ದೇಶ

ಬುಡಕಟ್ಟು ಮಹಿಳೆ ತಲೆ ಬೋಳಿಸಿದ ಪ್ರಕರಣ: ಬಿಹಾರ ಸರ್ಕಾರಕ್ಕೆ NHRC ನೋಟಿಸ್

Lingaraj Badiger

ನವದೆಹಲಿ: ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಪುರುಷರ ಗುಂಪೊಂದು ಬುಡಕಟ್ಟು ಮಹಿಳೆಯ ತಲೆ ಬೋಳಿಸಿದ್ದಾರೆ ಎಂಬ ವರದಿಗಳನ್ನು ಆಧರಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ) ಬಿಹಾರ ಸರ್ಕಾರ ಮತ್ತು ಬಿಹಾರ ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ನೀಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಮಾಧ್ಯಮಗಳ ವರದಿಯು ನಿಜವಾಗಿದ್ದರೆ, ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ವಿಚಾರ ಎಂದು ಪರಿಗಣಿಸಲಾಗುವುದು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ನೋಟಿಸ್ ನಲ್ಲಿ ಎಚ್ಚರಿಸಿದೆ.

ಸೆಪ್ಟೆಂಬರ್ 8 ರಂದು ಬಿಹಾರದ ಅರಾರಿಯಾ ಜಿಲ್ಲೆಯ ರಾಣಿಗಂಜ್ ಪ್ರದೇಶದಲ್ಲಿ ಪುರುಷರ ಗುಂಪೊಂದು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯ ತಲೆ ಬೋಳಿಸಿದ್ದಾರೆ ಎಂಬ ಮಾಧ್ಯಮ ವರದಿಯನ್ನು ಆಧರಿಸಿ, ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎನ್‌ಎಚ್‌ಆರ್‌ಸಿ ಹೇಳಿದೆ.

ಅದರಂತೆ, ವಿಸ್ತೃತ ವರದಿಯನ್ನು ಕೋರಿ ಬಿಹಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ.

ವರದಿಯು ಎಫ್‌ಐಆರ್‌ನ ಸ್ಥಿತಿ, ಸಂತ್ರಸ್ತೆಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ಥಿತಿ ಮತ್ತು ಯಾವುದಾದರೂ ಪರಿಹಾರವನ್ನು ಮಹಿಳೆಗೆ ನೀಡಿದ್ದಲ್ಲಿ ಆ ಬಗ್ಗೆ ವರದಿ ನೀಡುವಂತೆ ಬಿಹಾರ ಸರ್ಕಾರಕ್ಕೆ ಸೂಚಿಸಲಾಗಿದೆ.

SCROLL FOR NEXT