ದೆಹಲಿಯಲ್ಲಿ ವಿಜಯದಶಮಿ ಆಚರಣೆ ಸಂದರ್ಭದಲ್ಲಿ ರಾಮದೇವರನ್ನು ಪೂಜಿಸಿದ ಪ್ರಧಾನಿ ನರೇಂದ್ರ ಮೋದಿ 
ದೇಶ

ಜಾತೀಯತೆ, ಪ್ರಾದೇಶಿಕತೆಯಂತಹ ಸಮಾಜದ ಸಾಮರಸ್ಯ ಕೆದಡುವ ವಿರೂಪಗಳನ್ನು ಕಿತ್ತೊಗೆಯಬೇಕು: ಪ್ರಧಾನಿ ಮೋದಿ

ಸಮಾಜದಲ್ಲಿ ಸೌಹಾರ್ದತೆಯನ್ನು ಕದಡುತ್ತಿರುವ ಜಾತಿವಾದ ಮತ್ತು ಪ್ರಾದೇಶಿಕತೆಯಂತಹ ವಿರೂಪ ಸಂಗತಿಗಳನ್ನು ಕೊನೆಗಾಣಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ನಾಗರಿಕರಿಗೆ ಕರೆ ನೀಡಿದ್ದಾರೆ. ತಮ್ಮ ದಸರಾ ಭಾಷಣದಲ್ಲಿ, ಪ್ರಧಾನಮಂತ್ರಿಯವರು ಈ ಹಬ್ಬವು ಭಾರತದ ಅಭಿವೃದ್ಧಿಯ ಬಗ್ಗೆ ಅಲ್ಲದ ಸಿದ್ಧಾಂತಗಳ ದಹನವನ್ನು ಗುರುತಿಸಬೇಕು ಎಂದು ಹೇಳಿದರು.

ನವದೆಹಲಿ: ಸಮಾಜದಲ್ಲಿ ಸೌಹಾರ್ದತೆಯನ್ನು ಕದಡುತ್ತಿರುವ ಜಾತಿವಾದ ಮತ್ತು ಪ್ರಾದೇಶಿಕತೆಯಂತಹ ವಿರೂಪ ಸಂಗತಿಗಳನ್ನು ಕೊನೆಗಾಣಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ನಾಗರಿಕರಿಗೆ ಕರೆ ನೀಡಿದ್ದಾರೆ. ತಮ್ಮ ದಸರಾ ಭಾಷಣದಲ್ಲಿ, ಪ್ರಧಾನಮಂತ್ರಿಯವರು ಈ ಹಬ್ಬವು ಭಾರತದ ಅಭಿವೃದ್ಧಿಯ ಬಗ್ಗೆ ಅಲ್ಲದ ಸಿದ್ಧಾಂತಗಳ ದಹನವನ್ನು ಗುರುತಿಸಬೇಕು ಎಂದು ಹೇಳಿದರು.

ನಿನ್ನೆ ವಿಜಯದಶಮಿ ಆಚರಣೆ ಅಂಗವಾಗಿ ದೆಹಲಿಯಲ್ಲಿ ರಾವಣನ ಪ್ರತಿಕೃತಿ ದಹಿಸಿದ ನಂತರ ಮಾತನಾಡಿದ ಪ್ರಧಾನಿ, “ನಾವು ಭಗವಾನ್ ರಾಮನ ಕಲ್ಪನೆಗಳ ಭಾರತವನ್ನು ರಚಿಸಬೇಕಾಗಿದೆ. ಅಭಿವೃದ್ಧಿ ಹೊಂದಿದ ಭಾರತ, ಇದು ಸ್ವಾವಲಂಬಿಯಾಗಿದೆ. ಅಭಿವೃದ್ಧಿ ಹೊಂದಿದ ಭಾರತ, ಇದು ವಿಶ್ವ ಶಾಂತಿಯ ಸಂದೇಶವನ್ನು ನೀಡುತ್ತದೆ, ಅಲ್ಲಿ ಪ್ರತಿಯೊಬ್ಬರೂ ತಮ್ಮ ಕನಸುಗಳನ್ನು ನನಸಾಗಿಸಲು ಸಮಾನ ಹಕ್ಕನ್ನು ಹೊಂದಿದ್ದಾರೆ ಮತ್ತು ಜನರು ಸಮೃದ್ಧಿ ಮತ್ತು ತೃಪ್ತಿಯನ್ನು ಅನುಭವಿಸುತ್ತಾರೆ ಎಂದರು. 

ಸಾಮಾಜಿಕ ಅನಿಷ್ಟ ಮತ್ತು ತಾರತಮ್ಯವನ್ನು ಕೊನೆಗೊಳಿಸಲು ನಾವು ಪ್ರತಿಜ್ಞೆ ಮಾಡಬೇಕು ಎಂದು ಅವರು ಹೇಳಿದರು, ಸಾಮಾಜಿಕ ಸಾಮರಸ್ಯವನ್ನು ಕದಡುವ ಪ್ರತಿಯೊಂದು ಅನಿಷ್ಟವನ್ನೂ ಸಹ ಸುಡಬೇಕು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವ ಬಗ್ಗೆ ಮಾತನಾಡಿದ ಪ್ರಧಾನಿ, ಇಂದು ಭಗವಾನ್ ರಾಮನ ಭವ್ಯ ಮಂದಿರ ನಿರ್ಮಾಣವಾಗುತ್ತಿರುವುದನ್ನು ನಾವು ನೋಡುತ್ತಿರುವುದು ನಮ್ಮ ಅದೃಷ್ಟ. ಭಗವಾನ್ ಶ್ರೀ ರಾಮ್ ಬಾಸ್ ಆನೇ ಹೈ ವಾಲೇ ಹೈ (ಭಗವಾನ್ ರಾಮನ ಆಗಮನವು ಸನ್ನಿಹಿತವಾಗಿದೆ) ”ಎಂದು ಅವರು ಹೇಳಿದರು, ಮುಂದಿನ ರಾಮನವಮಿ ಸಮಯದಲ್ಲಿ ದೇವಾಲಯದಲ್ಲಿ ಪ್ರಾರ್ಥನೆಗಳು ಇಡೀ ಜಗತ್ತಿನಲ್ಲಿ ಸಂತೋಷವನ್ನು ಹರಡುತ್ತದೆ ಎಂದು ಅವರು ಪ್ರತಿಪಾದಿಸಿದರು. ಕೆಲವೇ ತಿಂಗಳಲ್ಲಿ ರಾಮ ದೇವಾಲಯ ನಿರ್ಮಾಣ ಅಯೋಧ್ಯೆಯಲ್ಲಿ ಪೂರ್ಣಗೊಳ್ಳಲಿದ್ದು, ಇದು ಜನರ ತಾಳ್ಮೆಯ ವಿಜಯವಾಗಿದೆ ಎಂದರು.

ರಾಮಮಂದಿರ ನಿರ್ಮಾಣವು ಅನೇಕ ಮಂಗಳಕರ ಬೆಳವಣಿಗೆಗಳ ನಡುವೆ ನಡೆಯುತ್ತಿದೆ. ಭಾರತದ ಯಶಸ್ವಿ ಚಂದ್ರಯಾನ, ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನೆ ಮತ್ತು ಮಹಿಳಾ ಮೀಸಲಾತಿ ಕಾನೂನು ಜಾರಿಯನ್ನು ಪ್ರಧಾನಿ ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು. ನಮಗೆ ಭಗವಾನ್ ರಾಮನ 'ಮರ್ಯಾದಾ' ಮತ್ತು ನಮ್ಮ ಗಡಿಯನ್ನು ಹೇಗೆ ರಕ್ಷಿಸಬೇಕು ಎಂದು ತಿಳಿದಿದೆ" ಎಂದರು. 

'ಶಾಸ್ತ್ರ ಪೂಜೆ' (ಆಯುಧಗಳ ಆರಾಧನೆ) ಸಂಪ್ರದಾಯವನ್ನು ಉಲ್ಲೇಖಿಸಿದ ಪ್ರಧಾನಿ, ಭಾರತದಲ್ಲಿ ಶಾಸ್ತ್ರ ಪೂಜೆಯು ಆಚರಣೆಯಲ್ಲಿದೆ ಇತರರ ಭೂಮಿಯನ್ನು ಪ್ರಾಬಲ್ಯಗೊಳಿಸಲು ಅಥವಾ ವಶಪಡಿಸಿಕೊಳ್ಳಲು ಅಲ್ಲ, ಆದರೆ ತನ್ನ ಸ್ವಂತ ಭೂಮಿಯನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂದು ಭಾರತೀಯರು ಕಲಿತಿರುತ್ತಾರೆ ಎಂದರು. ವಿಜಯದಶಮಿಯ ಈ ಶುಭ ಸಂದರ್ಭದಲ್ಲಿ ಕನಿಷ್ಠ ಒಂದು ಬಡ ಕುಟುಂಬಕ್ಕೆ ಅದರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಲು ಸಹಾಯ ಮಾಡುವುದು ಸೇರಿದಂತೆ 10 ಪ್ರತಿಜ್ಞೆಗಳನ್ನು ತೆಗೆದುಕೊಳ್ಳುವಂತೆ ಮೋದಿ ಜನತೆಗೆ ಕರೆ ನೀಡಿದರು. 

ಎಲ್ಲರೂ ಅಭಿವೃದ್ಧಿ ಹೊಂದಿದಾಗ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದರು. ದೇಶದಲ್ಲಿ ಮೂಲಭೂತ ಸೌಕರ್ಯಗಳಿಲ್ಲದ ಒಬ್ಬ ಬಡ ವ್ಯಕ್ತಿ ಇರುವವರೆಗೂ ನಾವು ವಿಶ್ರಾಂತಿ ಪಡೆಯುವುದಿಲ್ಲ ಎಂದರು. ಜಲ ಸಂರಕ್ಷಣೆ, ಡಿಜಿಟಲ್ ವಹಿವಾಟು, ಸ್ವಚ್ಛತೆ, ಸ್ಥಳೀಯತೆಗೆ ಒತ್ತು, ಗುಣಮಟ್ಟದ ಕೆಲಸ, ದೇಶೀಯ ಪ್ರವಾಸೋದ್ಯಮ, ನೈಸರ್ಗಿಕ ಕೃಷಿ, ರಾಗಿ ಬಳಕೆ ಮತ್ತು ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಕೇಳಿಕೊಂಡರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT