ಆರ್ ಎಸ್ ಎಸ್ ಮುಖಂಡ ಆರ್ ಹರಿ 
ದೇಶ

ಕೇರಳ: ಹಿರಿಯ RSS ನಾಯಕ, ವಿಚಾರವಾದಿ ಆರ್ ಹರಿ ನಿಧನ

ಹಿರಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕ ಮತ್ತು ಸಂಘಟನೆಯ ಮಾಜಿ ಬೌದ್ಧಿಕ ಪ್ರಮುಖ ಆರ್ ಹರಿ ಅವರು ನಿಧನರಾಗಿದ್ದು ಅವರಿಗೆ 93 ವರ್ಷ ವಯಸ್ಸಾಗಿತ್ತು.

ಕೊಚ್ಚಿ: ಹಿರಿಯ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ನಾಯಕ ಮತ್ತು ಸಂಘಟನೆಯ ಮಾಜಿ ಬೌದ್ಧಿಕ ಪ್ರಮುಖ ಆರ್ ಹರಿ ಅವರು ನಿಧನರಾಗಿದ್ದು ಅವರಿಗೆ 93 ವರ್ಷ ವಯಸ್ಸಾಗಿತ್ತು.

ವಯೋಸಹಜ ಕಾಯಿಲೆಗಳಿಂದ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಹರಿ ಅವರು ನಿಧನರಾದರು ಎಂದು ಆರ್‌ಎಸ್‌ಎಸ್ ಮೂಲಗಳು ತಿಳಿಸಿವೆ. 93 ವರ್ಷ ವಯಸ್ಸಿನ ಹರಿ ಅವರು ಆರ್‌ಎಸ್‌ಎಸ್ ಪ್ರಚಾರಕ ಅವರು ಸಿದ್ಧಾಂತವಾದಿ, ಸಮೃದ್ಧ ಲೇಖಕ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದರು. ಸಂಘದ ಕಾರ್ಯಕರ್ತರಲ್ಲಿ ಹರಿ 'ಈಟ್ಟನ್' (ಹಿರಿಯ ಸಹೋದರ) ಅಥವಾ ಹರಿಜಿ ಎಂದೇ ಜನಪ್ರಿಯರಾಗಿದ್ದರು. 

ಹರಿ ಅವರು ಆರ್‌ಎಸ್‌ಎಸ್‌ನಲ್ಲಿ ಉನ್ನತ ನಾಯಕತ್ವದ ಸ್ಥಾನವನ್ನು ಪಡೆದ ಕೇರಳ ರಾಜ್ಯದಿಂದ ಮೊದಲ ಪ್ರಚಾರಕರಾಗಿದ್ದರು. ಕೇರದಳ ಎರ್ನಾಕುಲಂ ಜಿಲ್ಲೆಯವರಾದ ಹರಿ ಅವರು ತಮ್ಮ ಕಾಲೇಜು ದಿನಗಳಿಂದಲೂ ಆರ್‌ಎಸ್‌ಎಸ್ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವೀಧರರಾದ ಅವರು ಅಂತಿಮವಾಗಿ ಪೂರ್ಣ ಸಮಯದ ಸಂಘದ ಕಾರ್ಯಕರ್ತರಾದರು. ಅವರು ಪ್ರಮುಖ ಸಂಘದ ಪತ್ರಿಕೆ ಕುರುಕ್ಷೇತ್ರದ ಪ್ರಕಟಣೆಯ ಮುಖ್ಯಸ್ಥರಾಗಿದ್ದರು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!