ದೇಶ

ನೇಪಾಳ ಸೇರಿ ಏಳು ದೇಶಗಳಿಗೆ ಬಾಸ್ಮತಿ ಅಲ್ಲದ ಬಿಳಿ ಅಕ್ಕಿ ರಫ್ತಿಗೆ ಕೇಂದ್ರ ಸರ್ಕಾರ ಅನುಮತಿ

Ramyashree GN

ನವದೆಹಲಿ: ನೇಪಾಳ, ಕ್ಯಾಮರೂನ್ ಮತ್ತು ಮಲೇಷ್ಯಾ ಸೇರಿದಂತೆ ಏಳು ದೇಶಗಳಿಗೆ 10,34,800 ಟನ್ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ರಫ್ತು ಮಾಡಲು ಅನುಮತಿ ನೀಡಿರುವುದಾಗಿ ಸರ್ಕಾರ ಬುಧವಾರ ತಿಳಿಸಿದೆ.

ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್ (ಎನ್‌ಸಿಇಎಲ್) ಮೂಲಕ ರಫ್ತಿಗೆ ಅನುಮತಿ ನೀಡಲಾಗಿದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ) ಅಧಿಸೂಚನೆಯಲ್ಲಿ ತಿಳಿಸಿದೆ.

ದೇಶೀಯ ಪೂರೈಕೆಯನ್ನು ಹೆಚ್ಚಿಸಲು ಜುಲೈ 20ರಂದು ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯ ರಫ್ತನ್ನು ನಿಷೇಧಿಸಲಾಗಿದೆಯಾದರೂ, ಕೆಲವು ದೇಶಗಳಿಗೆ ಅವುಗಳ ಆಹಾರ ಭದ್ರತೆ ಅಗತ್ಯಗಳನ್ನು ಪೂರೈಸಲು ಮತ್ತು ಮನವಿ ಮೇರೆಗೆ ಸರ್ಕಾರ ಈ ರಫ್ತುಗಳಿಗೆ ಅನುಮತಿ ನೀಡಿದೆ.

'ನೇಪಾಳ, ಕ್ಯಾಮರೂನ್, ಕೋಟ್ ಡಿ' ಐವೋರ್, ಗಿನಿಯಾ, ಮಲೇಷಿಯಾ, ಫಿಲಿಪೈನ್ಸ್ ಮತ್ತು ಸೀಶೆಲ್ಸ್‌ ದೇಶಗಳಿಗೆ ಬಿಳಿ ಅಕ್ಕಿ ರಫ್ತು ಮಾಡಲು ಸೂಚಿಸಲಾಗಿದೆ' ಎಂದು ಅದು ಹೇಳಿದೆ.

ನೇಪಾಳಕ್ಕೆ 95,000 ಟನ್‌, ಕ್ಯಾಮರೂನ್ (1,90,000 ಟನ್‌), ಕೋಟ್ ಡಿ ಐವೊರ್ (1,42,000 ಟನ್‌), ಗಿನಿಯಾ (1,42,000 ಟನ್‌), ಮಲೇಷ್ಯಾ (1,70,000 ಟನ್‌), ಫಿಲಿಪೈನ್ಸ್ (2,95,000 ಟನ್‌) ಮತ್ತು ಸೀಶೆಲ್ಸ್ ದೇಶಕ್ಕೆ 800 ಟನ್ ಅಕ್ಕಿ ರಫ್ತಿಗೆ ಅನುಮತಿ ನೀಡಲಾಗಿದೆ.

SCROLL FOR NEXT