ಭಾರತೀಯ ರೈಲ್ವೆ 
ದೇಶ

ಅಪಘಾತ ತಡೆಯಲು ರೈಲುಗಳಲ್ಲಿ AI ಚಾಲಿತ ಸುರಕ್ಷತಾ ಸಾಧನ 'ಬ್ಲಿಂಕ್ ಡಿಟೆಕ್ಟಿಂಗ್' ಅಳವಡಿಕೆ

ಇತ್ತೀಚಿಗೆ ರೈಲುಗಳ ಅಪಘಾತ ಹೆಚ್ಚುತ್ತಿದ್ದು, ಭಾರತೀಯ ರೈಲ್ವೆ ತನ್ನ ರೈಲು ಕಾರ್ಯಾಚರಣೆಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುವ ಭಾಗವಾಗಿ, ಕೃತಕ ಬುದ್ಧಿಮತ್ತೆ (AI) ಆಧಾರಿತ "ರೈಲ್ವೆ ಚಾಲಕ ಸಹಾಯ ವ್ಯವಸ್ಥೆ" (RDAS) ಎಂಬ ವಿಶಿಷ್ಟ ಸಾಧನ...

ನವದೆಹಲಿ: ಇತ್ತೀಚಿಗೆ ರೈಲುಗಳ ಅಪಘಾತ ಹೆಚ್ಚುತ್ತಿದ್ದು, ಭಾರತೀಯ ರೈಲ್ವೆ ತನ್ನ ರೈಲು ಕಾರ್ಯಾಚರಣೆಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುವ ಭಾಗವಾಗಿ, ಕೃತಕ ಬುದ್ಧಿಮತ್ತೆ (AI) ಆಧಾರಿತ "ರೈಲ್ವೆ ಚಾಲಕ ಸಹಾಯ ವ್ಯವಸ್ಥೆ" (RDAS) ಅಥವಾ ಬ್ಲಿಂಕ್ ಡಿಟೆಕ್ಟಿಂಗ್ ಎಂಬ ವಿಶಿಷ್ಟ ಸಾಧನ ಅಳವಡಿಸಲು ಮುಂದಾಗಿದೆ.
 
ಈ ಸಾಧನವು ಕರ್ತವ್ಯದಲ್ಲಿರುವ ಲೋಕೋ ಪೈಲಟ್‌ಗಳ ಮಿಟುಕಿಸುವ ಕಣ್ಣುಗಳನ್ನು ಪರಿಶೀಲಿಸುತ್ತದೆ ಮತ್ತು ಅವರಿಗೆ ಎಚ್ಚರಿಕೆ ನೀಡುತ್ತದೆ. ಲೋಕೋ ಪೈಲೆಟ್‌ಗಳು ನಿದ್ದೆ ಮಂಪರಿನಲ್ಲಿ ಇದ್ದರೆ ಅಥವಾ ಅವರಿಗೆ ತೂಕಡಿಕೆ ಬಂದರೆ, ಕಣ್ಣಿನ ಚಲನೆಯನ್ನು ಗಮನಿಸುವ ಸಾಧನ ಇದಾಗಿದೆ.

ಈಶಾನ್ಯ ಫ್ರಾಂಟಿಯರ್ ರೈಲ್ವೆ(NFR) ತಜ್ಞರ ತಂಡದೊಂದಿಗೆ ಈ ಸಾಧನ ಅಭಿವೃದ್ಧಿಪಡಿಸುತ್ತಿದೆ. ಇದು ಮೇಲ್, ಎಕ್ಸ್‌ಪ್ರೆಸ್ ಮತ್ತು ಸರಕು ಸಾಗಣೆ ರೈಲುಗಳ ಲೋಕೋ ಪೈಲಟ್‌ಗಳ ಕಣ್ಣಿನ ಚಲನೆಯ ಮೇಲೆ ಗಮನ ಹರಿಸುತ್ತದೆ. ಬ್ಲಿಂಕ್ ಡಿಟೆಕ್ಷನ್ ಕಣ್ಣು ಮಿಟಿಕಿಸುವ ಆಧಾರದ ಮೇಲೆ ನಿದ್ರೆ ಮಂಪರನ್ನು ಪತ್ತೆ ಹಚ್ಚುತ್ತದೆ. ಒಂದು ವೇಳೆ ರೈಲು ಚಾಲಕ ನಿದ್ರೆ ಮಂಪರಿನಲ್ಲಿ ಇದ್ದರೆ, ಈ ಸಾಧನವು ಶಬ್ದ ಮಾಡುವ ಮೂಲಕ ಆತನನ್ನು ಎಚ್ಚರಿಸುತ್ತದೆ. ಒಂದು ವೇಳೆ ಈ ಸಾಧನ ಮಾಡುವ ಯಾವುದೇ ಶಬ್ದಕ್ಕೆ ಆತ ಪ್ರತಿಕ್ರಿಯೆ ನೀಡದಿದ್ದಾಗ, ಅದು ತನಗೆ ತಾನೇ ಅಲರ್ಟ್ ಆಗಿ ಎಮರ್ಜೆನ್ಸಿ ಬ್ರೇಕ್ ಹಾಕಿ, ಮುಂದಾಗಬಹುದಾದ ಅಪಘಾತವನ್ನು ತಪ್ಪಿಸುತ್ತದೆ.

ಈ ಬೆಳವಣಿಗೆಯನ್ನು ಖಚಿತಪಡಿಸಿದ ಎನ್‌ಜಿ ರೈಲ್ವೆಯ ಮುಖ್ಯ ವಕ್ತಾರ ಸಬ್ಯಸಾಚಿ ಅವರು, ರೈಲ್ವೆ ಮಂಡಳಿಯಿಂದ ಅದನ್ನು ಅಭಿವೃದ್ಧಿಪಡಿಸಲು ಎನ್‌ಎಫ್‌ಆರ್‌ಗೆ ಕಾರ್ಯಸೂಚಿಯನ್ನು ನೀಡಲಾಗಿದೆ ಮತ್ತು ಅದರ ಕೆಲಸಗಳು ಪ್ರಗತಿಯಲ್ಲಿವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?