ತಸ್ಲಿಮಾ ನಸ್ರಿನ್ 
ದೇಶ

ಪ್ಯಾಲೆಸ್ತೀನಿಯರ ಬಗ್ಗೆ ಮರುಕಪಡುವವರು ತಮ್ಮ ದೇಶದ ಅಲ್ಪಸಂಖ್ಯಾತರ ಬಗ್ಗೆಯೂ ಮರುಕ ಪಡುಬೇಕಲ್ಲವೇ?: ಬಾಂಗ್ಲಾದೇಶ ವಿರುದ್ಧ ತಸ್ಲೀಮಾ ನಸ್ರೀನ್ ಕಿಡಿ

ಪ್ಯಾಲೆಸ್ತೀನಿಯರ ಬಗ್ಗೆ ಮರುಕಪಡುವವರು ತಮ್ಮ ದೇಶದ ಅಲ್ಪಸಂಖ್ಯಾತರ ಬಗ್ಗೆಯೂ ಮರುಕ ಪಡುಬೇಕಲ್ಲವೇ? ಎಂದು ಬಾಂಗ್ಲಾದೇಶದ ವಿರುದ್ಧ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ಹೇಳಿದ್ದಾರೆ.

ನವದೆಹಲಿ: ಪ್ಯಾಲೆಸ್ತೀನಿಯರ ಬಗ್ಗೆ ಮರುಕಪಡುವವರು ತಮ್ಮ ದೇಶದ ಅಲ್ಪಸಂಖ್ಯಾತರ ಬಗ್ಗೆಯೂ ಮರುಕ ಪಡುಬೇಕಲ್ಲವೇ? ಎಂದು ಬಾಂಗ್ಲಾದೇಶದ ವಿರುದ್ಧ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ಹೇಳಿದ್ದಾರೆ.

ಇಸ್ಲಾಮಿಕ್ ರಾಷ್ಟ್ರಗಳು ಪ್ಯಾಲೆಸ್ತೀನ್ ಜೊತೆ ನಿಲ್ಲಬೇಕು ಎಂಬ ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟ ಕರೆ ನೀಡಿದ್ದು ಮಾತ್ರವಲ್ಲದೇ ಇಸ್ರೇಲ್ ಮತ್ತು ಗಾಜಾಪಟ್ಟಿ ವಿಚಾರದ ಬಗ್ಗೆ ಚರ್ಚಿಸಲು ಇಸ್ಲಾಮಿಕ್ ರಾಷ್ಟ್ರಗಳ ಸಭೆ ಕರೆದಿದೆ. ಈ ಸಭೆ ನಡುವೆಯೇ ಲೇಖಕಿ ತಸ್ಲೀಮಾ ನಸ್ರೀನ್ ಸಂದರ್ಶನವೊಂದರಲ್ಲಿ ತಮ್ಮದೇ ದೇಶ ಬಾಂಗ್ಲಾದೇಶದ ವಿರುದ್ಧ ಕಿಡಿಕಾರಿದ್ದಾರೆ. 

ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪ್ಯಾಲೆಸ್ಟೀನಿಯನ್ನರ ವಿರುದ್ಧದ ದೌರ್ಜನ್ಯದ ಬಗ್ಗೆ ಮರುಕ ಪಡುವವರು ತಮ್ಮದೇ ದೇಶದಲ್ಲಿ ಅಲ್ಪಸಂಖ್ಯಾತರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆಯೂ ಮರುಕಪಡಬೇಕು ಎಂದು ಹೇಳಿದ್ದಾರೆ.

‘ಪ್ಯಾಲೆಸ್ಟೀನಿಯನ್ನರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಬಾಂಗ್ಲಾದೇಶಿಗರು ಆತಂಕಿತರಾಗಿದ್ದಾರೆ. ಅವರಿಗೆ ಸಹಾಯ ಮಾಡಲು ಕೆಲವರು ಪ್ಯಾಲೆಸ್ಟೀನ್‌ಗೆ ತೆರಳಲೂ ಬಯಸಿದ್ದಾರೆ ಎಂದು ಕೇಳ್ಪಟ್ಟೆ. ವೈಯಕ್ತಿಕವಾಗಿ ಜಗತ್ತಿನಲ್ಲಿ ನಡೆಯುವ ಎಲ್ಲಾ ರೀತಿಯ ದೌರ್ಜನ್ಯವನ್ನು ನಾನು ಖಂಡಿಸುತ್ತೇನೆ.

ಆದರೆ ಪ್ಯಾಲೆಸ್ಟೀನಿಯನ್ನರ ಬಗ್ಗೆ ಮರುಕ ಪಡುತ್ತಿರುವವರು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಾಗುತ್ತಿರುವ ಆಕ್ರಮಣದ ಬಗ್ಗೆಯೂ ಚಿಂತಿಸಬೇಕು. ಬಾಂಗ್ಲಾದೇಶವು ಆರ್ಥಿಕ ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿದ್ದರೂ ಮೂಲಭೂತವಾದ ಹೆಚ್ಚುತ್ತಿದೆ. ಲಿಂಗ ಅಸಮಾನತೆ ಪ್ರಮುಖ ಸಮಸ್ಯೆಯಾಗಿ ಮುಂದುವರೆದಿದೆ’ ಎಂದು ಹೇಳಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

SCROLL FOR NEXT