವ ಕೆಲವು ಗಂಟೆಗಳ ಮೊದಲು ಶಾ ತಮ್ಮ ಅಭಿಪ್ರಾಯವನ್ನು ಟ್ವೀಟ್ ಮಾಡಿದ್ದಾರೆ. 

ನಕ್ಸಲಿಸಂ ಮಾನವೀಯತೆಗೆ ಶಾಪವಾಗಿದೆ, ಅದನ್ನು ಅದರ ಎಲ್ಲಾ ರೂಪಗಳಲ್ಲಿ ಬೇರುಸಹಿತ ಕಿತ್ತುಹಾಕಲು ನಾವು ಸಂಕಲ್ಪ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಯನ್ನು ಈಡೇರಿಸುವ ನಮ್ಮ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸಲು ನಾನು ಇಂದು ದೆಹಲಿಯಲ್ಲಿ ಎಡಪಂಥೀಯ ಉಗ್ರವಾದದ (LWE) ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಲು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. 

ಸಭೆಯಲ್ಲಿ ಬಿಹಾರ, ಒಡಿಶಾ, ಮಹಾರಾಷ್ಟ್ರ, ತೆಲಂಗಾಣ, ಮಧ್ಯಪ್ರದೇಶ, ಜಾರ್ಖಂಡ್, ಆಂಧ್ರಪ್ರದೇಶ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ ಮತ್ತು ಕೇರಳದ ಮುಖ್ಯಮಂತ್ರಿಗಳು, ಗೃಹ ಸಚಿವರು ಅಥವಾ ಅವರ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಇವುಗಳು ಎಡಪಂಥೀಯ ಉಗ್ರವಾದದಿಂದ (LWE) ಪ್ರಭಾವಿತವಾಗಿರುವ ರಾಜ್ಯಗಳಾಗಿವೆ.

SCROLL FOR NEXT