ಮಿಥಾಲಿ ರಾಯ್ 
ದೇಶ

ಪಶ್ಚಿಮ ಬಂಗಾಳ: ಧುಪ್ಗುರಿ ಉಪಚುನಾವಣೆಗೂ ಮುನ್ನ ಟಿಎಂಸಿಗೆ ಆಘಾತ, ಬಿಜೆಪಿ ಸೇರಿದ ಮಾಜಿ ಶಾಸಕಿ

ಪಶ್ಚಿಮ ಬಂಗಾಳದ ಧುಪ್ಗುರಿ ಕ್ಷೇತ್ರದ ಉಪಚುನಾವಣೆಗೂ ಮುನ್ನ ಟಿಎಂಸಿ ಭಾರೀ ಹಿನ್ನಡೆ ಅನುಭವಿಸಿದೆ. ಉಪಚುನಾವಣೆಗೆ ಎರಡು ದಿನ ಇರುವಾಗಲೇ ಮಾಜಿ ಶಾಸಕಿ ಮಿಥಾಲಿ ರಾಯ್ ಬಿಜೆಪಿ ಸೇರಿದ್ದಾರೆ.

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಧುಪ್ಗುರಿ ಕ್ಷೇತ್ರದ ಉಪಚುನಾವಣೆಗೂ ಮುನ್ನ ಟಿಎಂಸಿ ಭಾರೀ ಹಿನ್ನಡೆ ಅನುಭವಿಸಿದೆ. ಉಪಚುನಾವಣೆಗೆ ಎರಡು ದಿನ ಇರುವಾಗಲೇ ಮಾಜಿ ಶಾಸಕಿ ಮಿಥಾಲಿ ರಾಯ್ ಬಿಜೆಪಿ ಸೇರಿದ್ದಾರೆ. 

ಮಿಥಾಲಿ ರಾಯ್ 2016ರಲ್ಲಿ ಟಿಎಂಸಿ ಟಿಕೆಟ್‌ನಲ್ಲಿ ಧುಪ್ಗುರಿ ಕ್ಷೇತ್ರದಿಂದ ಗೆದ್ದಿದ್ದರು. ಆದರೆ, 2021ರಲ್ಲಿ ಬಿಜೆಪಿಯ ಬಿಷ್ಣುಪಾದ್ ರಾಯ್ ವಿರುದ್ಧ ಮಿಥಾಲಿ ರಾಯ್ ಸೋಲನುಭವಿಸಬೇಕಾಯಿತು.

ಬಿಜೆಪಿ ಶಾಸಕ ಬಿಷ್ಣುಪಾದ್ ರಾಯ್ ಜುಲೈ 25ರಂದು ನಿಧನರಾಗಿದ್ದರು. ಈ ಕಾರಣದಿಂದಾಗಿ ಧುಪ್ಗುರಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಸೆ.5ರಂದು ಮತದಾನ ನಡೆಯಲಿದ್ದು, ಸೆ.8ರಂದು ಮತ ಎಣಿಕೆ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ್ ಮಜುಂದಾರ್, ಜಲ್ಪೈಗುರಿಯ ಬಿಜೆಪಿ ಸಂಸದ ಜಯಂತ್ ರಾಯ್, ದಬ್ಗ್ರಾಮ್ ಫುಲ್ಬರಿ ಶಾಸಕಿ ಶಿಖಾ ಚಟರ್ಜಿ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಬಾಪಿ ಗೋಸ್ವಾಮಿ ಅವರ ಸಮ್ಮುಖದಲ್ಲಿ ಮಿಥಾಲಿ ರಾಯ್ ಬಿಜೆಪಿ ಸದಸ್ಯತ್ವ ಪಡೆದರು.

ಟಿಎಂಸಿಯಲ್ಲಿದ್ದಾಗ ಕೆಲಸ ಮಾಡಲು ಸಾಧ್ಯವಾಗಲಿಲ್ಲ
ಬಿಜೆಪಿ ಸೇರಿದ ನಂತರ ಮಿಥಾಲಿ ರಾಯ್ ಅವರು 'ಟಿಎಂಸಿಯಲ್ಲಿದ್ದಾಗ ನನಗೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ನನ್ನ ಮೇಲೆ ಸಾಕಷ್ಟು ಮಾನಸಿಕ ಒತ್ತಡವಿತ್ತು. ನಾನು ಧುಪ್ಗುರಿ ಉಪಚುನಾವಣೆಯಲ್ಲಿ ಪ್ರಚಾರ ಮಾಡಲು ಬಯಸಲಿಲ್ಲ ಆದರೆ ನಾನು ಹಾಗೆ ಮಾಡುವಂತೆ ಒತ್ತಾಯಿಸಲಾಯಿತು. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಕಾರಣ ಬಿಜೆಪಿ ಸದಸ್ಯತ್ವ ಸ್ವೀಕರಿಸಿದ್ದು, ಆ ಮೂಲಕ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ನಡೆಸಿ ಜನರ ಅಗತ್ಯಗಳನ್ನು ಈಡೇರಿಸುತ್ತೇನೆ. ಮಿಥಾಲಿ ರಾಯ್ ಅವರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಇದು ಪಕ್ಷವನ್ನು ಬಲಪಡಿಸುತ್ತದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಟಿಎಂಸಿ ನಿರ್ಮಲ್ ಚಂದ್ರ ರಾಯ್ ಅವರಿಗೆ ಟಿಕೆಟ್ ನೀಡಿದೆ. ಮತ್ತೊಂದೆಡೆ, ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧರ ವಿಧವೆ ತಾಪ್ಸಿ ರಾಯ್‌ಗೆ ಬಿಜೆಪಿ ಟಿಕೆಟ್ ನೀಡಿದೆ. ಸಿಪಿಐ(ಎಂ) ಜನಪದ ಗಾಯಕ ಈಶ್ವರಚಂದ್ರ ರಾಯ್‌ಗೆ ಟಿಕೆಟ್ ನೀಡಿದ್ದು, ಕಾಂಗ್ರೆಸ್ ಸಿಪಿಐ(ಎಂ) ಅಭ್ಯರ್ಥಿಗೆ ಬೆಂಬಲ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT