ದೇಶ

ಮಳೆ ನಡುವೆ ಜಿ20 ವಿಶ್ವ ನಾಯಕರಿಂದ ರಾಜ್ ಘಾಟ್ ಗೆ ತೆರಳಿ ಮಹಾತ್ಮಾ ಗಾಂಧಿ ಸಮಾಧಿಗೆ ನಮನ

Sumana Upadhyaya

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಭಾನುವಾರ ಕೂಡ ಜಿ20 ಶೃಂಗಸಭೆ ಮುಂದುವರಿದಿದೆ.ಇಂದು ಬೆಳಗ್ಗೆಯೇ ವಿಶ್ವ ನಾಯಕರು ದೆಹಲಿಯ ರಾಜ್ ಘಾಟ್ ಗೆ ತೆರಳಿ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಿ ಹೂ ಗುಚ್ಛವಿರಿಸಿದರು.

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನೌತ್, ನೆದರ್ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ, ಸಿಂಗಾಪುರದ ಪ್ರಧಾನಿ ಲೀ ಸಿಯೆನ್ ಲೂಂಗ್ ಅವರು ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಲು ಮತ್ತು ಪುಷ್ಪಗುಚ್ಛವನ್ನು ಸಲ್ಲಿಸಲು ದೆಹಲಿಯ ರಾಜ್‌ಘಾಟ್‌ಗೆ ಆಗಮಿಸಿದರು. ಗಣ್ಯರನ್ನು ಬರಮಾಡಿಕೊಳ್ಳಲು ಪ್ರಧಾನಿ ಮೋದಿ ಆಗಮಿಸಿದ್ದರು.

ಇಂದು ದೆಹಲಿ ತೊರೆಯಲಿರುವ 20 ದೇಶಗಳ ಮುಖ್ಯಸ್ಥರು, ನಾಳೆ 7 ದೇಶಗಳ ಮುಖ್ಯಸ್ಥರು: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾದ ಎರಡು ದಿನಗಳ ಜಿ 20 ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಯುಎಸ್ ಅಧ್ಯಕ್ಷ ಜೊ ಬೈಡನ್ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಹೆಚ್ಚಿನ ರಾಷ್ಟ್ರಗಳ ಮುಖ್ಯಸ್ಥರು ಇಂದು ದೆಹಲಿಯಿಂದ ಹೊರಡಲಿದ್ದಾರೆ.

ಮೂಲಗಳ ಪ್ರಕಾರ, ಶೃಂಗಸಭೆಯ ನಂತರ ವಿದೇಶಿ ಪ್ರತಿನಿಧಿಗಳನ್ನು ಕಳುಹಿಸಿಕೊಡಲು ಕೇಂದ್ರ ಇಲಾಖೆಯ ರಾಜ್ಯಗಳ ಮಂತ್ರಿಗಳಿಗೆ ಜವಾಬ್ದಾರಿಗಳನ್ನು ವಹಿಸಿದೆ. ಈ ಸಂಬಂಧ ವಿದೇಶಾಂಗ ಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆ.

ಯುಎಇ, ಯುಎಸ್, ಬಾಂಗ್ಲಾದೇಶ, ಈಜಿಪ್ಟ್, ಚೀನಾ, ಆಸ್ಟ್ರೇಲಿಯಾ, ಯುಕೆ, ಅರ್ಜೆಂಟೀನಾ, ಇಂಡೋನೇಷ್ಯಾ, ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ಸ್, ಟರ್ಕಿ, ಜಪಾನ್, ಇಟಲಿ, ಸ್ಪೇನ್, ದಕ್ಷಿಣ ಆಫ್ರಿಕಾ, ರಿಪಬ್ಲಿಕ್ ಆಫ್ ಕೊರಿಯಾ, ಕೆನಡಾ ಮತ್ತು ಸಿಂಗಾಪುರ ರಾಷ್ಟ್ರಗಳ ನಾಯಕರು ಇಂದು ದೆಹಲಿಯಿಂದ ನಿರ್ಗಮಿಸಲಿದ್ದಾರೆ.

ಇಂದು ಬೆಳಗ್ಗೆ 10.20ರ ಸುಮಾರಿಗೆ ಅಮೇರಿಕಾ ಅಧ್ಯಕ್ಷ ಜೊ ಬೈಡನ್ ಭಾರತದಿಂದ ನಿರ್ಗಮಿಸಲಿದ್ದು, MoS ರಾಜೀವ್ ಚಂದ್ರಶೇಖರ್ ಅವರನ್ನು ಬೀಳ್ಕೊಡಲಿದ್ದಾರೆ. ಯುಕೆ ಪಿಎಂ ರಿಷಿ ಸುನಕ್ ಮಧ್ಯಾಹ್ನ ದೆಹಲಿಯಿಂದ ನಿರ್ಗಮಿಸಲಿದ್ದಾರೆ, ಅಲ್ಲಿ ಎಂಒಎಸ್ ಕೈಲಾಶ್ ಚೌಧರಿ ಅವರನ್ನು ಬೀಳ್ಕೊಡಲಿದ್ದಾರೆ.

ಅಂತೆಯೇ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಬೆಳಿಗ್ಗೆ 10.20 ರ ಸುಮಾರಿಗೆ ದೆಹಲಿಯಿಂದ ನಿರ್ಗಮಿಸಲಿದ್ದಾರೆ  ಅವರವನ್ನು ಕೇಂದ್ರ ಇಲಾಖೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಅವರನ್ನು ಬೀಳ್ಕೊಡಲಿದ್ದಾರೆ. 

ಬ್ರೆಜಿಲ್, ಆಫ್ರಿಕನ್ ಯೂನಿಯನ್, ನೈಜೀರಿಯಾ, ಸೌದಿ ಅರೇಬಿಯಾ, ಯುರೋಪಿಯನ್ ಯೂನಿಯನ್ ಮತ್ತು ಮಾರಿಷಸ್ ಸೇರಿದಂತೆ ಏಳು ದೇಶಗಳ ನಾಯಕರು ನಾಳೆ ದೆಹಲಿಯಿಂದ ನಿರ್ಗಮಿಸಲಿದ್ದಾರೆ.

SCROLL FOR NEXT