ಪಟಾಕಿ ಗೋದಾಮಿನಲ್ಲಿ ಸ್ಫೋಟದ ಚಿತ್ರ 
ದೇಶ

ತಮಿಳುನಾಡು: ಪಟಾಕಿ ಗೋದಾಮಿನಲ್ಲಿ ಸ್ಫೋಟ, 11 ಜನರ ಸಾವು, 12 ಮಂದಿಗೆ ಗಾಯ; ಮಾಲೀಕ ಸೇರಿ ಇಬ್ಬರ ಬಂಧನ

ಕರ್ನಾಟಕದ ಗಡಿ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿ 14 ಮಂದಿ ಕಾರ್ಮಿಕರು ಮೃತಪಟ್ಟ ಬೆನ್ನಲ್ಲೇ ತಮಿಳುನಾಡಿನಲ್ಲಿಯೂ ಮಂಗಳವಾರ ಅಂತಹುದೇ ಘಟನೆ ನಡೆದಿದ್ದು, 11 ಜನರು ದುರ್ಮರಣ ಹೊಂದಿದ್ದಾರೆ.

ಅರಿಯಲೂರು: ಕರ್ನಾಟಕದ ಗಡಿ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿ 14 ಮಂದಿ ಕಾರ್ಮಿಕರು ಮೃತಪಟ್ಟ ಬೆನ್ನಲ್ಲೇ ತಮಿಳುನಾಡಿನಲ್ಲಿಯೂ ಮಂಗಳವಾರ ಅಂತಹುದೇ ಘಟನೆ ನಡೆದಿದ್ದು, 11 ಜನರು ದುರ್ಮರಣ ಹೊಂದಿದ್ದಾರೆ.
ಹೌದು. ಅರಿಯಲೂರು ಜಿಲ್ಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ 11 ಜನರು ಸಾವನ್ನಪ್ಪಿದ್ದು, 12 ಜನರು ಗಾಯಗೊಂಡಿದ್ದಾರೆ.

ಆರಂಭದಲ್ಲಿ ಘಟನೆಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಈಗ ಅದು ಹೆಚ್ಚಾಗಿದ್ದು, ಸಾವು ನೋವಿನ ಬಗ್ಗೆ ಜಿಲ್ಲಾಧಿಕಾರಿ ಖಚಿತ ಮಾಡಿದ್ದಾರೆ. ವೀರಗಳೂರು ಪಟ್ಟಣದಲ್ಲಿ ನಡೆದ ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಅರಿಯಲೂರು ಜಿಲ್ಲಾಧಿಕಾರಿ ಅನ್ನೆ ಮೇರಿ ಸ್ವರ್ಣ ತಿಳಿಸಿದ್ದಾರೆ.

ಗಾಯಗೊಂಡ 12 ಜನರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಪಟಾಕಿ ಗೋದಾಮಿನ ಮಾಲೀಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಸ್ವರ್ಣಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ: ಷರತ್ತು ಒಪ್ಪದ ಹೊರತು ಹಾರ್ಮುಜ್ ಜಲಸಂಧಿ ತರೆಯಲ್ಲ ಎಂದ ಇರಾನ್; ದಿಗ್ಬಂಧನ ಮತ್ತಷ್ಟು ಬಿಗಿಗೊಳಿಸಿದ ಅಮೆರಿಕ..!

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ: ‘ದೊಡ್ಡ ಘಟನೆ ನಡೆಯಲಿದೆ’ ಎಂದ ಟ್ರಂಪ್; ಇರಾನ್ ವಿರುದ್ಧ ಅಮೆರಿಕಾ ನಡೆಸಿರುವ ಗೇಮ್‌ಪ್ಲ್ಯಾನ್ ಏನು..?

ಇಂದಿನಿಂದ ವಿಧಾನಮಂಡಲ ವಿಶೇಷ ಅಧಿವೇಶನ: ಕಸ್ತೂರಿರಂಗನ್ ವರದಿ ತಿರಸ್ಕರಿಸಲು ಒಕ್ಕೊರಲ ತೀರ್ಮಾನ ಸಾಧ್ಯತೆ, ಕೇಂದ್ರಕ್ಕೆ ಶಾಕ್ ಕೊಡಲು ರಾಜ್ಯ ಸರ್ಕಾರ ಸಜ್ಜು..!

ಅಮೆರಿಕಾ ವಿರುದ್ಧ ಯುದ್ಧವಿಲ್ಲ, ಸೌದಿ ವಿರುದ್ಧ ಸಮರ ನಿಲ್ಲಲ್ಲ: ಟ್ರಂಪ್‌ಗೆ ಹೌತಿಗಳ ಖಡಕ್ ಸಂದೇಶ, ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಯುದ್ಧದ ಆತಂಕ..!

ಕಸ್ತೂರಿರಂಗನ್ ವರದಿ ವಿರುದ್ಧ ರೈತರ ರಣಕಹಳೆ: 10 ಕಿ.ಮೀ. ನಡೆದು ಬಂದ ಸಾವಿರಾರು ಅನ್ನದಾತರು, ಸಿಎಂ ಭೇಟಿಗೆ ಪಟ್ಟು: ಬಿಸಿಲಲ್ಲೇ ಕುಳಿತು ಧರಣಿ..!