ದೇಶ

ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಫೋಟೊ- ವಿಡಿಯೋ ಲೈಕ್ ಮಾಡುವುದು ತಪ್ಪಲ್ಲ: ಅಲಹಾಬಾದ್ ಹೈಕೋರ್ಟ್

Shilpa D

ಪ್ರಯಾಗರಾಜ್:‌ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೊಗಳನ್ನು ಲೈಕ್‌ ಮಾಡುವುದು ತಪ್ಪಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ.

ಆಗ್ರಾದ ಮೊಹಮ್ಮದ್‌ ಇಮ್ರಾನ್‌ ಕಾಜ್ಮಿ ಎಂಬ ವ್ಯಕ್ತಿಯು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಲೈಕ್‌ ಮಾಡಿದ್ದಕ್ಕಾಗಿ, ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿತ್ತು. ಇದನ್ನು ಪ್ರಶ್ನಿಸಿ ವ್ಯಕ್ತಿಯು ಅಲಹಾಬಾದ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರುಣ್‌ ಕುಮಾರ್‌ ದೇಶ್ವಾಲ್‌ ಅವರು ವ್ಯಕ್ತಿ ವಿರುದ್ಧದ ಕೇಸ್‌ ರದ್ದುಗೊಳಿಸಲು ಆದೇಶಿಸಿದರು. ಇದೇ ವೇಳೆ ಅವರು ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾದ ವಿಡಿಯೊಗಳನ್ನು ಲೈಕ್‌ ಮಾಡುವುದು ಅಪರಾಧವಲ್ಲ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಆದ ಫೋಟೊ ಅಥವಾ ವಿಡಿಯೊವನ್ನು ನೋಡಿ, ಲೈಕ್‌ ಮಾಡಿದರೆ ಯಾವುದೇ ತೊಂದರೆ ಇಲ್ಲ. ಆದರೆ, ಫೇಸ್‌ಬುಕ್‌ನಲ್ಲಿ ವಿಡಿಯೊ ಅಥವಾ ಫೋಟೊವನ್ನು ಶೇರ್‌ ಮಾಡುವುದು, ಎಕ್ಸ್‌ ಜಾಲತಾಣದಲ್ಲಿ ಅದನ್ನು ರಿಪೋಸ್ಟ್‌ ಮಾಡುವುದು ಅಪರಾ ಎಂಬುದಾಗಿ ಅಲಹಾಬಾದ್‌ ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಅಶ್ಲೀಲ ಪೋಸ್ಟ್‌ಗಳನ್ನು ಶೇರ್‌ ಮಾಡಿದರೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 67ರ ಪ್ರಕಾರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕೋರ್ಟ್‌ ತಿಳಿಸಿದೆ.

ಸುಮಾರು 600-700 ಮುಸ್ಲಿಮರು ಅನುಮತಿ ಇಲ್ಲದೆಯೇ ಒಂದೆಡೆ ಸೇರಿದ ವಿಡಿಯೊ ಅಥವಾ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಆಗಿತ್ತು. ಇದನ್ನು ಮೊಹಮ್ಮದ್‌ ಇಮ್ರಾನ್‌ ಕಾಜ್ಮಿ ಅವರು ಲೈಕ್‌ ಮಾಡಿದ್ದರು. ಆದರೆ, ಇದೇ ಕಾರಣಕ್ಕೆ ಅವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಾಗಿತ್ತು.

SCROLL FOR NEXT