ದೇಶ

ನೈನಿತಾಲ್ ಲೈಂಗಿಕ ದೌರ್ಜನ್ಯ ಪ್ರಕರಣ: ಎಲ್ಲಾ 419 ಮದರಸಾಗಳ ವಿರುದ್ಧ ತನಿಖೆಗೆ ಉತ್ತರಾಖಂಡ ಸಿಎಂ ಆದೇಶ

Lingaraj Badiger

ಡೆಹ್ರಾಡೂನ್: ನೈನಿತಾಲ್ ಬಳಿಯ ವೀರಭಟ್ಟಿಯಲ್ಲಿರುವ ಮದರಸಾದಲ್ಲಿ(ಮುಸ್ಲಿಂ ವಿದ್ಯಾರ್ಥಿಗಳ ಶಿಕ್ಷಣ ಸಂಸ್ಥೆ) ಮಕ್ಕಳ ಮೇಲೆ ನಡೆದ ಅಮಾನವೀಯ ವರ್ತನೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಾಜ್ಯದ ಎಲ್ಲಾ 419 ಮದರಸಾಗಳಲ್ಲಿ ತನಿಖೆಗೆ ಆದೇಶಿಸಿದ್ದಾರೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಧಾ ರತೂರಿ ಅವರು ಸಿಎಂ ಸೂಚನೆಯ ಮೇರೆಗೆ ರಾಜ್ಯದ ಎಲ್ಲಾ ಮದರಸಾಗಳಲ್ಲಿ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ. ರಾಜ್ಯದಲ್ಲಿ 419 ಮದರಸಾಗಳಿದ್ದು, ಈ ಪೈಕಿ 192 ಮದರಸಾಗಳು ಸರ್ಕಾರದ ನೆರವು ಪಡೆಯುತ್ತಿವೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಿಕ್ಕ ಮಾಹಿತಿಯ ಪ್ರಕಾರ, "ನೈನಿತಾಲ್ ಜಿಲ್ಲೆಯ ವೀರಭಟ್ಟಿಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಮದರಸಾ ಮೇಲೆ ಸಿಟಿ ಮ್ಯಾಜಿಸ್ಟ್ರೇಟ್ ನೇತೃತ್ವದ ತಂಡ ನಡೆಸಿದ ದಾಳಿಯ ವೇಳೆ 24 ಮಕ್ಕಳು ಅಸ್ವಸ್ಥ ಸ್ಥಿತಿಯಲ್ಲಿದ್ದರು".

ಮದರಸಾ ನಿರ್ವಾಹಕ ಮತ್ತು ಅವರ ಪುತ್ರ ತಮ್ಮ ಮೇಲೆ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮದರಸಾದ ಮಕ್ಕಳು ಆರೋಪಿಸಿದ್ದಾರೆ.

ಪೊಲೀಸರು ಮದರಸಾ ನಿರ್ವಾಹಕ ಮೊಹಮ್ಮದ್ ಹರೂನ್ ಮತ್ತು ಅವರ ಮಗ ಇಬ್ರಾಹಿಂ ವಿರುದ್ಧ ಪೋಕ್ಸೋ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಈ ಪ್ರಕರಣ ಬೆಳಕಿಗೆ ಬಂದ ನಂತರ, ಸಿಎಂ ಧಾಮಿ ಅವರು ಉತ್ತರಾಖಂಡದ ಎಲ್ಲಾ ಮದರಸಾಗಳ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ.

SCROLL FOR NEXT