ಮುಂಬೈ: ಮರಾಠವಾಡದ ಮಹತ್ವಾಕಾಂಕ್ಷೆಯ ವಾಟರ್ ಗ್ರಿಡ್(ಜಲ ವಿದ್ಯುತ್) ಯೋಜನೆಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುವ ವಿಶ್ವಾಸ ಇದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಭಾನುವಾರ ಹೇಳಿದ್ದಾರೆ.
ಇಂದು ಮರಾಠವಾಡ ವಿಮೋಚನಾ ದಿನದ ಸ್ಮರಣಾರ್ಥ ಛತ್ರಪತಿ ಸಂಭಾಜಿನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಿಂಧೆ, ಭಾನುವಾರ 73ನೇ ವರ್ಷಕ್ಕೆ ಕಾಲಿಟ್ಟ ಪ್ರಧಾನಿ ಮೋದಿಯವರಿಗೆ ವಾಟರ್ ಗ್ರಿಡ್ ಯೋಜನೆಗೆ ಕೇಂದ್ರದ ಸಹಾಯಕ್ಕಾಗಿ ಮನವಿ ಮಾಡಿದ್ದೇವೆ ಎಂದರು.
ಮಳೆಗಾಲದಲ್ಲಿ ಹರಿದು ಹೋಗುವ ನೀರನ್ನು ಗೋದಾವರಿ ನದಿಯ ಜಲಾನಯನ ಪ್ರದೇಶಕ್ಕೆ ತಿರುಗಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮರಾಠವಾಡ ಗ್ರಿಡ್ ಯೋಜನೆಗೆ ಕೇಂದ್ರ ಸರ್ಕಾರ 15,000 ಕೋಟಿ ರೂ. ನೆರವು ನೀಡಲಿದೆ ಎಂದು ಮಹಾ ಸಿಎಂ ತಿಳಿಸಿದರು.
ಎಂಟು ಜಿಲ್ಲೆಗಳನ್ನು ಒಳಗೊಂಡಿರುವ ಮರಾಠವಾಡ ಹೈದರಾಬಾದ್ ನಿಜಾಮನ ದಬ್ಬಾಳಿಕೆಯ ಆಳ್ವಿಕೆಯಲ್ಲಿತ್ತು. ಈ ಪ್ರದೇಶವು ಸೆಪ್ಟೆಂಬರ್ 17, 1948 ರಂದು ಭಾರತದೊಂದಿಗೆ ವಿಲೀನಗೊಂಡಿತು.